ನವದೆಹಲಿ : ಸಚಿವ ಶ್ರೀರಾಮುಲು ಆಪ್ತ ವಲಯದಿಂದ ಬಂದ ಮಾಹಿತಿ ಪ್ರಕಾರ ಸದ್ಯಕ್ಕೆ ಸಚಿವ ಶ್ರೀರಾಮುಲು ಡಿಸಿಎಂ ಹುದ್ದೆಗಾಗಿ ಕಸರತ್ತು ನಡೆಸುತ್ತಿದ್ದಾರೆ.
ಚುನಾವಣೆಗೂ ಮುನ್ನ ಸಚಿವ ಸಂಪುಟದಲ್ಲಿ ಖಾಲಿ ಇರುವ ಸ್ಥಾನವನ್ನು ತುಂಬ ಬೇಕಿರುವ ಒತ್ತಡ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಮೇಲಿದೆ. ಹಾಗೇ ಸಚಿವಾಕಾಂಕ್ಷಿಗಳ ಪಟ್ಟಿಯೂ ಹೆಚ್ಚಾಗಿಯೇ ಇದೆ.
ಇದರ ಜೊತೆಗೆ ಸದ್ಯ ಸಚಿವ ಶ್ರೀರಾಮುಲು ಅವರಿಗೆ ಸದ್ಯಕ್ಕೆ ನೀಡಿರುವ ಸ್ಥಾನದ ಬಗ್ಗೆ ಅಷ್ಟಾಗಿ ಏನು ತೃಪ್ತಿ ಇದ್ದಂತೆ ಇಲ್ಲ. ಕಳೆದ ಬಾರಿಯೇ ಡಿಸಿಎಂ ಹುದ್ದೆ ಮೇಲೆ ಕಣ್ಣು ಇಟ್ಟಿದ್ದರು. ಆದ್ರೆ ಮಿಸ್ ಆಗಿದೆ. ಈ ಬಾರಿ ಮಿಸ್ಸ್ ಆಗದೆ ಇರುವಂತೆ ಗಮನ ಹರಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ. ಹೀಗಾಗಿಯೇ ನೇರ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಈ ಬಾರಿ ಕಡೆಯದಾಗಿ ಸಂಪುಟ ಪುನಾರಾರಚನೆಯಾಗಲಿದೆ. ಸಿಎಂ ಬೊಮ್ಮಾಯಿ ಅವರು ಕೂಡ ದೆಹಲಿ ಭೇಟಿ ಕೊಡಲಿದ್ದಾರೆ. ಹೀಗಾವಿ ಈ ಬಾರಿ ಕೊನೆಯದಾಗಿ ಡಿಸಿಎಂ ಹುದ್ದೆ ನೀಡಿ ಎಂದು ಹೈಕಮಾಂಡ್ ನಾಯಕರು ಮತ್ತು ಆಪ್ತರ ಮೂಲಕ ಬಸವರಾಜ್ ಬೊಮ್ಮಾಯಿ ಅವರ ಮೇಲೆ ಪ್ರಭಾವ ಬೀರಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.