ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಪಾದಯಾತ್ರೆ ಆರಂಭವಾಗಿ ಇಂದಿಗೆ ಮೂರು ದಿನ ಕಳೆದಿದೆ. ಮೊದಲ ದಿನವೇ ಸುಸ್ತಾದ ಡಿಕೆ ಶಿವಕುಮಾರ್, ಮೂರು ದಿನಗಳ ಕಾಲ ಮಾತಾಡದೆ ಇರಲು ನಿರ್ಧರಿಸಿದ್ದಾರೆ.
ಮೌನಾಚರಣೆ ಮೂಲಕ ನಡೆಯಲು ನಿರ್ಧರಿಸಿದ್ದಾರೆ. ಆದ್ರೆ ಈ ಮೌನಾಚರಣೆ ಬಗ್ಗೆ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿದ ಸಚಿವ ಅಶ್ವಥ್ ನಾರಾಯಣ್ ಅವರು, ಡಿಕೆಶಿ ಅವರು ಮಾತನಾಡಿದರೆ ಸಿಕ್ಕಿ ಹಾಕಿಕೊಳ್ಳುತ್ತಾರೆ ಎಂಬ ಭಯಕ್ಕೆ ಮೌನಕ್ಕೆ ಜಾರಿದ್ದಾರೆ ಎಂದಿದ್ದಾರೆ.
ಹೀಗಾಗಿ ಅದರಿಂದ ಬಚಾವ್ ಆಗಲು ಮೌನಕ್ಕೆ ನಿರ್ಧರಿಸಿದ್ದಾರೆ. ರೇಣುಕಾಚಾರ್ಯ ಕಾರ್ಯಕ್ರಮಕ್ಕೆ ಹೋಗಿದ್ದಕ್ಕೆ ಕ್ಷಮೆ ಕೇಳಿದ್ದಾರೆ. ಇನ್ನು ಮುಂದೆ ಜವಬ್ದಾರಿಯುತವಾಗಿ ನಡೆದುಕೊಳ್ಳುತ್ತೇನೆ ಎಂದಿದ್ದಾರೆ. ಕಾಂಗ್ರೆಸ್ನವರ ರೀತಿ ಬಂಡತನಕ್ಕೆ ಬಿದ್ದಿಲ್ಲ ಅಂತ ಸಚಿವ ಅಶ್ವತ್ಥ್ ನಾರಾಯಣ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.