ಮೇಲುಕೋಟೆಯಲ್ಲಿ ತಂಗಿ ಕೊಳ ಕಲುಷಿತ : ತಮಿಳು ಸಿನಿಮಾ ಶೂಟಿಂಗ್ ವೇಳೆ ಮಾಡಿದ ಯಡವಟ್ಟೇ ಕಾರಣವಂತೆ..!

suddionenews
1 Min Read

ಮಂಡ್ಯ: ಐತಿಹಾಸಿಕ ಕ್ಷೇತ್ರದ ಪೈಕಿ, ಜಿಲ್ಲೆಯ ಮೇಲುಕೋಟೆ ಕೂಡ ಒಂದು. ಚೆಲುವನಾರಾಯಣ ಸ್ವಾಮಿ ನೋಡಲು ಭಕ್ತರ ದಂಡು ಹರಿದು ಬರುತ್ತಿರುತ್ತೆ. ಜೊತೆಗೆ ದೇವಸ್ಥಾನಕ್ಕೆ ದೂರದೂರಿನಿಂದ ಬರುವವರು ಒನ್ ಡೇ ಟ್ರಿಪ್ ಪ್ಲಾನ್ ನನ್ನೇ ಮಾಡಿಕೊಂಡಿರುತ್ತಾರೆ. ಹಾಗೇ ಮೇಲುಕೋಟೆಯಲ್ಲಿರುವ ಸುಂದರ ಸ್ಥಳಗಳನ್ನ ನೋಡೋಕೆ ಅಂತಾನೇ ಪ್ರವಾಸಿಗರು ಬರ್ತಾರೆ. ಅಲ್ಲಿನ ನೀರು, ಕಲ್ಲಿನ ಮಂಟಪಗಳೆಲ್ಲಾ ಸುಂದರವಾಗಿದ್ದು, ಫೋಟೋಶೂಟ್ ಮಾಡಿಕೊಳ್ಳೋದಕ್ಕೂ ಬರ್ತಾರೆ. ಆದ್ರೆ ಅಲ್ಲಿನ ವಾತಾವರಣ ಕಲುಷಿತಗೊಂಡರೆ ಹೇಗೆ..?

ತಮಿಳಿನ ಸಿನಿಮಾವೊಂದರ ಶೂಟಿಂಗ್ ನಡೆದಿದ್ದು, ಅಲ್ಲಿನ ಫೇಮಸ್ ತಂಗಿ ಕೆರೆ ಕಲುಷಿತಗೊಂಡಿದೆ. ಪವಿತ್ರ ಹಾಗೂ ಶುದ್ಧತೆಗೆ ಹೆಸರಾಗಿದ್ದ ತಂಗಿ ಕೆರೆ ಇದಾಗಿದೆ. ಆದ್ರೆ ಈಗ ಕಲುಚಿತಗೊಂಡಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಮೇಲುಕೋಟೆಯಲ್ಲಿ ಅಕ್ಕ-ತಂಗಿ‌ ಕೆರೆಯಿದೆ. ಆ ಎರಡು ಕೆರೆ ಖ್ಯಾತಿ ಪಡೆದಿವೆ. ಅದಕ್ಕೆ ಆದ ಪುರಾಣದ ಕಥೆಯಿದೆ. ಹಾಗೇ ಅಕ್ಕನ ಕೆರೆಯ ನೀರು ಗಡುಸಾಗಿದ್ದು, ಕುಡಿಯಲು ಯೋಗ್ಯವಲ್ಲ. ಅಲ್ಲೆ ಪಕ್ಕದಲ್ಲಿರುವ ತಂಗಿ ಕೆರೆಯ ನೀರನ್ನ ಚೆಲುವನಾರಾಯಣಸ್ವಾಮಿ ಅಭಿಷೇಕ, ದೇವರ ಕೆಲಸಗಳಿಗೆ ಬಳಕೆ ಮಾಡಲಾಗುತ್ತೆ. ಆದ್ರೆ ಈಗ ಆ ನೀರು ಕಲುಷಿತಗೊಂಡಿದೆ.

ಕಳೆದ ತಿಂಗಳು ಮೇಲುಕೋಟೆಗೆ ತಮಿಳಿನ ಚಿತ್ರವೊಂದು ಚಿತ್ರೀಕರಣಕ್ಕೆಂದು ಬಂದಿತ್ತು. ತಂಗಿ‌ ಕೆರೆಗೆ ಹೂಗಳು, ಬಣ್ಣವನ್ನ ಬಳಸಲಾಗಿತ್ತು. ಹೀಗಾಗಿ ನೀರು ಸಂಪೂರ್ಣ ಕಲುಷಿತಗೊಂಡಿದೆ. ಆ ಸಿನಿಮಾದ ಯಡವಟ್ಟಿನಿಂದಾಗಿ ಆ ನೀರಿನ ಬಳಕೆ ಮಾಡಲಾಗುತ್ತಿಲ್ಲ. ಇದು ದೇವಸ್ಥಾನದ ಭಕ್ತರಿಗೂ ಬೇಸರ ಉಂಟು ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *