ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 26 : ಗೋನೂರು ಸಮೀಪವಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿನ ನಿರಾಶ್ರಿತರಿಗೆ ಸಿಹಿ ಹಾಗೂ ಹಣ್ಣುಹಂಪಲು ವಿತರಿಸುವ ಮೂಲಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿರವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಎಸ್.ಜಿ. ಕಲ್ಯಾಣ ಮಂಟಪ ಮಾಲೀಕರಾದ ಶ್ರೀಮತಿ ಶಕುಂತಲಮ್ಮ, ಗೋವಿಂದರೆಡ್ಡಿ ದಂಪತಿಗಳು ನಿರಾಶ್ರಿತರಿಗೆ ಸಿಹಿ ವಿತರಿಸಿದರು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಸನ್ನಕುಮಾರ್ ಕೆ.ಜಿ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಡಿ.ಟಿ. ರಾಜೇಂದ್ರರೆಡ್ಡಿ, ಎಂ.ಪಿ.ಮಂಜುನಾಥರೆಡ್ಡಿ, ಜಿ.ಹೆಚ್.ವಿಜಯಕುಮಾರ್‍ರೆಡ್ಡಿ, ನ್ಯಾಯವಾದಿ ಸಂಪತ್‍ಕುಮಾರ್, ಎಂ.ಎಸ್.ಗಿರೀಶ್, ಕೆ.ಆರ್.ವೆಂಕಟೇಶ್‍ರೆಡ್ಡಿ, ಅಶ್ವಥನಾರಾಯಣರೆಡ್ಡಿ, ಕೆ.ಟಿ.ಅವಿನಾಶ್‍ರೆಡ್ಡಿ, ಕೆ.ಬಿ.ಸುನೀಲ್‍ಕುಮಾರ್‍ರೆಡ್ಡಿ, ಬಿ.ಎ.ವೆಂಕಟಶಿವರೆಡ್ಡಿ ಹಾಗೂ ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಮಹದೇವಯ್ಯ ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






