ಶಿವಮೊಗ್ಗ: ಯಾವುದಾದರೂ ಇಲಾಖೆಯಲ್ಲಿ ಅವ್ಯವಹಾರ ನಡೆದರೆ ಅದು ಸಿಕ್ಕಿ ಬೀಳುವುದು ಸ್ವಲ್ಪ ಕಷ್ಟ. ಆದ್ರೆ ಇಲ್ಲಿ ಸಚಿವರೇ ಇಲಾಖೆಯ ಅವ್ಯವಹಾರ ಬಯಲಿಗೆಳೆದು, ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಜಿಲ್ಲೆಗೆ ಭೇಟಿ ನೀಡಿದ್ದ ಸಚಿವ ಈಶ್ವರಪ್ಪ ಮೆಸ್ಕಾಂ ಇಲಾಖೆಯ ಸಭೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆದಿದೆ. ಈ ವೇಳೆ ಮೆಸ್ಕಾಂ ಇಲಾಖೆಯ ಅವ್ಯವಹಾರನ್ನ ಹೇಳಿದ್ದಾರೆ.
ಈ ಕಾಮಗಾರಿ 2017ರಲ್ಲಿ ಆರಂಭವಾಗಿತ್ತು. 2020ಕ್ಕೆಲ್ಲಾ ಮುಗಿಯಬೇಕಿತ್ತು. ಆದ್ರೆ ಕಾಮಗಾರಿ ಮಾತ್ರ ಇನ್ನು ಮುಗಿದಿಲ್ಲ. ಈ ಕಾಮಗಾರಿಯಲ್ಲಿ 12 ಕೋಟಿ 21 ಲಕ್ಷ ವ್ಯತ್ಯಾಸವಾಗಿದೆ. ಇನ್ನು ಕಾಮಗಾರಿ ಮುಗಿಯದೆ ಇದ್ದರು ಮುಗಿದಿದೆ ಎಂದು ಸರ್ಟಿಫಿಕೇಟ್ ಯಾಕೆ ಕೊಟ್ಟೀದ್ದೀರಿ ಎಂದು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.
ಆ ಫೋಟೋಗಳನ್ನ ಎಲ್ಲರಿಗೂ ತೋರಿಸಿದ ಸಚಿವ ಈಶ್ವರಪ್ಪ, ನಿಮಗೆ ಹೇಳುವವರು, ಕೇಳುವವರು ಯಾರು ಇಲ್ಲ. ಇಂತ ಅನ್ಯಾಯ ನಮ್ಮ ಜಿಲ್ಲೆ ಹಾಗೂ ರಾಜ್ಯದಲ್ಲಿ ಇನ್ನೆಷ್ಟು ಆಗಿರಬೇಕು. ಇಂಥ ಸರ್ಟಿಫಿಕೇಟ್ ಕೊಡೋದಕ್ಕೇನಾ ನೀವೂ ಇಷ್ಟೆಲ್ಲಾ ಓದಿರೋದು. ಸರ್ಕಾರದ ದುಡ್ಡು, ಜನಸಾಮಾನ್ಯರ ಹಣವನ್ನ ಕೆಲಸ ಮಾಡದೆ ಪಡೆಯುತ್ತಾರೆಂದರೆ ಹೇಗೆ ಎಂದು ಗರಂ ಆಗಿದ್ದಾರೆ.