Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಗರದ ವಿವಿಧ ಬಡಾವಣೆಗಳಲ್ಲಿ ಆದ್ಯತೆ ಮೇರೆಗೆ ಗ್ರಂಥಾಲಯ ಸ್ಥಾಪನೆಗೆ ಕ್ರಮ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

Facebook
Twitter
Telegram
WhatsApp

ಚಿತ್ರದುರ್ಗ, (ಡಿಸೆಂಬರ್.30) : ನಗರದ ವಿವಿಧ ಬಡಾವಣೆಗಳಲ್ಲಿ ಆದ್ಯತೆ ಮೇರೆಗೆ ಗ್ರಂಥಾಲಯ ಸ್ಥಾಪನೆಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.

ಚಿತ್ರದುರ್ಗ ಜ್ಞಾನ ಭಾರತಿ ವಿದ್ಯಾಮಂದಿರ ಹಿಂಭಾಗದ ಧವಳಗಿರಿ ಬಡಾವಣೆ 1ನ ಹಂತ, 1ನೇ ಕ್ರಾಸ್‍ನಲ್ಲಿ ಗುರುವಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಚಿತ್ರದುರ್ಗ ನಗರ ಕೇಂದ್ರ ಗ್ರಂಥಾಲಯ ಇವರ ಸಹಯೋಗದೊಂದಿಗೆ ಧವಳಗಿರಿ ಬಡಾವಣೆಯ ಶಾಖಾ ಗ್ರಂಥಾಲಯ ನೂತನ ಕಟ್ಟಡ ಹಾಗೂ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ನಗರದ ವಿವಿಧೆಡೆಗಳಲ್ಲಿ ಗ್ರಂಥಾಲಯದ ಅವಶ್ಯಕತೆ ಹೆಚ್ಚಾಗಿದ್ದು, ಅವಶ್ಯಕತೆ ಇರುವ ಕಡೆ ಗ್ರಂಥಾಲಯ ಪ್ರಾರಂಭಿಸಲಾಗುವುದು. ಗ್ರಂಥಾಲಯಕ್ಕೆ ನಿವೇಶ ಒದಗಿಸಿದರೆ ಸ್ವಂತ ಕಟ್ಟಡ ನಿರ್ಮಿಸಲಾಗುವುದು ಎಂದು ಹೇಳಿದರು.

ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಗ್ರಂಥಾಲಯ ಸ್ಥಾಪನೆ ಮಾಡಲಾಗುತ್ತಿದ್ದು, ಪ್ರತಿಯೊಬ್ಬರು ಗ್ರಂಥಾಲಯದ ಸದುಪಯೋಗ ಪಡಿಸಿಕೊಳ್ಳಬೇಕು. ಹಿರಿಯ ಓದುಗರಿಗೆ ಸಾಹಿತ್ಯ, ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ಪುಸ್ತಕ, ಮಕ್ಕಳಿಗೆ ಮಕ್ಕಳ ಸಾಹಿತ್ಯ ಪುಸ್ತಕಗಳು ಗ್ರಂಥಾಲಯದಲ್ಲಿ ಲಭ್ಯವಿರಲಿವೆ ಎಂದರು.
ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದೂರಾಲೋಚನೆಯಿಂದ ಚಿತ್ರದುರ್ಗ ನಗರ ಸೇರಿದಂತೆ ಚಿಕ್ಕಮಗಳೂರು, ತುಮಕೂರು ವಿವಿಧೆಡೆಗಳಲ್ಲಿ ಉತ್ತಮವಾದ ಗ್ರಂಥಾಲಯನ್ನು ನಿರ್ಮಾಣ ಮಾಡಿದ್ದು, ಇವುಗಳ ಈಗಲೂ ಬಳಕೆಯಾಗುತ್ತಿವೆ. ಸಾರ್ವಜನಿಕರು ಗ್ರಂಥಾಲಯದ ಸದುಪಯೋಗ ಪಡೆದುಕೊಂಡು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.

ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್.ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಚಿತ್ರದುರ್ಗ ಗ್ರಂಥಾಲಯವು 1969ರಲ್ಲಿ ಪ್ರಾರಂಭಗೊಂಡು ಕಾರ್ಯನಿರ್ವಹಿಸುತ್ತಿದೆ. 2007ರಲ್ಲಿ ನಗರ ಕೇಂದ್ರ ಗ್ರಂಥಾಲಯ ಸ್ಥಾಪನೆಗೊಂಡು ವಿವಿಧ ಬಡಾವಣೆಗಳಾದ ಕವಾಡಿಗರಹಟ್ಟಿ, ವೀರಸೌಧ, ಬಂಧಿಖಾನೆ, ಸ್ಪರ್ಧಾತ್ಮಕ ಅಧ್ಯಯನ ಕೇಂದ್ರ, ಮುರುಘಾ ಮಠಗಳಲ್ಲಿ ಪ್ರಾರಂಭವಾಗಿದೆ. ಕೆಳಗೋಟೆ ವ್ಯಾಪ್ತಿಯಲ್ಲಿ ಬರುವ ಐಯುಡಿಪಿ ಬಡಾವಣೆ 9ನೇ ಕ್ರಾಸ್, 11ನೇ ಕ್ರಾಸ್ ಹಾಗೂ ತರಳುಬಾಳು ನಗರದಲ್ಲಿ ಖಾಲಿ ನಿವೇಶನಗಳನ್ನು ಈಗಾಗಲೇ ಪಡೆಯಲಾಗಿದೆ. ಚಿತ್ರದುರ್ಗ ಸಾರ್ವಜನಿಕ ಓದುಗರಿಗೆ ಗ್ರಂಥಾಲಯ ಅಭಿರುಚಿ ಹೆಚ್ಚಿಸಲು ಕ್ರಮವಹಿಸಲಾಗವುದು ಎಂದರು.
ದವಳಗಿರಿ ಬಡಾವಣೆ ಡಿಜಿಟಲ್ ಗ್ರಂಥಾಲಯ ಸೇವೆಯನ್ನು ಹೊಂದಿದೆ. ಡಿಜಿಟಲ್ ಗ್ರಂಥಾಲಯವೆಂದರೆ ನಾವು ಪುಸ್ತಕಗಳನ್ನು ಓದುವ ರೀತಿಯಲ್ಲಿಯೇ ಇಂಟರ್‍ನೆಟ್ ಸೌಲಭ್ಯವಿರುವ ಎಲ್ಲ ಜಾಗಗಳಲ್ಲಿ ಕಂಪ್ಯೂಟರ್ ಮೂಲಕ ಅಥವಾ ತಮ್ಮ ಮೊಬೈಲ್ ಮೂಲಕ www.digitalpubliclibrary.org and esarvajanikagranthalay appಮೂಲಕ ವೈಯಕ್ತಿಕ ಸದಸ್ಯತ್ವನ್ನು ಉಚಿತವಾಗಿ ಪಡೆಯಬಹುದಾಗಿದೆ. ಇದರಲ್ಲಿ ಒಟ್ಟು 10 ಲಕ್ಷದಷ್ಟು ಈ ಪುಸ್ತಕಗಳು ಪಿಡಿಎಫ್ ಇದ್ದು, 1 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತ ಶಾಲಾ ಪಠ್ಯಪುಸ್ತಕದ ಪಠ್ಯಕ್ರಮಕ್ಕೆ ಅನುಗುಣವಾಗಿ ವಿಡಿಯೋಗಳು ಸಹ ಲಭ್ಯ ಇದೆ. ಜಿಲ್ಲೆಯಲ್ಲಿ 12,71,693 ಸದಸ್ಯತ್ವ ಹೊಂದಿದ್ದಾರೆ ಎಂದರು.

ಚಿತ್ರದುರ್ಗ ತಾಲ್ಲೂಕಿನ ಎಲ್ಲ ಶಾಖಾ ಗ್ರಂಥಾಲಯಗಳಲ್ಲಿ ಡಿಜಿಟಲ್ ಗ್ರಂಥಾಲಯ ಸೌಲಭ್ಯವಿರುತ್ತದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸುಮಾರು 22 ಡಿಜಿಟಲ್ ಗ್ರಂಥಾಲಯ ಹೊಂದಿದ್ದು, ಇನ್ಣು ಜಿಲ್ಲಾ ಪಂಚಾಯಿತಿ ಅನುದಾನದಿಂದ ಈ ಬಾರಿ 7 ಗ್ರಂಥಾಲಯಗಳನ್ನು ಡಿಜಿಟಲ್ ಗ್ರಂಥಾಲಯಗಳಾಗಿ ಪರಿವರ್ತನೆ ಮಾಡಲಾಗುತ್ತಿದೆ. ಇದರ ಸದುಪಯೋಗ ಸಾರ್ವಜನಿಕರು ಪಡೆಯಬೇಕು ಎಂದರು.

ಜಿಲ್ಲಾ ಕೇಂದ್ರ ಗ್ರಂಥಾಲಯ ಕಚೇರಿ ನೂತನ ಕಟ್ಟಡ ಉದ್ಘಾಟನೆ: ಚಿತ್ರದುರ್ಗ ನಗರದ ಸರಸ್ಪತಿಪುರಂ ಬಡಾವಣೆ ಸ್ಪರ್ಧಾತ್ಮಕ ಅಧ್ಯಯನ ಕೇಂದ್ರದ ಆವರಣದಲ್ಲಿ ಗುರುವಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಕೋಲ್ಕಾತ್ತಾ ರಾಜಾರಾಂ ಮೋಹನ್ ರಾಯ್ ಗ್ರಂಥಾಲಯ ಪ್ರತಿಷ್ಠಾನ, ಜಿಲ್ಲಾ ಕೇಂದ್ರ ಗ್ರಂಥಾಲಯ ಇವರ ಸಹಯೋಗದೊಂದಿಗೆ ರಾಜಾರಾಮ್ ಮೋಹನ್‍ರಾಯ್ ಪ್ರತಿಷ್ಠಾನ ಕೊಲ್ಕತ್ತಾ ಇವರ ಅನುದಾನದಲ್ಲಿ ನಿರ್ಮಿಸಲಾದ ಚಿತ್ರದುರ್ಗ ಜಿಲ್ಲಾ ಕೇಂದ್ರ ಗ್ರಂಥಾಲಯದ ಕಚೇರಿಯ ನೂತನ ಕಟ್ಟಡವನ್ನು ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ  ಉದ್ಘಾಟಿಸಿರು.

ಸ್ಪರ್ಧಾತ್ಮಕ ಸಾಮಾನ್ಯ ಜ್ಞಾನದ ಸ್ಪರ್ಧೆಯ ವಿಜೇತರು: ಸಾರ್ವಜನಿಕ ಗ್ರಂಥಾಲಯ ಇಲಾಖೆ, ಚಿತ್ರದುರ್ಗ ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯ ಹಾಗೂ ದಾವಣಗೆರೆ ಚಾಣಕ್ಯ ಕೋಚಿಂಗ್ ಸೆಂಟರ್ ಇವರುಗಳ ಸಹಯೋಗದೊಂದಿಗೆ ಕುವೆಂಪು ಜನ್ಮ ದಿನೋತ್ಸವದ ಅಂಗವಾಗಿ ಈಚೆಗೆ ಸ್ಪರ್ಧಾತ್ಮಕ ಓದುಗರಿಗೆ ಸಾಮಾನ್ಯ ಜ್ಞಾನ ಮಾದರಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ವೃತ್ತಿ ಮಾರ್ಗದರ್ಶಿ ವಿಭಾಗ: ಆರ್.ಮಂಜುನಾಥ್ (ಪ್ರಥಮ), ವಿ.ಶ್ರೀಧರ (ದ್ವಿತೀಯ) ಹರೀಶ (ತೃತೀಯ) ಮಂಜುನಾಥ್ ಜೆ, ಪ್ರವೀಣ್ ಎಸ್.ಬಿ ಸಮಾಧಾನಕರ ಬಹುಮಾನ ನೀಡಲಾಯಿತು.
ಸ್ಪರ್ಧಾತ್ಮಕ ಅಧ್ಯಯನ ಕೇಂದ್ರ: ಆರ್.ಮಹಲಿಂಗಪ್ಪ (ಪ್ರಥಮ), ಪಿ.ಗಾದ್ರಪ್ಪ (ದ್ವಿತೀಯ), ಕೆ.ಸಿ.ಲಿಂಗಮೂರ್ತಿ (ತೃತೀಯ) ಟಿ.ಪ್ರವೀಣ್ ಕುಮಾರ್ ಸಮಾಧಾನಕರ ಬಹುಮಾನ ಪಡೆದಿದ್ದಾರೆ.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಬದರಿನಾಥ್, ನಗರಸಭೆ ಅಧ್ಯಕ್ಷೆ ತಿಮ್ಮಪ್ಪ ವೆಂಕಟೇಶ್, ಉಪಾಧ್ಯಕ್ಷೆ ಅನುರಾಧ ರವಿಕುಮಾರ್, ನಗರಸಭೆ ಸದಸ್ಯರಾದ ಲಕ್ಷ್ಮಮ್ಮ, ಬಾಲಮ್ಮ, ತಾರಕೇಶ್ವರಿ, ಸುರೇಶ್, ಹರೀಶ್, ವೀರೇಶ್, ಜಯಣ್ಣ, ವೆಂಕಟೇಶ್, ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾದ ಓ.ಪ್ರತಾಪ್ ಜೋ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಮೂಡಲಗಿರಿಯಪ್ಪ, ಕಟ್ಟಡದ ನಿರ್ಮಾಣದ ಕಲ್ಲೇಶ್ ಗುಂಡೇರಿ, ಪರಮೇಶ್ವರಪ್ಪ, ಹಿರಿಯ ಲೆಕ್ಕಪರಿಶೋಧಕರ ಸಿ.ಜೆ.ಶ್ರೀನಿವಾಸ್, ದವಳಗಿರಿ ಬಡಾವಣೆಯ ನಿವಾಸಿಗಳಾದ ಕೃಷ್ಣಪ್ಪ ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕುಡಿಯುವ ನೀರಿನ ಸಮಸ್ಯೆ : ಮತದಾನ ಬಹಿಷ್ಕರಿಸಿದ್ದವರಿಂದ ಸಂಜೆ ವೇಳೆಗೆ ಮತದಾನ..!

ಚಿತ್ರದುರ್ಗ : ಇಂದು ಕರ್ನಾಟಕದಲ್ಲಿ ಮೊದಲ ಲೋಕಸಭಾ ಚುನಾವಣೆಗೆ ನಡೆದಿದೆ. ಎಷ್ಟೇ ಜಾಗೃತಿ ಮೂಡಿಸಿದರು ಸಾಕಷ್ಟು ಮಂದಿ ಮತದಾನ ಮಾಡಿಲ್ಲ. ಪರಿಪೂರ್ಣ ಮತದಾನ ನಡೆದಿಲ್ಲ. ಚುನಾವಣೆ ಬಂದಾಗೆಲ್ಲಾ ಜಾಗೃತಿ ಕಾರ್ಯ ನಡೆದರು ಮತದಾನ ಪೂರ್ಣವಾಗುವುದರಲ್ಲಿ

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸಂಜೆ 5 ರವೇಳೆಗೆ ಶೇಕಡಾವಾರು ಮತದಾನ ಎಷ್ಟು ? 

ಚಿತ್ರದುರ್ಗ.ಏ.26: ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಏ.26 ರಂದು  ಜರುಗಿದ ಮತದಾನದಲ್ಲಿ ಸಂಜೆ 5 ಗಂಟೆ ವೇಳೆಗೆ  ಶೇ.67 ರಷ್ಟು ಮತದಾನ ದಾಖಲಾಗಿದೆ. ಸಂಜೆ 6 ಗಂಟೆಯವರೆಗೂ ಮತ ಚಲಾಯಿಸಲು ಅವಕಾಶವಿದ್ದು, ಮತದಾರರು ಉತ್ಸಾಹ ತೋರಿ

ಮತದಾನಕ್ಕೂ ಮುನ್ನ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರವರು ಮತದಾನಕ್ಕೂ ಮುನ್ನ

error: Content is protected !!