ತುಮಕೂರು: ವಡೇರಹಳ್ಳಿ ಅಂತ ಹೇಳಿ ದೊಡ್ಡಬಳ್ಳಾಪುರದ ಬಾರ್ಡರ್ ನಲ್ಲಿದೆ. ನಮಗೆ ಈ ಹಿಂದೆ 5 ಸಾವಿರ ಹೆಕ್ಟೇರ್ ನಲ್ಲಿ, ಭೈರಗೊಂಡ್ಲು ಅಂತ ಒಂದು ಊರು ಇದೆ. ಅಲ್ಲಿ 2,500 ಹೆಕ್ಟೇರ್, ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ 2,500 ಹೆಕ್ಟೇರ್. ಒಟ್ಟು 5 ಸಾವಿರ ಹೆಕ್ಟೇರ್ ಅನ್ನು ಅಕ್ವೈರ್ ಮಾಡಬೇಕು ಅಂತ ಒರಿಜಿನಲ್ ಪ್ಲ್ಯಾನ್ ಇತ್ತು ಎಂದು ತುಮಕೂರಿನ ನೀರಿನ ಸಮಸ್ಯೆ ಬಗ್ಗೆ ಮಾತನ್ನಾಡಿದ್ದಾರೆ.
ಆ ಪ್ಲ್ಯಾನ್ ಮಾಡಿದಾಗ ಹಿಂದಿನ ಸರ್ಕಾರದವರು, ನಮ್ಮ ಮಾದುಸ್ವಾಮಿ ಅವರು ಕೂಡ ಇರಿಗೇಷನ್ ಹಾಗೂ ಜಿಲ್ಲಾ ಮಂತ್ರಿಯಾಗಿದ್ದರು. ಆ ಸಂದರ್ಭದಲ್ಲಿ ಬದಲಾಯಿಸಿ, ಇಲ್ಲಿ ಬಫರ್ ಡ್ಯಾಮ್ ಬೇಡ, ಮುಂದೆ ದೊಡ್ಡಬಳ್ಳಾಪುರದ ಕ್ಷೇತ್ರದಲ್ಲಿ ಎರಡ್ಮೂರು ಕಡೆ ಮಾಡೋಣಾ ಒಂದೇ ಕಡೆ ಬೇಡ ಅಂತ ತೀರ್ಮಾನ ಮಾಡಿದರು. ಆಮೇಲೆ ನಮ್ಮ ಸರ್ಕಾರ ಬಂದ್ಮೇಲೆ ನಾವೂ ಅದನ್ನ ರಿವರ್ಸ್ ಮಾಡಿ ಅಂದ್ರೆ ಒರಿಜಿನಲ್ ಪ್ಲ್ಯಾನ್ ಏನಿದೆಯೋ ಹಾಗೇ ಮಾಡೋಣಾ ಅಂತ ಮಾಡೋದಕ್ಕೆ ತೀರ್ಮಾನ ಮಾಡಿದೆವು.
ಅಲ್ಲಿ ಭೈರಗೊಂಡ್ಲು ಭಾಗದ ರೈತರು ಇಲ್ಲಿ ಬೇಡ, ನಮ್ಮ ಜಮೀನೆಲ್ಲಾ ಹೊರಟೋಗುತ್ತೆ ಬೇಡ ಅಂದ್ರು. ನಾನು ಅವರ ಜೊತೆಗೆ ಏಳೆಂಟು ಮೀಟಿಂಗ್ ಮಾಡಿದ್ದೀವಿ. ಆದ್ರೂ ರೈತರು ಆಗೋದೆ ಇಲ್ಲ ಅಂತಾನೇ ಹೇಳಿದ್ರು. ಹೀಗಾಗಿ ನಾವೂ ಅದನ್ನ ಡ್ರಾಪ್ ಮಾಡಿದೆವು. ಆದರೆ ಎಲ್ಲಾದರೂ ಒಂದು ಕಡೆ ಬಫರ್ ಮಾಡ್ಲೇಬೇಕಲ್ವಾ ಅದಕ್ಕೆ ಎರಡ್ಮೂರು ಕಡರ ಮಾಡೋದು ಅಂತ ಏನು ತೀರ್ಮಾನ ಮಾಡಿದ್ದಾರೆ, ಅದರಲ್ಲಿ ವಡೇರಹಳ್ಳಿ ಎಂಬುದು ಬಾರ್ಡರ್ ಇದೆ. ಅದಕ್ಕೆ ಒಂದೂವರೆ ಟಿಎಂಸಿ ನೀರನ್ನ ಶೇಖರಣೆ ಮಾಡೋದಕ್ಕೆ ತೀರ್ಮಾನ ಮಾಡಲಾಗಿದೆ. ಬಜೆಟ್ ನಲ್ಲೂ ಅದಕ್ಕೆ ಅನುದಾನ ನೀಡಿದ್ದಾರೆ ಎಂಬ ಮಾಹಿತಿಯನ್ನು ನೀಡಿದರು.






