ಮಂಡ್ಯ: ಸದ್ಯ ರಾಜ್ಯದಲ್ಲಿ ಕೊರೊನಾ ಹೆಚ್ಚಳದ ಹಿನ್ನೆಲೆ ವೀಕೆಂಡ್ ಕರ್ಫ್ಯೂ ಹೇರಿದ್ದು, ನೈಟ್ ಕರ್ಫ್ಯೂ ಮುಂದುವರೆಸಿದ್ದಾರೆ. ಆದ್ರೆ ಜನ ನಿಯಮ ಪಾಲಿಸದೆ ಹೋದಲ್ಲಿ ಸಂಪೂರ್ಣ ಲಾಕ್ಡೌನ್ ಫಿಕ್ಸ್ ಎಂದು ಕ್ರೀಡಾ ಸಚಿವ ನಾರಾಯಣ ಗೌಡ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಜನರು ಸಾಧ್ಯವಾದಷ್ಟರಮಟ್ಟಿಗೆ ಕೊರೊನಾ ಮಾರ್ಗಸೂಚಿಯನ್ನ ಅನುಸರಿಸಬೇಕು. ಕೊರೊನಾ ದಿನದಿಂದ ದಿನಕ್ಲೆ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಸರ್ಕಾರ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ ಜನ ಕೋವಿಡ್ ನಿಯಮವನ್ನ ಫಾಲೋ ಮಾಡಬೇಕಾಗುತ್ತದೆ.
ಇದಕ್ಕೆ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅನಗತ್ಯ ಪ್ರಯಾಣ ಮಾಡುವುದನ್ನ ತಪ್ಪಿಸಬೇಕು. ಕೊರೊನಾ ನಿಯಮಗಳನ್ನ ಪಾಲನೆ ಮಾಡದೆ ಹೋದಲ್ಲಿ ಲಾಕ್ಡೌನ್ ಮಾಡಬೇಕಾಗುತ್ತದೆ ಎಂದಿದ್ದಾರೆ.