ಸಿದ್ದರಾಮಯ್ಯ ವಿರುದ್ಧ ಸಚಿವ ಅಶ್ವಥ್ ನಾರಾಯಣ್ ಟ್ವೀಟ್ ಮೂಲಕ ಆಕ್ರೋಶ..!

 

ಬೆಂಗಳೂರು: ಸಿದ್ದರಾಮಯ್ಯ ಕಾಲದ ಹಗರಣದ ಬಗ್ಗೆ ಉಲ್ಲೇಖಿಸಿ ಸಚಿವ ಅಶ್ವತ್ಥ್ ನಾರಾಯಣ್ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಎಸ್‌ಐ ಹಗರಣದಲ್ಲಿ ಸಚಿವ ಅಶ್ವಥ್ ನಾರಾಯಣ್ ಭಾಗಿ ಅಂತ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದರು. ಆ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಸಚಿವ ಅಶ್ವತ್ಥ್ ನಾರಾಯಣ್ ಕಿಡಿಕಾರಿದ್ದಾರೆ.

 

ಲೋಕಾಯುಕ್ತದ ಕೈ ಕಟ್ಟಿ ನೀರಿಗೆ ಬಿಟ್ಟ “ಅರ್ಕಾವತಿ ಹಗರಣದ ಪಿತಾಮಹ” ಸಿದ್ದರಾಮಯ್ಯ ಅವರ ಸುಳ್ಳುಗಳ ಸರಮಾಲೆಯನ್ನು ಕೇಳಿ, ಡಿಕೆ ಶಿವಕುಮಾರ್‌ ಅವರು ಅಹುದಹುದೆನ್ನಬಹುದೇ ವಿನಃ ನಾಡಿನ ಜನರು ನಂಬಲಾರರು. DySP ಗಣಪತಿ ಅವರ ಆತ್ಮಹತ್ಯೆಗೆ ಕಾರಣವೇನೆಂದು ಕೇಳಿದರೆ ಕಳ್ಳರಂತೆ ನುಣುಚಿಕೊಳ್ಳುವುದೇಕೆ ಸಿದ್ದರಾಮಯ್ಯ ಅವರೇ?.

 

ಕಾಂಗ್ರೆಸ್‌ ಸುಳ್ಳಿನ ಫ್ಯಾಕ್ಟರಿಯ CEO ಆಗಲು ಪೈಪೋಟಿ ನಡೆಸುತ್ತಿರುವ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಅವರು “ದಿನಕ್ಕೊಂದು ಸುಳ್ಳು” ಎಂಬ ತತ್ತ್ವಕ್ಕೆ ಮೊರೆ ಹೋಗಿದ್ದಾರೆ. ತಾವು ಬೆಳೆಸಿದ ಭ್ರಷ್ಟರನ್ನು ಬಿಜೆಪಿ ಸರ್ಕಾರ ಮಟ್ಟ ಹಾಕುತ್ತಿದೆ ಎಂಬ ಭಯ ಅವರಲ್ಲಿ ಅಸ್ಥಿರತೆ ಉಂಟು ಮಾಡಿದೆ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *