ಹಾಸನ: ಹಲವು ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿದೆ. ಆದ್ರೆ ಹಾಸನದ ಬಹುತೇಕ ಶಾಲೆಗಳಲ್ಲಿ ಬಿಸಿಯೂಟ ಸ್ಥಗಿತಗೊಂಡಿದೆ ಎನ್ನಲಾಗುತ್ತಿದೆ. ಹೀಗಾಗಿ ಶಿಕ್ಷಕರು ಕೂಡ ಮಕ್ಕಳಿಗೆ ಮನೆಯಿಂದಾನೇ ಊಟ ತರುವಂತೆ ಸೂಚನೆ ನೀಡಿದ್ದಾರೆ.
ಶಾಲಾ ಮಕ್ಕಳಿಗೆ ನೀಡುವ ಬಿಸಿಯೂಟದ ರೇಷನ್ ವ್ಯತ್ಯಯವಾಗುತ್ತಿರುವ ಹಿನ್ನೆಲೆ ಬಹುತೇಕ ಶಾಲೆಗಳಲ್ಲಿ ಬಿಸಿಯೂಟ ಸಿಗುತ್ತಿಲ್ಲ. ಅಕ್ಕಿ, ಬೇಳೆ ಸೇರಿದಂತೆ ಅಡುಗೆಗೆ ಬೇಕಾದ ಯಾವ ಪದಾರ್ಥವೂ ಸಪ್ಲೈ ಆಗುತ್ತಿಲ್ಲ. ಹೀಗಾಗಿ ಶಾಲೆಯ ಶಿಕ್ಷಕರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ 20 ದಿನದಿಂದ ಈ ಸಮಸ್ಯೆ ಶಾಲೆಗಳಲ್ಲಿ ಕಾಡುತ್ತಿದೆ. ಹೀಗಾಗಿ ಮಕ್ಕಳು ಹಸಿದುಕೊಂಡು ಇರಬಾರದು ಎಂಬ ಕಾರಣಕ್ಕೆ ಶಿಕ್ಷಕರು ಮಕ್ಕಳಿಗೇನೆ ಸೂಚನೆ ನೀಡಿದ್ದಾರೆ. ಮನೆಯಿಂದಾನೇ ಬಾಕ್ಸ್ ತನ್ನಿ ಎಂದಿದ್ದಾರೆ.
ಈ ಕಡೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಹತ್ತು ಕೆಜಿ ಅಕ್ಕಿ ನೀಡುತ್ತೇವೆ ಎಂದು ಸೂಚನೆ ನೀಡಿತ್ತು. ಆದ್ರೆ ಕೇಂದ್ರ ಸರ್ಕಾರದಿಂದ ಬೆಂಬಲ ಸಿಗುತ್ತಿಲ್ಲ. ಅಕ್ಕಿ ಬದಲು ಹಣ ಕೊಡ್ತೇವೆ ಎಂದಿದ್ದಾರೆ. ಈಗ ಬಿಸಿಯೂಟದ ರೇಷನ್ ಗೂ ತಾಪತ್ರಯ ಎದುರಾಗಿದೆ.