ಚಿತ್ರದುರ್ಗ, (ಫೆ.10) : ಕೇಸರಿ ಶಾಲುಗಳನ್ನು ನಾವು ಅಯೋಧ್ಯೆಯ ಶ್ರೀರಾಮನ ಫ್ಯಾಕ್ಟರಿಗೆ ಆರ್ಡರ್ ಕೊಟ್ಟಿದ್ವಿ, ಅಲ್ಲಿಂದ ಹನುಮಾನ್ ಟ್ರಾನ್ಸ್ ಪೋರ್ಟ್ ಮುಖಾಂತರ ಕರ್ನಾಟಕ ರಾಜ್ಯಕ್ಕೆ ತರಿಸಿದ್ದೇವೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸೂರತ್ ನಿಂದ ಕೇಸರಿ ಶಾಲು ಸಚಿವರ ಪುತ್ರ ತರಿಸಿದ್ದಾರೆಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಅಯೋಧ್ಯೆಯಿಂದ ಬಂದ ಕೇಸರಿ ಶಾಲುಗಳು ರಾಜ್ಯದ ಕೋಟಿ ಕೋಟಿ ಯುವಕರ ಹೃದಯ ತಲುಪಿದೆ. ಧರ್ಮವನ್ನು ದೇಶವನ್ನು ರಕ್ಷಣೆ ಮಾಡಲು, ದೇಶ ಭಕ್ತಿಯನ್ನು ಜಾಗೃತಿ ಮಾಡಲು ಈ ದೇಶದ ಪ್ರತಿಯೊಬ್ಬ ಪ್ರಜೆಗೂ ತಲುಪಿದೆ. ಇದು ಅವರಿಗೆ ಸಹಿಸಲು ಆಗುತ್ತಿಲ್ಲ
ಎಂದರು.
ಡಿಕೆ ಶಿವಕುಮಾರ್ ಅವರಿಗೆ ಇದೆಲ್ಲಾ ಗೊತ್ತಿಲ್ಲ. ಅವರಿಗೆ ಗೊತ್ತಿರುವುದು ಕನಕಪುರದ ಬಂಡೆ ಫ್ಯಾಕ್ಟರಿ. ಆ ಬಂಡೆಯನ್ನು ಬೇರೆ ಬೇರೆ ರಾಜ್ಯಕ್ಕೆ ಕಳಿಸುವುದು ಮಾತ್ರ ಡಿಕೆ ಬ್ರದರ್ಸ್ ಅವರಿಗೆ ಗೊತ್ತು ಎಂದು ಕಿಡಿ ಕಾರಿದರು.