ಬೆಂಗಳೂರು : ನಾಳೆ ನಡೆಯುವ ಸಭೆಯಲ್ಲಿ ಐದು ಗ್ಯಾರಂಟಿಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಹೀಗಾಗಿ ಎಲ್ಲಾ ಸಚಿವರುಗಳನ್ನು ಸಭೆಗೆ ಆಹ್ವಾನ ಮಾಡಲಾಗಿದೆ. ಕೇಂದ್ರ ಸರ್ಕಾರಕ್ಕೂ ಕೆಲ ಇಲಾಖೆಗಳಿಂದ ಮನವಿಯನ್ನು ಮಾಡಬೇಕಿದೆ. ಅದು ಯಾವ ರೀತಿಯಲ್ಲಿ ಮನವಿ ಮಾಡಬೇಕು..? ಯಾರು ಮಾಡಬೇಕು ಎಂಬೆಲ್ಲಾ ವಿಚಾರವಾಗಿ ಇಂದು ಚರ್ಚೆ ನಡೆಸಲಿದ್ದಾರೆ.
ಇನ್ನು ಆಹಾರ ಇಲಾಖೆ ವಿಚಾರವೂ ಇಲ್ಲಿ ಚರ್ಚೆಯಾಗಲಿದೆ. ಎಷ್ಟು ಖರ್ಚಾಗಲಿದೆ ಎಂಬುದನ್ನು ಚರ್ಚಿಸುತ್ತಾರೆ. ಹೀಗಾಗಿ ಇಂದು ನಡೆಯುವ ಸಭೆಯಲ್ಲಿ 32 ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಮೀಟಿಂಗ್ ನಡೆಸಲಿದ್ದಾರೆ.
ನಾಳೆ ಕ್ಯಾಬಿನೆಟ್ ಮೀಟಿಂಗ್ ಹಿನ್ನೆಲೆ ಇಂದು ಸಭೆಯಲ್ಲಿ ಚರ್ಚೆ
ಈಗಾಗಲೇ ಸಚಿವರುಗಳು ಮಾತನಾಡಿ, ನಾವೂ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತೀವಿ. ಕೇಂದ್ರ ಸರ್ಕಾರ ಬೆಬಲ ನೀಡಲಿ ಬಿಡಲಿ ನಾವು ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇವೆ ಎಂದಿದ್ದಾರೆ.