ಬೆಂಗಳೂರು: ನಿನ್ನೆ ಶಿವಮೊಗ್ಗದಲ್ಲಿ ಭಜರಂಗದಳದ ಹರ್ಷನ ಕೊಲೆಯಾಗಿದೆ. ಈ ಕೊಲೆಯನ್ನ ಮುಸಲ್ಮಾನ ಗೂಂಡಾಗಳೇ ಮಾಡಿದ್ದಾರೆಂದು ಸಚಿವ ಈಶ್ವರಪ್ಪ ನೇರ ಆರೋಪ ಮಾಡಿದ್ದರು. ಈ ಆರೋಪಕ್ಕೆ ವಿರೋಧ ಪಕ್ಷಗಳಿಂದ ಟೀಕೆ ವ್ಯಕ್ತವಾಗಿತ್ತು. ಈ ಬೆನ್ನಲ್ಲೆರ ಇದೀಗ ಮತ್ತೆ ಸಚಿವ ಈಶ್ವರಪ್ಪ ಸಮರ್ಥನೆ ಮಾಡಿಕೊಂಡಿದ್ದಾರೆ.
ಹೇಳಿಕೆ ಸಮರ್ಥಿಸಿಕೊಂಡಿರುವ ಈಶ್ವರಪ್ಪ, ಈಗ ಅರೆಸ್ಟ್ ಆಗಿರೋರೆಲ್ಲಾ ಮುಸಲ್ಮಾನರೇ ತಾನೇ ಎಂದು ಪ್ರಶ್ನಿಸಿದ್ದಾರೆ. ನನ್ನ ಕಾರ್ಯಕರ್ತ ಹರ್ಷನ ಕೊಲೆಯಾಗಿದೆ. ಈ ಸಂಬಂಧ ಎಸ್ಪಿ ಅವರ ಹತ್ರ ಮಾಹಿತಿ ಪಡೆದಿದ್ದೆ. ಸುತ್ತಮುತ್ತಲಿನ ಜನ ಕಾಲ್ ಮಾಡಿ ಹೇಳಿದ್ರು ಮುಸಲ್ಮಾನ ಗೂಂಡಾಗಳು ಮಾಡಿದ್ದಾರೆಂದು ನಾನು ಕೂಎ ಅದನ್ನೇ ಹೇಳಿದ್ದೆ. ಆದ್ರೆ ಕಾಂಗ್ರೆಸ್ ಹರಿಪ್ರಸಾದ್ ಅವರು ಕೇಳಿದ್ರು ಇವರಿಗೆ ಹೇಗೆ ಗೊತ್ತಾಯ್ತು ಅಂತ.
ಹರಿಪ್ರಸಾದ್ ಅವರು ಈಗ್ಲಾದ್ರು ಒಪ್ಪಿಕೊಳ್ತಾರಾ. ಮುಸಲ್ಮಾನರೇ ಈ ರೀತಿ ಮಾಡಿದ್ದು ಅಂತ. ಎಸ್ಪಿನೇ ಹೇಳಿದ್ರು ಮುಸಲ್ಮಾರು ಹೊಡೆದೋಗಿದ್ರು. ಈಗ ಕನ್ಫರ್ಮ್ ಆಯ್ತು. ಗೃಹ ಸಚಿವರು ಹೇಳಿದ್ದಾರೆ. ನಾನು ಮೊದಲು ಹೇಳಿದ್ದನ್ನ ಹೇಗೆ ಹೇಳಿದ್ರು ಅಂದ್ರೆ ನಂಗೆ ಮಾಹಿತಿ ಬಂದಿದೆ ಹೇಳಿದೆ.
ಮುಸಲ್ಮಾನರನ್ನ ಅರೆಸ್ಟ್ ಮಾಡಲಾಗಿದೆ. ವಿಚಾರಣೆ ನಡೆಸಿದಾಗ ಏನು ಷಡ್ಯಂತ್ರ ನಡೆದಿದೆ ಎಂದು ಗೊತ್ತಾಗುತ್ತೆ. ರಾಷ್ಟ್ರೀಯ ತನಿಖಾ ದಳದಿಂದ ತನಿಖೆಯಾಗಬೇಕೆಂದು ಆಗ್ರಹಿಸಲಾಗಿದೆ. ಬಿಜೆಪಿಗೆ ಕೆಟ್ಟ ಹೆಸರು ಬರಲೆಂಬ ಷಡ್ಯಂತ್ರ ನಡೆಯುತ್ತಿದೆ ಎಂದು ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.