ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಿರುಕುಳ ಹೆಚ್ಚಾಗಿದೆ. ಸಾಲ ಕಟ್ಟಲು ಆಗದೆ ಇದ್ದರೆ ಮನೆಗಳನ್ನೇ ಕಿತ್ತುಕೊಂಡಿದ್ದಾರೆ, ಕೆಟ್ಟದಾಗಿ ಮಾತಾಡಿದ್ದಾರೆ, ಬದುಕನ್ನೇ ಬೀದಿಗೆ ತಂದಿದ್ದಾರೆ. ಹೆಚ್ಚಾದ ದಾದಾಗಿರಿಯನ್ನು ತಪ್ಪಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು, ಇಂದು ಮಹತ್ವದ ಸಭೆ ನಡೆಸಿದ್ದಾರೆ. ಮೈಕ್ರೋ ಫೈನಾನ್ಸ್ ಗಳಿಗೆ ಒಂದು ಹೊಸ ಕಾಯ್ದೆಯನ್ನು ತರುವುದಕ್ಕೆ ಮುಂದಾಗಿದೆ.

ಕರ್ನಾಟಕ ಮೈಕ್ರೋ ಫೈನಾನ್ಸ್ ಇನ್‌ಸ್ಟಿಟ್ಯೂಷನ್ ಆಫ್ ರೆಗುಲೇಷನ್ ಆಫ್ ಮನಿ ಲೆಂಡಿಂಗ್ ಬಿಲ್ ತರುವುದಕ್ಕೆ ಸರ್ಕಾರ ಮುಂದಾಗಿದೆ. ಹೊಸ ಕಾಯ್ದೆಯ ಮೂರು ಪ್ರಮುಖ ಅಂಶಗಳನ್ನು ಇಲ್ಲಿ ಉಲ್ಲೇಖ ಮಾಡಲಾಗಿದೆ. ಮೈಕ್ರೋ ಫೈನಾನ್ಸ್ ಕಿರುಕುಳ ಕಾಗ್ನಿಜೆಬಲ್ ಅಫೆನ್ಸಗ ಎಂದು ಪರಿಗಣಿಸುವುದು, ಹೊಸ ಕಾನೂನೂನಿನ ಅಡಿ ಕೇಸ್ ದಾಖಲಿಸಿದರೆ ಅದು ಜಾಮೀನು ರಹಿತ, ಹೊಸ ಕಾಯ್ದೆಯ ಪ್ರಕಾರ ಮೂರು ವರ್ಷ ಕಠಿಣ ಶಿಕ್ಷೆ ವಿಧಿಸುವುದು ಈ ಮೂರು ವಿಚಾರಗಳು ಪ್ರಮುಖವಾದುದ್ದಾಗಿದೆ.

ಈ ಕಾಗ್ನಿಜಬಲ್ ಅಪರಾಧ ಎಂದರೆ, ಪೊಲೀಸ್ ಅಧಿಕಾರಿಯು ವಾರೆಂಟ್ ಇಲ್ಲದೆಯೇ ಅಪರಾಧಿಯನ್ನು ಬಂಧಿಸಬಹುದು. ನ್ಯಾಯಾಲಯದ ಅನುಮತಿ ಇಲ್ಲದೆ ತನಿಖೆಯನ್ನು ಪ್ರಾರಂಭಿಸಬಹುದು. ಕಾನೂನಿನ ಪ್ರಕಾರ ಒಬ್ಬ ಪೊಲೀಸ್ ಅಧಿಕಾರಿಯೂ ವಾರೆಂಟ್ ಅಥವಾ ನ್ಯಾಯಾಲಯದ ಅನುಮತಿ ಇಲ್ಲದೆ ಅಪರಾಧಿಯನ್ನು ಬಂಧಿಸಬಹುದಾಗಿದೆ. ಮೈಕ್ರೋ ಫೈನಾನ್ಸ್ ಕಿರುಕುಳದ ಆರೋಪಗಳು, ದೂರುಗಳು ಬಂದರೆ ಪೊಲೀಸರು ತಕ್ಷಣವೇ ಬಂಧಿಸಬಹುದು. ಕಿರುಕುಳ ನೀಡಿದ ಮೈಕ್ರೋ ಫೈನಾನ್ಸ್ ವಿರುದ್ಧ ಜಾಮೀನು ರಹಿತ ಸೆಕ್ಷನ್ ಅಡಿ ಕೇಸ್ ದಾಖಲಿಸಲು ಅವಕಾಶವಿದೆ. ಈ ಮೂಲಕ ಮೂರು ಪ್ರಮುಖ ಅಂಶಗಳೊಂದಿಗೆ ಕಾಯ್ದೆಯನ್ನು ಜಾರಿಗೆ ತರುವುದಕ್ಕರ ಕಾನೂನು ಇಲಾಖೆ ಸಿದ್ಧಪಡಿಸುತ್ತಿದೆ. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಸಭೆ ಬಳಿಕ ಈ ಕಾಯ್ದೆಗಳನ್ನು ಜಾರಿಗೆ ತರಲಿದೆ ಎನ್ನಲಾಗುತ್ತಿದೆ.


