ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಮಿತಿಮೀರಿದೆ. ಗ್ರಾಮೀಣ ಭಾಗದ ಜನರನ್ನೇ ಟಾರ್ಗೆಟ್ ಮಾಡುವ ಫೈನಾನ್ಸ್ ಕಂಪನಿಗಳು ಸಾಲ ಸೌಲಭ್ಯವನ್ನು ಸುಲಭವಾಗಿ ಕೊಟ್ಟು ಬಿಡುತ್ತಾರೆ. ಕಟ್ಟುವುದಕ್ಕೆ ತಡವಾದರೆ ಮನೆ ಮುಂದೆ ಹೋಗಿ ಗಲಾಟೆ ಮಾಡುವುದು, ಮರ್ಯದೆ ತೆಗೆಯುವ ರೀತಿ ನಡೆದುಕೊಳ್ಳುವುದು ಹಾಗೇ ಮನೆಗೆ ಬೀಗವನ್ನೆ ಜಡಿದು ಬರುವ ಕೆಲಸವನ್ನು ಮಾಡುತ್ತಿದ್ದಾರೆ. ಇದರಿಂದ ಅದೆಷ್ಟೋ ಜನ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ. ಫೈನಾನ್ಸ್ ಉಪಟಳ ಜಾಸ್ತಿಯಾದಾಗ ಸರ್ಕಾರ ಇದಕ್ಕೆ ಕಾನೂನಿನ ಮೂಲಕ ಕಂಟ್ರೋಲ್ ಗೆ ತರುವುದಕ್ಕೆ ತೀರ್ಮಾನಿಸಿತ್ತು.
![](https://suddione.com/content/uploads/2024/10/gifmaker_me-5-1.gif)
ಅಧಿಕಾರಿಗಳ ಜೊತೆಗೆ ಕೂತು ಚರ್ಚೆ ಮಾಡಿ, ಫೈನಾನ್ಸ್ ಕಂಪನಿಗಳ ಉಪಟಳ ತಪ್ಪಿಸಲು ಸುಗ್ರಿವಾಜ್ಞೆ ಹೊರಡಿಸಲು ನಿರ್ಧರಿಸಿದ ಸರ್ಕಾರ, ಅನುಮೋದನೆಯನ್ನು ರಾಜ್ಯಪಾಲರಿಗೆ ನೀಡಿತ್ತು. ಆದರೆ ಸುಗ್ರಿವಾಜ್ಞೆಯಲ್ಲಿ ಒಂದಷ್ಟು ಬದಲಾವಣೆಗಳು ಆಗಬೇಕೆಂದ ರಾಜ್ಯಪಾಲರು ಸಹಿ ಹಾಕದೆ ವಾಪಸ್ ಕಳುಹಿಸಿದ್ದರು. ಇದೀಗ ಸುಗ್ರಿವಾಜ್ಞೆಗೆ ರಾಜ್ಯಪಾಲರಿಂದ ಅನುಮೋದನೆ ಸಿಕ್ಕಿದೆ.
ಕಡೆಗೂ ರಾಜ್ಯಪಾಲರು ಸುಗ್ರಿವಾಜ್ಞೆಗೆ ಒಪ್ಪಿಗೆ ಸೂಚಿಸಿದ್ದಾರೆ. ಅನುಮೋದನೆಗೆ ಸಹಿ ಹಾಕಿದ್ದಾರೆ. ಸುಗ್ರಿವಾಜ್ಞೆ ಮೂಲಕ ಇನ್ಮುಂದೆ ಸರ್ಕಾರವೂ ಮೈಕ್ರೋ ಫೈನಾನ್ಸ್ ಗಳಿಗೆ ಕಡಿವಾಣ ಹಾಕಲಿದೆ. ಸುಲಭವಾಗಿ ಹಣ ಕೊಟ್ಟು, ಜನರ ಪ್ರಾಣ ತಿನ್ನುತ್ತಿದ್ದ ಕಂಪನಿಗಳಿಗೆ ಬಿಸಿ ಮುಟ್ಟಿಸಲಿದೆ. ಸರ್ಕಾರ ನಿಯಮಗಳನ್ನು ಪಾಲಿಸದೆ ಹೋದಲ್ಲಿ ಲೈಸೆನ್ಸ್ ಅನ್ನು ರದ್ದು ಮಾಡುವ ಸಾಧ್ಯತೆ ಇದೆ. ಪೊಲೀಸ್ ಠಾಣೆಯಲ್ಲಿ ಕಿರುಕುಳ ಅನುಭವಿಸಿದವರು ದೂರು ದಾಖಲಿಸಬಹುದು. ಪೊಲೀಸರು ಕೂಡ ಫೈನಾನ್ಸ್ ಕಂಪನಿಗಳ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳುವುದಕ್ಜೆ ಅವಕಾಶ ಇರುವ ಬಗ್ಗೆ ಸುಗ್ರಿವಾಜ್ಞೆಯಲ್ಲಿದೆ. ಇನ್ನಾದರೂ ಮೈಕ್ರೋ ಫೈನಾನ್ಸ್ ಕಿರುಕುಳ ಹತೋಟಿಗೆ ಬರುತ್ತಾ ಎಂಬುದನ್ನು ನೋಡಬೇಕಿದೆ.p
![](https://suddione.com/content/uploads/2025/02/site.webp)