ಬೆಂಗಳೂರು: ಕುಮಾರಸ್ವಾಮಿ ಅವರು ಬಿಜೆಪಿ ಪರ ಆಗಾಗ ಬ್ಯಾಟ್ ಬೀಸುತ್ತ ಇದ್ದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಕ ಅನ್ನೋ ಮಾತುಗಳು ಈ ಮೂಲಕ ಕೇಳಿ ಬರುತ್ತಿತ್ತು. ಆದರೆ ಇತ್ತೀಚೆಗೆ ಕುಮಾರಸ್ವಾಮಿ ಅವರು ನಾನ್ಯಾಕೆ ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಆಗಿ ಮಾತಾಡಿದ್ದು ಗೊತ್ತಾ ಎಂಬ ಬಗ್ಗೆ ಮಾತನಾಡಿದ್ದರು.
ಇದೀಗ ಕುಮಾರಸ್ವಾಮಿ ಅವರ ಬಗ್ಗೆ ಸಚಿವ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ. ಕುಮಾರಸ್ವಾಮಿ ಅವರು ಯಾವಾಗ ಯಾರ ಪರ ಬ್ಯಾಟಿಂಗ್ ಮಾಡ್ತಾರೊ ಗೊತ್ತಿಲ್ಲ. ಕುಮಾರಸ್ವಾಮಿ ಅವರ ಬ್ಯಾಟಿಂಗ್ ಹೇಗಿರುತ್ತೆ ಅಂದ್ರೆ ಹೆಂಗೆ ತಿರುಗಿ ಬೇಕಾದ್ರುಹ ಬ್ಯಾಟಿಂಗ್ ಮಾಡ್ತಾರೆ. ಉಲ್ಟಾ ತಿರುಗಿ ಬೇಕಾದ್ರೂ ಬ್ಯಾಟಿಂಗ್ ಮಾಡ್ತಾರೆ. ಅವರು ಬ್ಯಾಟಿಂಗ್ ಮಾಡಿದಾಗೆಲ್ಲಾ ಬಹಳ ಹಿಟ್ ವಿಕೆಟ್ ಆಗಿದೆ.
ಅವರು ಏನೋ ಮಾಡಲು ಹೋಗಿ ಇನ್ನೇನೋ ಆಗುತ್ತೆ. ಕುಮಾರಣ್ಣಂಗೆ ನಾನು ಹೇಳೋದು ಹಿಟ್ ವಿಕೆಟ್ ಆಗೋಗುತ್ತೆ, ದಯವಿಟ್ಟು ಇದೆಲ್ಲ ಮಾಡಬೇಡಿ ಎಂದಿದ್ದೀನಿ. 2006ರಲ್ಲಿ ನಮ್ಮ ಜೊತೆ ನಿಂತು ಸರ್ಕಾರ ರಚಬೆ ಮಾಡಿದ್ರು. ಆ ಬಳಿಕ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ರು. ಆಡುಮುಟ್ಟದ ಸೊಪ್ಪಿಲ್ಲ ಜೆಡಿಎಸ್ ಮುಟ್ಟದ ಪಕ್ಷವಿಲ್ಲ ಎಂದು ಅಣಕವಾಡಿದ್ದಾರೆ