ಭಾರೀ ಬದಲಾವಣೆಯ ಸುಳಿವು ಕೊಟ್ರು ಸಚಿವ ಕೆ.ಎನ್.ರಾಜಣ್ಣ..!

1 Min Read

ಬೆಂಗಳೂರು: ಆಗಸ್ಟ್ – ಸೆಪ್ಟೆಂಬರ್ ನಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು ಸಚಿವ ಕೆ.ಎನ್.ರಾಜಣ್ಣ ಭವಿಷ್ಯವನ್ನ ನುಡಿದಿದ್ದಾರೆ. ಇದು ಕಾಂಗ್ರೆಸ್ ದೊಡ್ಡ ಸಂಕಲನವನ್ನೇ ಸೃಷ್ಟಿ ಮಾಡಿದೆ. ಆಶ್ಚರ್ಯಕರ ಬದಲಾವಣೆಯಾಗಲಿದೆ. ಈಗ ತಣ್ಣಗೆ ಗಾಳಿ ಬೀಸುತ್ತಾ ಇದೆ. ಸೆಪ್ಟೆಂಬರ್ ಕಳಿಲಿ ನೋಡಿವ್ರಂತೆ. ರಾಜ್ಯ ರಾಜಕೀಯದಲ್ಲಿಯೇ ಬದಲಾವಣೆ ಇದು ಎಂದು ಶಾಕಿಂಗ್ ನ್ಯೂಸ್ ಹೇಳಿದ್ದಾರೆ.

ಇದೇ ವೇಳೆ ಪವರ್ ಸೆಂಟರ್ ಬಗ್ಗೆ ಮಾತನಾಡಿ, ಕಾಂಗ್ರೆಸ್ ನಲ್ಲಿ ಪವರ್ ಸೆಂಟರ್ ಜಾಸ್ತಿಯಾಗಿದೆ. ಮೊದಲು 13-18 ಅಷ್ಟೇ ಒವರ್ ಸೆಂಟರ್ ಇದ್ದವು. ಈಗ ಪವರ್ ಸೆಂಟರ್ ಗಳು ಜಾಸ್ತಿಯಾಗಿವೆ. ಪವರ್ ಸೆಂಟರ್ ಗಳು ಜಾಸ್ತಿಯಿದ್ದಾಗ ಜಂಜಾಟಗಳು ಜಾಸ್ತಿಯಾಗುತ್ತವೆ. ಆ ಹಿನ್ನೆಲೆಯಲ್ಲಿ ಆ ಪರಿಸ್ಥಿತಿಗೆ ಅನುಗುಣವಾಗಿ ಅವರು ಸರ್ಕಾರವನ್ನು, ಪಕ್ಷವನ್ನು ನಡೆಸಬೇಕಾಗುತ್ತದೆ ಎಂದಿದ್ದಾರೆ.

ಈ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಭಾರೀ ಬದಲಾವಣೆ ಅಂತ ಏನು ಅನ್ನಿಸ್ತಾ ಇಲ್ಲ.‌ ಬದಲಾವಣೆಯಾಗುತ್ತೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರ ಸದ್ಯ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಯಾಕಂದ್ರೆ ರಾಜಣ್ಣ ಹೇಳಿದ ಹೇಳಿಕೆ ಆ ರೀತಿಯಾಗಿದೆ. ಕೆ.ಎನ್.ರಾಜಣ್ಣ ಇತ್ತೀಚೆಗೆ ಸ್ವಲ್ಪ ಸೈಲೆಂಟ್ ಆಗಿದ್ದರು. ಈಗ ಮತ್ತೆ ಬಾಂಬ್ ಒಂದನ್ನ ಹಾಕಿದ್ದಾರೆ. ಸೆಪ್ಟೆಂಬರ್ ನಲ್ಲಿ ಬಾರೀ ಬದಲಾವಣೆ ಆಗುತ್ತೆ ಎಂಬ ಹೇಳಿಕೆಯೇ ಕುತೂಹಲಕ್ಕೆ ಕಾರಣವಾಗಿದೆ. ಮಂತ್ರಿ ಬದಲಾವಣೆಯ, ಡಿಸಿಎಂ ಬದಲಾವಣೆಯಾ ಅಥವಾ ಸಚಿವ ಸಂಪುಟದಲ್ಲಿ ಬದಲಾವಣೆ ಏನಾದ್ರೂ ಆಗುತ್ತಾ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಒಟ್ಟಾರೆ ರಾಜಣ್ಣ ಹೇಳಿಕೆ ಈಗ ಎಲ್ಲೆಲ್ಲೂ ಚರ್ಚೆಗೆ ಗ್ತಾಸವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *