ಚಿತ್ರದುರ್ಗ, (ಏ.24) : 2021-22 ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಏ.25 ರಿಂದ ಆನ್‌ಲೈನ್ ಮೂಲಕ ಪ್ರತಿ ಕ್ವಿಂಟಾಲ್‌ಗೆ 3377 ರೂಪಾಯಿ ದರದಲ್ಲಿ ರೈತರಿಂದ
ರಾಗಿ ಖರೀದಿಸಲು ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಾಗಿದೆ ಎಂದು ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕರು ಆಗಿರುವ ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನೀಕೆರಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, 2020-21 ನೇ ಸಾಲಿನಲ್ಲಿ ನಾಲ್ಕು ಖರೀದಿ ಕೇಂದ್ರಗಳನ್ನು ಸ್ಥಾಪಿಸಿ 3377 ರೂಪಾಯಿ ದರದಲ್ಲಿ ಜಿಲ್ಲೆಯ ರೈತರಿಂದ ,76646.50 ಟನ್ ರಾಗಿ ಖರೀದಿಸಲಾಗಿತ್ತು.
ರಾಗಿ ಇಳುವರಿ ಉತ್ತವಾಗಿದ್ದು, ಅಧಿಕ ಪ್ರಮಾಣದಲ್ಲಿ ಉತ್ಪಾದನೆಯಾಗಿದೆ. ಬೆಂಬಲ ಬೆಲೆಯಡಿ ಖರೀದಿ ಮುಂದುವರಿಸುವಂತೆ ರೈತರು ಮನವಿ ಸಲ್ಲಿಸಿದ್ದಾರೆ. ಆದ್ದರಿಂದ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ರಾಗಿ ಖರೀದಿಗೆ ಅನುಮತಿ ನೀಡಲಾಗಿದೆ. ಹೊಸದುರ್ಗ, ಶ್ರೀರಾಂಪುರ, ಚಿಕ್ಕಜಾಜೂರು, ಚಿತ್ರದುರ್ಗ ಎ.ಪಿ.ಎಂ.ಸಿ ಆವರದಲ್ಲಿ ಸ್ಥಾಪಿಸಿರುವ ಖರೀದಿ ಕೇಂದ್ರಗಳಲ್ಲಿ 2021-22 ಮುಂಗಾರು ಹಂಗಾಮಿನಲ್ಲಿ ಮಾರಾಟ ಮಾಡಿರುವ ರೈತರನ್ನು ಹೊರತು ಪಡಿಸಿ, ಬೇರೆ ರೈತರಿಂದ ರಾಗಿ ಖರೀದಿಗೆ ಅನುಮತಿ ನೀಡಲಾಗಿದೆ. ರಾಗಿ ಬೆಳೆಗಾರರು ಇದರ ಉಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ ತಿಳಿಸಿದ್ದಾರೆ.