ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಈಗಾಗಲೇ ಸರ್ಕಾರ ಕಠಿಣ ನಿಯಮಗಳನ್ನ ಜಾರಿ ಮಾಡಿದೆ. ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಈ ಮಧ್ಯೆ ಲಾಕ್ಡೌನ್ ಆಗುತ್ತಾ ಎಂಬ ಭಯ ಜನಸಾಮಾನ್ಯರದ್ದು. ಈ ಬಗ್ಗೆ ಸಚಿವ ಆರ್ ಅಶೋಕ್ ಸ್ಪಷ್ಟನೆ ನೀಡಿದ್ದಾರೆ.
ಜನವರಿ 21ರ ಶುಕ್ರವಾರದವರೆಗೂ ವೀಕೆಂಡ್ ಲಾಕ್ಡೌನ್ ಜಾರಿಯಲ್ಲಿರಲಿದೆ. ಆ ಬಳಿಮ ಸಡಿಲಗೊಳಿಸುವ ತೀರ್ಮಾನ ತೆಗೆದುಕೊಂಡಿದ್ದೇವೆ. ಜನವರಿ 24 ಮತ್ತು 25 ರಿಂದ ಕೋವಿಡ್ ಕೇಸ್ ಗಳು ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆ ಇದೆ ಎಂದು ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ತಜ್ಞರ ಸಭೆ ನಡೆದಿದೆ. ಸಭೆ ಬಳಿಕ ಈ ಬಗ್ಗೆ ಸಚಿವ ಅಶೋಕ್ ಅವರು ಮಾತನಾಡಿದ್ದಾರೆ. ಈ ತಿಂಗಳ ಅಂತ್ಯದವರೆಗೂ ಯಥಾಸ್ಥಿತಿಯಲ್ಲಿ ನಿಯಮಗಳು ಜಾರಿಯಲ್ಲಿರಲಿದೆ. ಸದ್ಯಕ್ಕಂತು ಲಾಕ್ಡೌನ್ ಮಾಡುವ ಮನಸ್ಥಿತಿ ಇಲ್ಲ. ಶುಕ್ರವಾರದ ಬಳಿಕ ಈ ಬಗ್ಗೆ ಮತ್ತೊಂದು ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.