ಮೈಸೂರು: ರಾಜ್ಯದಲ್ಲಿ ಹಿಜಬ್ ಮತ್ತು ಕೇಸರಿ ಶಾಲು ವಿಚಾರ ವಿವಾದ ಸೃಷ್ಟಿಸಿದೆ. ಕುಂದಾಪುರದಲ್ಲಿ ಶುರುವಾದ ಗೊಂದಲ ಇದೀಗ ರಾಜ್ಯದ ಹಲವು ಕಾಲೇಜುಗಳಿಗೂ ಹತ್ತಿದೆ. ಇದೀಗ ಈ ಬಗ್ಗೆ ಸಚಿವ ಕೆ ಎಸ್ ಈಶ್ವರಪ್ಪ ಸವಾಲು ಹಾಕಿದ್ದಾರೆ.
ಶಾಸಕಿ ಖನೀಜಾ ಫಾತಿಮಾಗೆ ಈ ವಿಚಾರದಲ್ಲಿ ಸಚಿವ ಈಶ್ವರಪ್ಪ ಅವರು ಸವಾಲು ಹಾಕಿದ್ದಾರೆ. ಧಮ್ ಇದ್ದರೆ ಮಸೀದಿಗಳಿಗೆ ಮಹಿಳೆಯರಿಗೆ ಪ್ರವೇಶ ಕೊಡಿಸಿ ನೋಡಿ. ಎಷ್ಟು ಜನ ಮಹಿಳೆಯರು ಮಸೀದಿಗೆ ಹೋಗ್ತೀರಿ ಎಂದಿದ್ದಾರೆ.
ಶಾಸಕಿ ಖನೀಜಾ ಹಿಜಾಬ್ ಧರಿಸಿಯೇ ಅಧಿವೇಶನಕ್ಕೆ ಬರ್ತೇನೆ ಎಂದು ಹೇಳಿಕೆ ನೀಡಿದ್ದರು. ಆ ವಿಚಾರಕ್ಕೆ ಹಿಜವ್ ಧರಿಸಿ ಅಧಿವೇಶನಕ್ಕಲ್ಲ, ಮಸೀದಿಗೆ ಹೋಗಿ ನೋಡೋಣಾ ಎಂದಿದ್ದಾರೆ. ಹಿಜಬ್ ನಿಷೇಧಿಸಿರುವುದು ಶಾಲೆಗೆ ಮಾತ್ರ, ಹೊರಗಡೆಯಲ್ಲ. ಹೊರಗಡೆ ಎಲ್ಲಾ ಕಡೆಗೂ ಹಿಜಬ್ ಧರಿಸಿಯೇ ಹೋಗಿ. ಯಾರು ಕೇಳುತ್ತಾರೆ. ಆದ್ರೆ ಶಾಲೆಯಲ್ಲಿ ಸಮವಸ್ತ್ರ ಧರಿಸಿಯೇ ಹೋಗಬೇಕು. ಸಮವಸ್ತ್ರ ಇರುವ ಕಾರಣವೇ ಈ ಆದೇಶ ಮಾಡಲಾಗಿದೆ.
ಇದೇ ವೇಳೆ ಕಾಂಗ್ರೆಸ್ ಬಗ್ಗೆ ಆಕ್ರೋಶಗೊಂಡಿದ್ದು, ಉಡುಪಿಯಿಂದಲೇ ಕಾಂಗ್ರೆಸ್ ಸರ್ವನಾಶವಾಗುತ್ತೆ. ಹಿಜಬ್ ವಿಚಾರದಿಂದಲೇ ಕಾಂಗ್ರೆಸ್ ಸರ್ವನಾಶವಾಗುತ್ತೆ. ಯಾಕಂದ್ರೆ ಗೋ ಹತ್ಯೆ ನಿಷೇಧವನ್ನು ಉಡುಪಿಯಿಂದಲೇ ಶುರುವಾಗಿತ್ತು ಎಂದಿದ್ದಾರೆ.