ಚಿತ್ರದುರ್ಗ. ಫೆ.22: ಇ-ಖಾತಾ ಅಭಿಯಾನ ಮತ್ತು ಸಹಾಯವಾಣಿ ಕೇಂದ್ರಕ್ಕೆ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಶನಿವಾರ ಚಾಲನೆ ನೀಡಿದರು.

ಹಿರಿಯೂರು ನಗರಸಭೆ ಆವರಣದಲ್ಲಿ ಶನಿವಾರ ಇ-ಆಸ್ತಿ ಕುರಿತು (ಪ್ರಾಪರ್ಟಿ ರಿಜಿಸ್ಟರ್ ಎ ಮತ್ತು ಪ್ರಾಪರ್ಟಿ ರಿಜಿಸ್ಟ್ ಬಿ) ತಯಾರಿಸುವ, ನಮೂನೆ-3 ಮತ್ತು ನಮೂನೆ-3ಎ ಸೃಜಿಸಲು ಅನುವಾಗುವಂತೆ ಹಿರಯೂರು ನಗರಸಭೆ ವ್ಯಾಪ್ತಿಯಲ್ಲಿ ಪ್ರಾಪರ್ಟಿ ರಿಜಿಸ್ಟರ್ –ಎ ಮತ್ತು ಬಿನಲ್ಲಿ ಆಸ್ತಿಗಳಿಗೆ ನೀಡಿರುವ ನಿರ್ದೇಶನದಂತೆ ಹಿರಿಯೂರು ನಗರಸಭೆ ವತಿಯಿಂದ ಇ-ಖಾತಾ ಅಭಿಯಾನ ಏರ್ಪಡಿಸಲಾಗಿದ್ದು, ಇ-ಖಾತಾ ಅಭಿಯಾನ ಮತ್ತು ಸಹಾಯವಾಣಿ ಕೇಂದ್ರಕ್ಕೆ ಸಚಿವರು ಚಾಲನೆ ನೀಡಿದರು.
ಹಿರಿಯೂರು ನಗರಸಭೆ ವ್ಯಾಪ್ತಿಯ ವಾರ್ಡ್ ನಂ.1, 2, 3 ಮತ್ತು 4ರಲ್ಲಿ ನಮೂನೆ-3 (ಎ-ರಿಜಿಸ್ಟರ್) ಮತ್ತು ನಮೂನೆ-3ಎ (ಬಿ-ರಿಜಿಸ್ಟರ್)ಗಳ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಅಭಿಯಾನದಲ್ಲಿ ನಗರಸಭೆ ಅಧ್ಯಕ್ಷ ಅಜಯ್ ಕುಮಾರ್, ಉಪಾಧ್ಯಕ್ಷೆ ಅಂಬಿಕಾ, ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಎಸ್.ಅನಿಲ್ ಕುಮಾರ್, ಸದಸ್ಯರಾದ ಜಿ.ಎಸ್.ತಿಪ್ಪೇಸ್ವಾಮಿ, ಎಸ್.ಶಿವರಂಜನಿ, ಚಿತ್ರಜಿತ್ ಯಾದವ್ ಸೇರಿದಂತೆ ಪೌರಾಯುಕ್ತರು ಹಾಗೂ ಕಚೇರಿ ಸಿಬ್ಬಂದಿ ಇದ್ದರು.


