ರಾಯಚೂರು: ರಾಘವೇಂದ್ರ ಸ್ವಾಮಿಗೆ ಭಕ್ತರು ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ಯಾರನ್ನೇ ಕೇಳಿದರು ರಾಯರನ್ನು ನಂಬಿದರೆ ಎಲ್ಲವೂ ಒಳ್ಳೆಯದೆ ಆಗುತ್ತೆ ಎಂಬ ಅನುಭವ ಪಡೆದಿದ್ದಾರೆ. ರಾಯರ ಸನ್ನಿಧಾನಕ್ಕೂ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಇದೀಗ ಭಕ್ತರಿಂದ ಬಂದ ಭಕ್ತಿಯ ಕಾಣಿಕೆ ಕೋಟಿ ಮುಟ್ಟಿದೆ. ಇದು ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅನ್ನೋದು ವಿಶೇಷವಾಗಿದೆ.
ಕೇವಲ 32 ದಿನದಲ್ಲಿ ಈ ಹಣ ಸಂಗ್ರಹವಾಗಿದೆ. ಸುಮಾರು 3 ಕೋಟಿ 53 ಲಕ್ಷ ಹಣ ಸಂಗ್ರಹವಾಗಿದೆ. ಇಂದು ಮಠದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಶ್ರೀಮಠದ ಸಿಬ್ಬಂದಿಗಳು, ಸೇವಕರು, ನೂರಾರು ಭಕ್ತರು ಕಾಣಿಕೆ ಹುಂಡಿಯಲ್ಲಿ ಏಣಿಕೆ ಮಾಡಿದ್ದಾರೆ.
ಹಣದ ಜೊತೆಗೆ ಚಿನ್ನ, ಬೆಳ್ಳಿಯೂ ಸಂಗ್ರಹವಾಗಿದೆ. 197 ಗ್ರಾಂ ಚಿನ್ನ ಹಾಗೂ 187 ಗ್ರಾಂ ಬೆಳ್ಳಿ ಕೂಡ ಸಂಗ್ರಹವಾಗಿದೆ. ಬರೀ 34 ದಿನದಲ್ಲಿಯೇ ಇಷ್ಟು ದೊಡ್ಡ ಮೊತ್ತದ ಕಾಣಿಕೆ ಸಂಗ್ರಹವಾಗಿರುವುದು ಮಠದ ಇತಿಹಾಸದಲ್ಲಿಯೇ ಇದೆ ಮೊದಲಾಗಿದೆ.