ಈಶ್ಚರಪ್ಪ ಎಲ್ಲಾದಕ್ಕೂ ನಾನೇ ಕಾರಣ ಅಂತಾನೆ : ಡಿಕೆಶಿ ಗರಂ

1 Min Read

ಬೆಂಗಳೂರು: ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷನ ಬರ್ಬರ ಹತ್ಯೆಯಾಗಿದೆ. ಈ ಸಂಬಂಧ ಇದಕ್ಕೆಲ್ಲಾ ಡಿಕೆ ಶಿವಕುಮಾರ್ ನೀಡಿದ ಪ್ರಚೋದನಕಾರಿ ಹೇಳಿಕೆಯೇ ಕಾರಣ ಎಂದು ಸಚಿವ ಕೆ ಎಸ್ ಈಶ್ವರಪ್ಪ ಆರೋಪಿಸಿದ್ದಾರೆ. ಅವರು ನೀಡಿದ ಹೇಳಿಕೆಯಿಂದ ಪ್ರಚೋದನೆ ಪಡೆದಯ ಮುಸಲ್ಮಾನರು ಈ ಕೊಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಈ ಆರೋಪಕ್ಕೆ ತಿರುಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮೊದಲು ಕೆ ಎಸ್ ಈಶ್ವರಪ್ಪ ವಿರುದ್ಧ ಕೇಸ್ ದಾಖಲಿಸಬೇಕು. ದೇಶದ್ರೋಹಿ‌ ಹೇಳಿಕೆ ಕೊಟ್ಟ ಅವನ‌ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಈಶ್ವರಪ್ಪ ಎಲ್ಲಾದಕ್ಕೂ ನಾನೇ ಕಾರಣ ಅಂತ ಹೇಳ್ತಾನೆ. ಆತ ದೇಶದ್ರೋಹ ಮಾಡಿ‌ ಇಡೀ ದೇಶಕ್ಕೆ ಬೆಂಕಿ ಹಚ್ಚಿದ್ದಾನೆ.

ಅವರ ಪಕ್ಷದವರು ಅವನನ್ನ ರಕ್ಷಣೆ ಮಾಡ್ತಾನೆ ಇದ್ದಾರೆ. ಇನ್ನು ಎಷ್ಟು ದಿನ ಅವನನ್ನ ಈ ಸರ್ಕಾರ ರಕ್ಷಣೆ ಮಾಡುತ್ತೋ. ಅಲ್ಲಿವರೆಗೂ ಈ ರಾಜ್ಯದಲ್ಲಿ ಅಶಾಂತಿ ಇರುತ್ತೆ. ಅವನಿಗೆ ಯಾವ ವಿಚಾರವೂ ಗೊತ್ತಿಲ್ಲ. ನಾನು ಈ ಘಟನೆ ಖಂಡಿಸ್ತೀನಿ. ಯಾರೇ ತಪ್ಪು ಮಾಡಿದ್ರು ತಪ್ಪೆ. ಕುಟುಂಬದವರಿಗೆ ನ್ಯಾಯ ಸಿಗಬೇಕು. ಈಶ್ವರಪ್ಪ ದೇಶದ್ರೋಹಿ ಹೇಳಿಕೆ ಕೊಟ್ಟು ಬೆಂಕಿ ಇಟ್ಟು ಬಿಟ್ಟಿದ್ದಾನೆ.

ಈಶ್ವರಪ್ಪ ಹರಕು ಬಾಯಿ ಅಂತ ಗೊತ್ತಿದೆ. ಆತನ ನಾಲಿಗೆಗೂ ಮೆದುಲಿಗೂ ಕನೆಕ್ಷನ್ ಇಲ್ಲ. ಕೊಲೆ ನಡೆದಿದೆ ಸರ್ಕಾರ ಆರೋಪಿಗಳನ್ನ ಬಂಧಿಸಬೇಕು. ಕೊಲೆಯನ್ನ ನಾನು ಖಂಡಿಸ್ತೀನಿ, ನಮ್ಮ ಪಕ್ಷವೂ ಖಂಡಿಸುತ್ತೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *