ಬೆಂಗಳೂರು: ಭ್ರಷ್ಟಾಚಾರವನ್ನ ಸಮಾಜದಿಂದ ಸಂಪೂರ್ಣವಾಗಿ ನಿರ್ನಾಮ ಮಾಡಬೇಕು. ಅದರ ಬಗ್ಗೆ ಎರಡನೇ ಮಾತೇ ಇಲ್ಲ. ಭ್ರಷ್ಟಾಚಾರ ಒಂದು ಪಿಡುಗು. ಸಮಾಜದ ಎಲ್ಲ ಸಮಸ್ಯೆಗಳು ಭ್ರಷ್ಟಾಚಾರವೇ ಮುಖ್ಯ ಕಾರಣ. ಸಂಬಳವನ್ನು ಪಡೆದು ಅದರ ಮೇಲೆ ಎಕ್ಸ್ಟಾ ಪಡೆಯೋದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥನಾರಾಯಣ ಹೇಳಿಕೆ ನೀಡಿದ್ದಾರೆ.
ನೈತಿಕತೆ ಇಲ್ಲ, ಕಾನೂನಿನ ವಿರುದ್ಧವಾಗಿದ್ದು,ಸಮಾಜಕ್ಕೆ ವಿರುದ್ಧವಾದ್ದು. ಹಾಗಾಗಿ ಅದನ್ನ ಸಂಪೂರ್ಣವಾಗಿ ನಿರ್ನಾಮ ಮಾಡೋಕೆ. ನಮ್ಮ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಸದಾಕಾಲ ಇದನ್ನೆ ಪ್ರಸ್ತಾಪ ಮಾಡಿದ್ರು. ಆ ದಿಕ್ಕಿನಲ್ಲಿ ಸುಧಾರಣೆ ತಂದಿರುವುದು. ಡಿಜಿಟಲೀಕರಣ ಮಾಡಿರೋದು. ಆದಾಯ ತೆರಿಗೆಯಲ್ಲಿ ಆಧಾರ ಜೋಡಣೆ. ಪ್ಯಾನ್ ಕಾರ್ಡ್ ಸೀಡ್ ಮಾಡಿರೋದು ಇದೇ ಕಾರಣ.
ದೇಶದಲ್ಲಿ ಒಂದು ಸಂಸ್ಕೃತಿ ಆಗಿ ಕಾಂಗ್ರೆಸ್ ಪಕ್ಷ ಬೆಳಸಿದೆ. ಆದರ ರುಚಿಯನ್ನ ನಿರ್ನಾಮ ಮಾಡಬೇಕಾದರೆ ದೊಡ್ಡ ಸವಾಲು. ಆ ದಿಕ್ಕಿನಲ್ಲಿ ಕೆಲಸ ನಡೆಯುತ್ತಿದೆ. ಸಿಎಂ ಬೊಮ್ಮಾಯಿ ಸಹ ಕೆಂಪಣ್ಣ ಜೊತೆ ಚರ್ಚೆ ನಡೆಸಿದ್ರು. ಇದನ್ನ ಬಗೆಹರಿಸಲು ಸಹ ಸಿಎಂ ಕ್ರಮ ತೆಗೆದುಕೊಂಡಿದ್ರು. ಎಸಿಬಿಯನ್ನ ಸಂಪೂರ್ಣ ಚುರುಕು ಮಾಡಿ ದಾಳಿ ಮಾಡ್ತೀರುವುದು. ಹಿರಿಯ ಅಧಿಕಾರಗಳ ಮೇಲೆ ದಾಳಿ ಮಾಡಿರೋದು. ಭ್ರಷ್ಟಾಚಾರ ಮಟ್ಟ ಹಾಕಿ. ಭ್ರಷ್ಟಾಚಾರವನ್ನು ನಾವು ಸಹಿಸೋದಿಲ್ಲ ಎಂದಿದ್ದಾರೆ. ನೋಡಿ ಭ್ರಷ್ಟಾಚಾರ ಮುಕ್ತವಾದ ಸ್ಥಳ ಯಾವುದು ಇರಲ್ಲ. ಅದನ್ನ ಮಾಡೋಕೆ ಎಲ್ಲ ರೀತಿಯ ಕ್ರಮವಹಿಸುತ್ತೇವೆ. ಭ್ರಷ್ಟಾಚಾರ ಮುಕ್ತ ಮಾಡೋಕೆ ಸರ್ವ ಪ್ರಯತ್ನ ಮಾಡ್ತೇವೆ
ಕಾಮೆಡ್ ಕೆ ರದ್ದು ವಿಚಾರವಾಗಿ ಮಾತನಾಡಿದ್ದು, ಇದು ರದ್ದು ಅಲ್ಲ. ಖಾಸಗಿ ಕಾಲೇಜಿಗಳಿಂದನೇ ಸಲಹೆ ಬಂತು. ಸರ್ಕಾರದಲ್ಲಿಯೂ ಅದೇ ಆಲೋಚನೆ ಇತ್ತು. ಮಾತುಕತೆ ಪ್ರಾರಂಭ ಮಾಡಿದ್ದೀವಿ. ಪ್ರಾರಂಭ ಮಾಡಿ ಸೂಕ್ತವಾಗಿದ್ದಾಗ ಮಾಡ್ತೀವೆ. ಇದು ಒತ್ತಾಯ ಮಾಡಿ ಮಾಡೋದು ಎನು ಇಲ್ಲ. ಕಾಲೇಜು ಗಳಿಗೆ ಒಳ್ಳೆಯದಾಗುತ್ತೆ,ವಿಧ್ಯಾರ್ಥಿಗಳಿಗೆ ಒಳ್ಳೆಯದಾಗಿತ್ತೆ. ಶಿಕ್ಷಣ ಹೇಗೆ ಉತ್ತಮ ಮಾಡಬೇಕಾಗುತ್ತೆ. ಆ ದಿಕ್ಕಿನಲ್ಲಿ ಪ್ರಯತ್ನ ಮಾಡ್ತಾ ಇರೋದು. ಯಾರನ್ನು ನಿಯಂತ್ರಣ ಮಾಡೋಕೆ ಅಲ್ಲ. ಹೇಗೆ ಉತ್ತಮಗೊಳಿಸಿ ಸೇವೆ ನೀಡೋಕೆ ಮಾಡ್ತಾ ಇರೋದು. ಸಮಾಲೋಚನೆ ಮಾಡಿ,ಮಾತುಕತೆ ಮಾಡಿ ವಿಶ್ವಾಸಕ್ಕೆ ತೆಗೆದುಕೊಂಡು ಮಾಡ್ತೀವಿ ಎಂದಿದ್ದಾರೆ.