ಬಾಗಲಕೋಟೆ: ಮೇಕೆದಾಟು ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಮಾಡಲು ಸಜ್ಜಾಗಿದೆ. ಜನವರಿ 9 ರಂದು ಮೇಕೆದಾಟುವಿನಿಂದ ಪಾದಯಾತ್ರೆ ಕೈಗೊಂಡಿದೆ. ಆದ್ರೆ ಮೇಕೆದಾಟು ಯೋಜನೆಗೆ ಬಿಜೆಪಿ ನಾಯಕರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿದೆ.
ಇದೀಗ ಸಚಿವ ಶ್ರೀರಾಮುಲು ಮೇಕೆದಾಟು ಯೋಜನೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಕಾಲೆಳೆದಿದ್ದಾರೆ. ಇದು ಶೂಟಿಂಗ್ ಗೆ ಸೀಮಿತ ಎಂದು ವ್ಯಂಗ್ಯ ಮಾಡಿದ್ದಾರೆ.
ಮೇಕೆದಾಟು ಯೋಜನೆ ಶೂಟಿಂಗ್ ಗೆ ಸೀಮಿತವಾಗಿದೆ. ಮ್ಯಾಜಿಕ್ ಅನ್ನೋ ಕಂಪನಿಗೆ ಶೂಟಿಂಗ್ ಕೊಟ್ಟಿದ್ದರು. ಮೇಕೆದಾಟು ಯೋಜನೆಯ ಶೂಟಿಂಗ್ ನಡೆದಿದೆ ಎಂದು ಡಿಕರಶಿಗೆ ತಿರುಗೇಟು ನೀಡಿದ್ದಾರೆ.