ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 08 : ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮೆದೇಹಳ್ಳಿಯ ಮನೆಯೊಂದರಲ್ಲಿ ಪತ್ನಿಯನ್ನು ಸೀರೆಯಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದ ಪತಿಯನ್ನು (ಆರೋಪಿಯನ್ನು) ಪ್ರಕರಣ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
![](https://suddione.com/content/uploads/2024/10/gifmaker_me-5-1.gif)
ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮೆದೇಹಳ್ಳಿ ಗ್ರಾಮದಲ್ಲಿ ಶ್ರೀದೇವಿ(46 ವರ್ಷ) ಎಂಬ ಮಹಿಳೆಯನ್ನು ನಿನ್ನೆ (ಫೆಬ್ರವರಿ. 07 ರಂದು) ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಮಹಿಳೆಯ ಸಹೋದರ ನೀಡಿದ ದೂರಿನ ಮೇರೆಗೆ ವಿಶೇಷ ತಂಡವನ್ನು ರಚಿಸಿ ತನಿಖೆ ಆರಂಭಿಸಲಾಗಿತ್ತು.
ಘಟನೆ ಹಿನ್ನೆಲೆ :
ಕೊಲೆಯಾದ ಶ್ರೀದೇವಿಯ ಪತಿ ಮೆದೇಹಳ್ಳಿ ಗ್ರಾಮದ ಉಮಾಪತಿ ಕೊಲೆ ಮಾಡಿದ ಆರೋಪಿ. ಇವರಿಗೆ ಯೋಗೇಶ ಎಂಬ ಗಂಡು ಮಗ ಹಾಗೂ ನಂದಿನಿ ಎಂಬ ಹೆಣ್ಣು ಮಗಳು ಇರುತ್ತಾರೆ. ಪುತ್ರ ಯೋಗೇಶನು ಸುಮಾರು ಒಂದು ವರ್ಷದ ಹಿಂದೆ ಖಾಯಿಲೆಯಿಂದ ಮೃತಪಟ್ಟಿರುತ್ತಾನೆ. ಮಗಳ ಭವಿಷ್ಯದ ದೃಷ್ಟಿಯಿಂದ ಜಮೀನನ್ನು ನನ್ನ ಹಾಗೂ ಮಗಳ ಹೆಸರಿಗೆ ಮಾಡಿಸುವಂತೆ ಅಗಾಗ್ಗೆ ಗಲಾಟೆ ನಡೆಯುತ್ತಿರುತ್ತದೆ. ಇದೇ ವಿಚಾರವಾಗಿ ನಿನ್ನೆ ಮತ್ತೆ ಗಲಾಟೆ ನಡೆದಿದೆ. ಬೆಳಿಗ್ಗೆ ಸುಮಾರು 11.00 ಗಂಟೆಗೆ ಶ್ರೀದೇವಿಯು
ಮನೆಯ ದೇವರ ಕೋಣೆಯಲ್ಲಿಪೂಜೆ ಮಾಡುತ್ತಿದ್ದಾಗ ಆಕೆಯು ಉಟ್ಟುಕೊಂಡಿದ್ದ ಸೀರೆಯಿಂದ ಆಕೆಯ ಕುತ್ತಿಗೆಗೆ ಬಿಗಿದು ಕೈಯಿಂದ ಬಲವಾಗಿ ಕುತ್ತಿಗೆ ಇಸುಕಿ ಕೊಲೆ ಮಾಡಿರುತ್ತಾನೆ. ಶ್ರೀದೇವಿಯ ಕುತ್ತಿಗೆಯ ಹತ್ತಿರ ಒತ್ತಿದ ಗಾಯವಾಗಿದ್ದುಬಾಯಲ್ಲಿ ರಕ್ತ ಬಂದಿದು ಉಮಾಪತಿಯು ತನ್ನ ಅತ್ತಿಗೆ ಚಂದ್ರಮ್ಮಳನ್ನು ಮನೆಗೆ ಕರೆಯಿಸಿ ಶ್ರೀದೇವಿ ಪೂಜೆ ಮಾಡುತ್ತಿದ್ದಾಗ ಬಿದ್ದಳು ಎಂದು ಸುಳ್ಳು ಹೇಳಿ ತನ್ನ ಪತ್ನಿ ಶ್ರೀವಿಯನ್ನು ಚಂದ್ರಮ್ಮಳೊಂದಿಗೆ ಮದ್ಯಾಹ್ನ 12.00 ಗಂಟೆಗೆ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ದಾಖಲಿಸುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಮಹಿಳೆಯ ಸಹೋದರ ನೀಡಿದ ದೂರಿನ ಮೇರೆಗೆ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು, ಐಪಿಎಸ್, ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಜೆ. ಕುಮಾರಸ್ವಾಮಿ, ಹಾಗೂ ಚಿತ್ರದುರ್ಗ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ದಿನಕರ್ ರವರ ಮಾರ್ಗದರ್ಶನದಲ್ಲಿ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಮುದ್ದರಾಜ.ವೈ ,ಪೊಲೀಸ್ ನಿರೀಕ್ಷಕರು, ಬಿ. ರಘುನಾಥ. ವಿ. ಎಎಸ್‍ಐ, ಹಾಗೂ ಸಿಬ್ಬಂದಿಗಳಾದ ರಂಗನಾಥ್ ಕುಮಾರ್,
ತಿಮ್ಮರಾಯಪ್ಪ, ಮಾರುತಿ ರಾಂ, ಪ್ರಸನ್ನ , ಅವಿನಾಶ್, ಇದಾಯತ್‍ವುಲ್ಲಾ.ಜೆ. ವಿಶೇಷ ತಂಡವನ್ನು ರಚಿಸಲಾಗಿತ್ತು.
![](https://suddione.com/content/uploads/2025/01/studio-11.webp)
ಪ್ರಕರಣ ದಾಖಲಾದ 24 ಗಂಟೆಯೊಳಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿರುತ್ತಾರೆ. ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಪೊಲೀಸ್
ಅಧೀಕ್ಷಕರು ಶ್ಲಾಘಿಸಿದ್ದಾರೆ.
![](https://suddione.com/content/uploads/2025/02/site.webp)