ಕಾಂಗ್ರೆಸ್ ನಾಯಕರಿಗೆ ಕ್ಯಾಪ್ಟನ್ ದೇ ಚಿಂತೆ , ಅವರು ಗೆಲ್ಲಲ್ಲ, ಕ್ಯಾಪ್ಟನ್ ಆಗಲ್ಲ : ಸಚಿವ ಶ್ರೀರಾಮುಲು

1 Min Read

ಚಿತ್ರದುರ್ಗ: ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಮತ್ತೆ ಶುರು ಮಾಡಿದ್ದು, ಇವರ ಪಾದಯಾತ್ರೆ ಬಗ್ಗೆ ಸಚಿವ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ನಾಯಕರ ಪಾದಯಾತ್ರೆಯಲ್ಲಿ ಗುಂಪುಗಾರಿಕೆ ಹೆಚ್ಚಾಗಿದೆ ಎಂದಿದ್ದಾರೆ.

ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ಮಾತನಾಡಿದ್ದು, ಕಾಂಗ್ರೆಸ್ ನಾಯಕರು ಮುಂದಿನ ಎಲೆಕ್ಷನ್ ನಲ್ಲಿ ಗೆದ್ದರೇ ಯಾರು ಕ್ಯಾಪ್ಟನ್ ಆಗಬೇಕು ಎಂದು ಯೋಚನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಗೆಲ್ಲೋದು ಇಲ್ಲ, ಕ್ಯಾಪ್ಟನ್ ಆಗೋದು ಇಲ್ಲ. ಸದನದಲ್ಲಿ ಚರ್ಚೆ ಮಾಡಲು ಕೈ ನಾಯಕರು ಅವಕಾಶ ನೀಡಲಿಲ್ಲ. ಇಷ್ಟು ವರ್ಷ ಅಧಿಕಾರದಲ್ಲಿ ಇದ್ದ ವೇಳೆ ಯಾಕೆ ಮಾಡಲಿಲ್ಲ.

ಪಾದಯಾತ್ರೆ ಮಾಡುವ ಸ್ಥಿತಿ ಯಾಕೆ ಬಂದಿದೆ ಎಂದು ಯೋಚನೆ ಮಾಡಬೇಕು. 1ನೇ ಪಾದಯಾತ್ರೆ ಪೇಲ್ ಆಗಿದ್ದೀರಿ, 2 ನೇ ಪಾದಯಾತ್ರೆ ಹೊರಟಿದ್ದೀರಿ. ಈಗ ನಾನು ಮುಂದೆ, ನೀನು ಮುಂದೆ ಎಂದು ಪೈಪೋಟಿ ಮಾಡಿಕೊಂಡು ಹೊರಟಿದ್ದೀರಿ. ಯಾವುದೇ ಪರಿಸ್ಥಿತಿಯಲ್ಲಿ ಜನ BJP ಯನ್ನೇ ಅಧಿಕಾರಕ್ಕೆ ತರುವ ಕೆಲಸ ಮಾಡುತ್ತಾರೆ. ಕಳೆದ ಬಾರಿ 104 ಸ್ಥಾನ ನೀಡಿದ್ದರು, ಈ ಬಾರಿ ಸ್ಪಷ್ಟ ಬಹುಮತ ಬರುತ್ತದೆ. ಮುಂದಿನ ದಿನಗಳಲ್ಲಿ BJP ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದಿದ್ದಾರೆ.

ಇನ್ನು ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದ್ದು, ಉಕ್ರೇನ್ ನಲ್ಲಿ ಸಿಲುಕಿದ ವಿಧ್ಯಾರ್ಥಿಗಳ ಕರೆತರಲು CM ಕೇಂದ್ರದ ನಾಯಕರ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ. ನಾನು ಕೂಡಾ ಈ ಭಾಗದ ವಿಧ್ಯಾರ್ಥಿಗಳ ವಾಪಸ್ ಕರೆತರಲು ಯತ್ನಿಸುತ್ತಿದ್ದೇವೆ. ಪೋಷಕರಲ್ಲಿ ಮಕ್ಕಳ ಕುರಿತು ಆತಂಕವಿದೆ. 2-3 ವಿಮಾನಗಳು ಬಂದಿದ್ದು, ಎಲ್ಲರನ್ನೂ ಶೀಘ್ರದಲ್ಲೇ ಕರೆತರುವ ಯತ್ನ ನಡೆಯುತ್ತಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *