ಬೆಂಗಳೂರು: ಉಡುಪಿ ಜಿಲ್ಲೆಯಲ್ಲಿ ಹಿಜಾಬ್ ಧರಿಸಿ ಬಂದಿರುವ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನ ಪ್ರಾಂಶುಪಾಲರು ಗೇಟಿನಲ್ಲೇ ನಿಲ್ಲಿಸಿದ್ದರು. ಈ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಹಿಜಾಬ್ ಅವರ ಮೂಲಭೂತ ಹಕ್ಕು ಎಂದಿದ್ದಾರೆ.
ಇದೀಗ ಆ ಬಗ್ಗೆ ಶಿಕ್ಷಣ ಸಚಿವ ನಾಗೇಶ್ ಮಾತನಾಡಿದ್ದು, ರಾಜಕೀಯ ಹಾಳು ಮಾಡಿದ್ದಾಯಿತು ಈಗ ಶಿಕ್ಷಣವನ್ನು ಹಾಳು ಮಾಡೋದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಕೆಲವೊಂದು ಪಕ್ಷ ರಾಜಕೀಯ ಮಾಡೋದಕ್ಕೆ ಹುಟ್ಟಿಕೊಂಡಿವೆ. ಅವರಿಗೆ ರಾಷ್ಟ್ರದ ಪ್ರಗತಿ, ಏಕತೆ ಬಗ್ಗೆ ಕಾಳಜಿ ಇಲ್ಲ. ಅಂತವರು ಮತಕ್ಕಾಗಿ ಯಾರಿಗೆ ಬೇಕಾದ್ರೂ ಬೆಂಬಲ ನೀಡ್ತಾರೆ.
2018ರಲ್ಲಿ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದಾಗ ಒಂದು ರೂಲ್ ಮಾಡಿದ್ರು. ಅದು ರೂಲ್ 11ರ ಅನ್ವಯ ಯೂನಿಫಾರ್ಮ್ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತಿದೆ. ಅಷ್ಟೇ ಅಲ್ಲ ಅವರು ಸ್ವತಃ ವಕೀಲರಾಗಿದ್ದವರು. ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ರಘುಪತಿ ಭಟ್ ಬಗ್ಗೆ ಏಕವಚನದಲ್ಲಿ ಮಾತಾಡ್ತಾರೆ. ಅದು ಅವರಿಗೆ ಶೋಭೆಯಲ್ಲ. ಯೂನಿಫಾರ್ಮ್ ಏನು ಬಿಜೆಪಿ ಸರ್ಕಾರ ಬಂದಾಗ ಬಂದಿದ್ದಲ್ಲ ಎಂದು ಶಿಕ್ಷಣ ಸಚಿವ ಬಿ ಸಜ ನಾಗೇಶ್ ಸಿದ್ದರಾಮಯ್ಯ ಮೇಲೆ ಆಕ್ರೋಶಗೊಂಡಿದ್ದಾರೆ.