ಕೋಟೆನಾಡಿನಲ್ಲಿ  ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾಡಿದ ಸಚಿವ ಚೆಲುವರಾಯಸ್ವಾಮಿ..!

suddionenews
1 Min Read

ಸುದ್ದಿಒನ್, ಚಿತ್ರದುರ್ಗ, ಆ.29 : ಆಪರೇಷನ್ ಹಸ್ತದ ವಿಚಾರ ಎಲ್ಲೆಡೆಯೂ ಸಾಕಷ್ಟು ಸದ್ದು ಮಾಡುತ್ತಿದೆ. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗೆಯೇ ಕಾಂಗ್ರೆಸ್ ನಾಯಕರು ಕೂಡ ಯಾರು ಬೇಕಾದರೂ ಪಕ್ಷಕ್ಕೆ ಬರಬಹುದು ಎಂದು ಓಪನ್ ಆಗಿಯೇ ಕರೆಯುತ್ತಿದ್ದಾರೆ. ಇದೀಗ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಕೂಡ ಇಂದು ಚಿತ್ರದುರ್ಗ ಜಿಲ್ಲೆಯಲ್ಲಿ ಅದನ್ನೇ ಉಚ್ಚರಿಸಿದ್ದಾರೆ.

ಸಚಿವ ಚೆಲುವರಾಯಸ್ವಾಮಿ ಅವರು ಮಾತನಾಡಿ, ಬಿಜೆಪಿಯ ನಾಯಕರು ಹಾಗೂ ಶಾಸಕರು ಯಾರೂ ಬೇಕಾದರೂ ಕಾಂಗ್ರೆಸ್ ಪಕ್ಷಕ್ಕೆ ಸೇರಬಹುದು. ನಮ್ಮ ಪಕ್ಷದ ಸಿದ್ದಾಂತವನ್ನು ಒಪ್ಪಿ ಯಾರೂ ಬೇಕಾದರೂ ಪಕ್ಷಕ್ಕೆ ಬರಬಹುದು. ಈಗಾಗಲೇ ನಾವೂ 136 ಶಾಸಕರಿದ್ದೀವಿ. ಸರ್ಕಾರ ಸುಭದ್ರವಾಗಿದೆ. ನಮಗೆ ಯಾವುದೇ ಭಯವಿಲ್ಲ. ನಮಗೇ ಏನು ಕೊರತೆಯಿಲ್ಲ ಎಂದಿದ್ದಾರೆ.

ಇನ್ನು ಬಿಜೆಪಿಯಲ್ಲಿ ಕಳೆದ ಮೂರು ತಿಂಗಳಿನಿಂದ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ನಾಯಕತ್ವ ಇಲ್ಲದ  ಪಕ್ಷದಲ್ಲಿ ಇರಬೇಕಾ ಅಥವಾ ಬೇಡವಾ ಎಂಬ ಗೊಂದಲದಲ್ಲಿ ಅವರಿದ್ದಾರೆ. ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಾಗ ಅವರ ಸ್ಥಿತಿ ಹೇಗಿತ್ತು ನೋಡಿದ್ದೀರಿ ಅಲ್ವಾ ಎಂದು ಅವತ್ತಿನ ಪರಿಸ್ಥಿತಿ ನೆನೆದು ವ್ಯಂಗ್ಯವಾಡಿದ್ದಾರೆ. ಇನ್ನು ಜೆಡಿಎಸ್, ಬಿಜೆಪಿಯ ಹಾಲಿ, ಮಾಜಿ ನಾಯಕರು ಬಯಸಿದರೆ ನಮ್ಮ ಪಕ್ಷಕ್ಕೆ ಧಾರಾಳವಾಗಿ ಬರಬಹುದು ಎಂದೇ ಆಹ್ವಾನ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *