ಬೆಳಗಾವಿ: ಎಂಇಎಸ್ ಪುಂಡರು ಆಗಾಗ ತಮ್ಮ ದುರಹಂಕಾರದ ಪರಮಾವಧಿಯನ್ನು ತೋರಿಸುತ್ತಲೆ ಇರುತ್ತಾರೆ. ಇದೀಗ ಮತ್ತೆ ತಮ್ಮ ಪುಂಡಾಟಿಕೆ ತೋರಿಸಿದ್ದು, ಮದುವೆ ಸಮಾರಂಭದಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ, ಕುಟುಂಬ ಒಂದರ ಮೇಲೆ ಹಲ್ಲೆ ನಡೆಸಿದ್ದಾರೆ. ಹೊಸದಾಗಿ ಮದುವೆಯಾಗಿದ್ದ ವಧು ವರ ಸೇರಿ ಐವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಹಲ್ಲೆಯಿಂದಾಗಿ ಒಬ್ಬರಿಗೆ ಗಂಭೀರ ಗಾಯವಾಗಿದೆ.
ಜಿಲ್ಲೆಯ ಧಾಮನೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸೈಬಣ್ಣವರ್ ಕುಟುಂಬಸ್ಥರಿಂದ ಮದುವೆ ಸಮಾರಂಭ ನಡೆದಿತ್ತು. ಕುಟುಂಬಸ್ಥರು ಈ ಸಮಾರಂಭವನ್ನು ಬ್ಯಾಂಡ್ ಬಾರಿಸಿ, ಮೆರವಣುಗೆ ಮಾಡುತ್ತಾ ಆಚರಿಸುತ್ತಿದ್ದರು. ಕನ್ನಡದ ಹಾಡು ಹಾಕಿ, ಕುಣಿಯುತ್ತಾ ವಧು ವರರನ್ನಹ ಕರೆದೊಯ್ಯಲಾಗುತ್ತು. ಈ ವೇಳೆ ಎಂಇಎಸ್ ನ ಅಜಯ್ ಯಳ್ಳೂರಕರ್ ಮತ್ತು ಆಕಾಶ್ ಸೇರಿದಂತೆ ಹತ್ತಕ್ಕೂ ಹೆಚ್ಚು ಮಂದಿ ಕಿರಕ್ ತೆಗೆದಿದ್ದರಂತೆ. ಬಳಿಕ ಹಲ್ಲೆಯನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸದ್ಯ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ನೀಡುತ್ತಿದ್ದು, ಸುಧಾರಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಕನ್ನಡ ಬೋರ್ಡ್ ಕಿತ್ತು ಹಾಕಿ ಮರಾಠಿ ಬೋರ್ಡ್ ಕೂಡ ನೆಟ್ಟಿದ್ದಾರೆ. ಈ ಸಂಬಂಧ ಗ್ರಾಮೀಣ ಠಾಣೆಗೆ ಕುಟುಂಬಸ್ಥರು ದೂರು ನೀಡಿದ್ದಾರೆ.