ರಾಮನಗರ: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಕೊರೊನಾ ಟಫ್ ರೂಲ್ಸ್ ಅಡ್ಡಿಯಾಗಿದೆ. ಆದರೆ ಹಠ ಬಿಡದ ಕಾಂಗ್ರೆಸ್ ನಾಯಕರು, ಪಾದಯಾತ್ರೆ ಬದಲಿಗೆ ನೀರಿಗಾಗಿ ನಡಿಗೆ ಮಾಡ್ತೇವೆ ಅಂತ ನಿರ್ಧರಿಸಿದ್ದಾರೆ. ಈ ಯೋಜನೆಗೆ ಫಲ ಸಿಗಲಿ ಎಂಬ ಕಾರಣಕ್ಕೆ ಇದೀಗ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಮ್ಮ ಪತ್ನಿ ಜೊತೆಗೆ ದೇವಸ್ಥಾನಗಳ ಮೊರೆ ಹೋಗಿದ್ದಾರೆ.
ಮನೆ ದೇವತೆ ಕೆಂಕೇರಮ್ಮ, ಕಬ್ಬಾಳಮ್ಮ ದೇವಾಲಯಕ್ಕೆ ಭೇಟಿ ನೀಡಿ ನೀರಿಗಾಗಿ ನಡಿಗೆ ಯಶಸ್ವಿಯಾಗಲಿ ತಾಯಿ ಎಂದು ಬೇಡಿಕೊಂಡಿದ್ದಾರೆ. ಕನಕಪುರ ಟೌನ್ ನಲ್ಲಿರುವ ಕೆಂಕೇರಮ್ಮ ದೇವಾಲಯಕ್ಕೆ ಭೇಟಿ ನೀಡಿದ ಡಿ ಕೆ ಶಿವಕುಮಾರ್, ತನ್ನ ಪತ್ನಿ ಹಾಗೂ ಬೆಂಬಲಿಗರೊಂದಿಗೆ ಸೇರಿ ತಾಯಿ ಕೆಂಕೇರಮ್ಮಗೆ ವಿಶೇಷ ಪೂಜೆ ಮಾಡಿಸಿದ್ದಾರೆ.
ದೇವಸ್ಥಾನದಲ್ಲಿ ಪೂಜರ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ನಾವು ಪಾದಯಾತ್ರೆ ಮಾಡಬಾರದು ಅಂತ ಸರ್ಕಾರ ನಿರ್ಬಂಧ ಹೇರಿದೆ. ಎಲ್ಲರೂ ಕೋವಿಡ್ ನಿಯಮ ಪಾಲನೆ ಮಾಡುವುದರ ಜೊತೆಗೆ ಪಾದಯಾತ್ರೆ ಮಾಡಲು ಸಜ್ಜಾಗಿದ್ದೇವೆ ಎಂದಿದ್ದಾರೆ.