ಚಿತ್ರದುರ್ಗ: ಬುದ್ದ ಸಮಾನತೆ, ಸಹಭಾಳ್ವೆ, ಸೌಹಾರ್ಧತೆ ಮತ್ತು ಕರುಣೆಯನ್ನು ತೋರುವ ಮೂಲಕ ಜಗತ್ತಿಗೆ ಮಹಾಬೆಳಕಾದವರು ಎಂದು ಜಗದ್ಗುರು ಶ್ರೀ ತರಳಬಾಳು ಶಾಖಾ ಮಠ ಸಾಣೆಹಳ್ಳಿಯ ಪೀಠಾಧ್ಯಕ್ಷರಾದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳು ಹೇಳಿದರು.
ಧಮ್ಮ ಕೇಂದ್ರದಲ್ಲಿ ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ, ವಿಮುಕ್ತಿ ವಿದ್ಯಾಸಂಸ್ಥೆ ಹಾಗೂ ಧಮ್ಮ ಸಾಂಸ್ಕøತಿಕ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಭೌದ್ದ ಪೂರ್ಣಿಮೆ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.
ಮನುಷ್ಯ ಮನುಷ್ಯರ ನಡುವೆ ಪ್ರೀತಿ, ಕರುಣೆ ಬೆಳೆಸುವ ಮೂಲಕ ಸಿದ್ದಾರ್ಥ ಬುದ್ದ ಜಗತ್ತಿಗೆ ಬೆಳಕು ನೀಡಿದವರು. ನದಿ ನೀರಿನ ಹಂಚಿಕೆ ವಿಚಾರದಲ್ಲಿ ತಾನು ಹುಟ್ಟಿದ ನಾಡು ತೊರೆದ ಸಿದ್ದಾರ್ಥ ಸತ್ಯ ಕಂಡುಕೊಳ್ಳಲು ಧ್ಯಾನ ಮಾರ್ಗವನ್ನು ಅನುಸರಿಸಿದರು. ಅವರು ನೀಡಿದಂತ ವಿಚಾರ ಇಂದಿಗೂ ಕೂಡ ಪ್ರಸ್ತುತ ಎಂದು ತಿಳಿಸಿದರು.
ಇಂದಿನ ಸಮಾಜಕ್ಕೆ ಬುದ್ದ, ಬಸವ, ಅಂಬೇಡ್ಕರ್‍ರವರ ವಿಚಾರಧಾರೆಗಳು ಅಗತ್ಯವಿದ್ದು, ಸಿದ್ದಾರ್ಥ ಬುದ್ದನಾದ ಕಥೆಯನ್ನು ಸರಳವಾಗಿ ಪಂಡಿತಾರಾಧ್ಯ ಶ್ರೀಗಳು ಮನಮುಟ್ಟುವಂತೆ ವಿವರಿಸಿದರು.
ನಿವೃತ್ತ ಪ್ರಾಚಾರ್ಯರಾದ ಪ್ರೊ.ಸಿ.ಕೆ.ಮಹೇಶ್ ಮಾತನಾಡಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‍ರವರು ಬುದ್ದನ ವಿಚಾರಗಳನ್ನು ನವಯಾನದ ಮೂಲಕ ಅನುಸರಿಸುವ ಮುಖಾಂತರ ಬುದ್ದ ಮಾರ್ಗವನ್ನು ಕಂಡುಕೊಂಡಿದ್ದರು. ಬುದ್ದನ ವಿಚಾರಗಳನ್ನು ಅಷ್ಟೊತ್ತಿಗಾಗಲೆ ಹೀನಯಾನ, ಮಹಾಯಾನಗಳ ಮೂಲಕ ಪ್ರಸ್ತುತಪಡಿಸಲಾಗಿತ್ತು. ಬುದ್ದ ಅಂದರೆ ಬೆಳಕು, ಬುದ್ದ ಅಂದರೆ ಕರುಣೆ, ಬುದ್ದ ಗುರುವು ಯಾವುದೋ ಒಬ್ಬ ವ್ಯಕ್ತಿಯಲ್ಲ. ಅದೊಂದು ಮಾರ್ಗ. ಪ್ರತಿಯೊಬ್ಬರು ಕೂಡ ಬುದ್ದ ಮಾರ್ಗವನ್ನು ಅನುಸರಿಸುವ ಮೂಲಕ ಜೀವನದಲ್ಲಿ ಮಹಾತ್ ಕಾರ್ಯಗಳನ್ನು ಸಾಧಿಸಲು ಸಾಧ್ಯವಾಗುತ್ತದೆಂದು ನುಡಿದರು.
ದೇಶ ಸಂಕಷ್ಟದ ಸಂದರ್ಭಗಳನ್ನು ಎದುರಿಸುತ್ತಿರುವ ಸಂದರ್ಭಗಳಲ್ಲಿ ಜಗತ್ತಿಗೆ ಶಾಂತಿ ಸಾರಿದಂತಹ ಬುದ್ದ, ಬಸವ, ಅಂಬೇಡ್ಕರ್‍ರವರು ಪ್ರಸ್ತುತವಾಗುತ್ತಿದ್ದಾರೆ. ಹಾಗೆಯೇ ವೈಚಾರಿಕವಾಗಿಯೂ ಅವರ ಮಾರ್ಗಗಳು ಅನುಸರಣೀಯ ಎಂದು ಮಹೇಶ್ ಹೇಳಿದರು.
ಬುದ್ದ ಪೌರ್ಣಿಮೆ ಸಂದರ್ಭದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ನಟರಾಜ್, ಬುದ್ದ ನವಯಾನ ಚಿಂತಕರಾದ ಕಸವನಹಳ್ಳಿ ಶಿವಣ್ಣ, ವಿಮುಕ್ತಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ, ನಿರ್ದೇಶಕ ಆರ್.ವಿಶ್ವಸಾಗರ್, ಕರ್ನಾಟಕ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಸರೋವರ್ ಬೆಂಕಿಕೆರೆ, ಗೀತಮ್ಮ, ಬೀಬಿಜಾನ್, ಸುಶೀಲಮ್ಮ, ಕರ್ನಾಟಕ ಶಾಂತಿ ಸೌಹಾರ್ಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬುದ್ದ, ಬಸವ, ಅಂಬೇಡ್ಕರ್ ಕುರಿತು ಗೀತಗಾಯನವನ್ನು ಅರಣ್ಯಸಾಗರ್, ಕುಮಾರ್, ಪಾಲಯ್ಯ ಮತ್ತು ಟಿ.ಕುಮಾರ್ ಇವರುಗಳು ನೆರವೇರಿಸಿದರು.