ಗದಗ: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸಾಕಷ್ಟು ವಿಚಾರಗಳು ಚರ್ಚೆ ಶುರು ಮಾಡಿದೆ. ಈ ಬಗ್ಗೆ ಕೃಷಿ ಸಚಿವ ಬಿ ಸಿ ಪಾಟೀಲ್ ಮಾತನಾಡಿದ್ದು, ಏನು ಸರ್ಕಾರ ಎಲ್ಲೂ ಸೈಲೆಂಟ್ ಆಗಿ ಕುಳಿತುಕೊಂಡಿಲ್ಲ. ಸುಮ್ಮನೆ ಕೂತುಕೊಂಡಿಲ್ಲ. ಮಧ್ಯೆಪ್ರವೇಶ ಎಂದರೆ ಏನು ಲಾಠಿ ಹಿಡಿದುಕೊಂಡು ಬೀದಿಯಲ್ಲಿ ನಿಲ್ಲೋದಕ್ಕೆ ಆಗುತ್ತಾ ಸಿಎಂ. ಚೀಫ್ ಮಿನಿಸ್ಟರ್ ಏನು ಆದೇಶ ಮಾಡಬೇಕು, ಕಾನೂನುಬದ್ಧವಾಗಿ, ಕಾನೂನು ಸುವ್ಯವಸ್ಥೆ ಕಾಪಾಡೋದಕ್ಕೆ ಏನು ಕ್ರಮ ತೆಗೆದುಕೊಳ್ಳಬೇಕು ಆ ರೀತಿ ಮಾಡುತ್ತಿದೆ ಎಂದು ಕೆಂಡಾಮಂಡಲಾರಾಗಿದ್ದಾರೆ.
ಪೊಲೀಸರಿಗೆ ಆದೇಶವನ್ನು ನೀಡುತ್ತಿದ್ದಾರೆ. ಯಾರೋ ಟೀಕೆ ಮಾಡುತ್ತಾರೆಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಸ್ತೆ ಮಧ್ಯೆ ನಿಂತು ಮಾತನಾಡುವ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿಗಳು ಏನು ಕೆಲಸ ಮಾಡಬೇಕೋ ಅದನ್ನ ಚಾಚು ತಪ್ಪದೆ ಮಾಡುತ್ತಿದ್ದಾರೆ. ಸಿಎಂ ಅವರು ಮೂಕ ಬಸವಣ್ಣನೂ ಅಲ್ಲ, ಬಸವಣ್ಣನೇ ಹೌದು, ಬಸವರಾಜ್ ಬೊಮ್ನಾಯಿ ಹೌದು. ಆದ್ರೆ ಅವರ ಕರ್ತವ್ಯವನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡುತ್ತಿದ್ದಾರೆ.
ಹರಿಪ್ರಸಾದ್ ಅವರಿಗೆ ಸಿದ್ದರಾಮಯ್ಯ ಅವರಿಗೆ ಮಾಡುವುದಕ್ಕೆ ಕೆಲಸ ಇಲ್ಲ. ಅವರ ಪ್ರಶ್ನೆಗಳಿಗೆ ನಾನು ಉತ್ತರ ಕೊಡಬೇಕಾ..? ಮಾಡುವುದಕ್ಕೆ ಕೆಲಸವಿಲ್ಲದೆ ಇರುವ ಕಾರಣ ವಿನಾಕಾರಣ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ನಮಗೆ ಆದರೆ ಕೆಲಸ ಇದೆ. ಜನರಿದ್ದಾರೆ, ರಾಜ್ಯವಿದೆ, ರಾಜ್ಯ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಾವಿರುತ್ತೇವೆ. ಅವರಿಗೇನು ಬರೀ ಟೀಕೆ ಮಾಡಿಕೊಂಡು ಹೋಗಿ, ಮಾಧ್ಯಮಗಳ ವಿರುದ್ಧ ಹೇಳಿಕೆ ಕೊಡುವುದೇ ಅವರ ಹುಟ್ಟುಗುಣವಾಗಿದೆ ಎಂದು ಹರಿಹಾಯ್ದಿದ್ದಾರೆ.