ಮತ್ತೊಂದು ಚಂಡಮಾರುತದ ಸುಳಿವು ಕೊಟ್ಟ ಹವಮಾನ ಇಲಾಖೆ : ಚಿತ್ರದುರ್ಗ ಸೇರಿ ಹಲವೆಡೆ ಭಾರೀ ಮಳೆ..!

suddionenews
1 Min Read

ಬೆಂಗಳೂರು: ಈಗಷ್ಟೇ ಡಾನಾ ಚಂಡಮಾರುತದಿಂದ ರಾಜ್ಯ ಕೂಡ ಸುಧಾರಿಸಿಕೊಂಡಿದೆ. ರೈತರು ಕೊಯ್ಲಿನತ್ತ ಗಮನ ಹರಿಸುತ್ತಿದ್ದಾರೆ. ಆದರೆ ಈಗ ಮತ್ತೊಂದು ಚಂಡಮಾರುತದ ಸುಳಿವು ನೀಡಿದೆ ಹವಮಾನ ಇಲಾಖೆ. ತಮಿಳುನಾಡಿನಲ್ಲಿ ಚಂಡಮಾರುತದ ಸುಳಿವು ನೀಡಲಾಗಿದೆ. ಇದರ ಪರಿಣಾಮ ಕರ್ನಾಟಕದಲ್ಲೂ ಮುಂದಿನ ನಾಲ್ಕು ದಿನಗಳ ಕಾಲ ಜೋರು ಮಳೆಯಾಗುವ ಸೂಚನೆ ನೀಡಲಾಗಿದೆ.

ಅದರಲ್ಲೂ ಚಿತ್ರದುರ್ಗ, ದಕ್ಷಿಣ ಕನ್ನಡ, ಉಡುಪಿ, ಹಾಸನ, ಬೆಂಗಳೂರು, ಚಾಮರಾಜನಗರ, ಮೈಸೂರಿನಲ್ಲಿ ಈಗಾಗಲೇ ಮಳೆಯಾಗಿದ್ದು, ನಾಲ್ಕು ದಿನಗಳ ಕಾಲ ಮಳೆ‌ಮುಂದುವರೆಯಲಿದೆ ಎನ್ನಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ರಾಮನಗರ, ಕರಾವಳಿ ಭಾಗ ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆಯಾಗಲಿದೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.

ಅದರಲ್ಲೂ ಚಿಕ್ಕಮಗಳೂರು, ಚಾಮರಾಜನಗರ ಮತ್ತು ಕೊಡಗು ಭಾಗಗಳಿಗೆ ಭಾರೀ ಮಳೆಯಾಗುವ ಸೂಚನೆ ನೀಡಿದೆ. ಈ ಬಾರಿ ಮುಂಗಾರು ಮಳೆಯೂ ಉತ್ತಮವಾಗಿದ್ದು, ಹಿಂಗಾರು ಮಳೆಯೂ ಉತ್ತಮವಾಗಿ ಸುರಿದಿದೆ. ಅದರಲ್ಲೂ ಹಿಂ್ಇನ ವರ್ಷಗಳಿಗೆ ಹೋಲಿಕೆ ಮಾಡಿದರೆ ಉತ್ತಮ ಮಳೆಯಾಗಿದೆ ಎಂದೇ ಹೇಳಲಾಗಿದೆ.

ಡಾನಾ ಚಂಡಮಾರುತದಿಂದ ರಾಜ್ಯವೂ ತತ್ತರಿಸಿ ಹೋಗಿತ್ತು. ಬೆಂಬಿಡದೆ ಒಂದೇ ಸಮನೆ ಮಳೆ ಸುರಿದಿದ್ದರ ಪರಿಣಾಮ ಬೆಂಗಳೂರು ಜನತೆ ಹೈರಾಣಾಗಿದ್ದರು. ಎಲ್ಲೆಂದರಲ್ಲಿ ನೀರು ಮಯವಾಗಿತ್ತು. ದೋಣಿಗಳು ಓಡಾಡುವಂತ ಸಮುದ್ರದ ಊರಾಗಿತ್ತು. ಹಲವು ಜಿಲ್ಲೆಗಳಲ್ಲಿ ರೈತರಿಗೂ ಸಂಕಷ್ಟ ಎದುರಾಗಿತ್ತು. ಅದರಲ್ಲೂ ಬೆಳೆ ನಾಶದಿಂದ ತರಕಾರಿ ಬೆಲೆ ಗಗನಕ್ಕೇರಿತ್ತು. ಬೆಳೆ ನಾಶದಿಂದ ರೈತರು ಸಂಕಷ್ಟಕ್ಕೊಳಗಾಗಿದ್ದರು. ಸದ್ಯ ವರುಣರಾಯ ಬಿಡುವು ಕೊಟ್ಟಿದ್ದಾನೆ. ಇದು ಕೊಯ್ಲು ಮಾಡುವ ಸಮಯ ಎಂದು ನಿಟ್ಟುಸಿರು ಬಿಡುವಾಗಲೆ ಮತ್ತೆ ಚಂಡ ಮಾರುತದ ಸೂಚನೆ ಆತಂಕ ಉಂಟು ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *