ಸುದ್ದಿಒನ್, ಚಿತ್ರದುರ್ಗ, ಸೆ.05 :ಸರ್ವಪಲ್ಲಿ ಡಾಕ್ಟರ್ ಎಸ್ ರಾಧಾಕೃಷ್ಣನ್ ರವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಪ್ರಕೃತಿ ಆಂಗ್ಲಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ತಮ್ಮ ಸುಶ್ರಾವ್ಯವಾದ ಕಂಠದಿಂದ ದೇವತಾ ಪ್ರಾರ್ಥನೆಯೊಂದಿಗೆ ಶಿಕ್ಷಕಿಯಾದ ಕುಮಾರಿ ರಮ್ಯಾ ರವರು ನಡೆಸಿಕೊಟ್ಟರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಸರ್ವರನ್ನು ಶಿಕ್ಷಕಿಯಾದ ಶ್ರೀಮತಿ ಕವಿತಾರವರು ಸ್ವಾಗತಿಸಿದರು.
ನಂತರ ಶಿಕ್ಷಕಿಯಾದ ಶ್ರೀಮತಿ ರೇಷ್ಮಾ ರವರು ಗುರು ಶಿಷ್ಯರ ಭಾಂಧವ್ಯದ ಕುರಿತಾದ ಕಥೆಯೊಂದಿಗೆ ಡಾಕ್ಟರ್ ಎಸ್. ರಾಧಾಕೃಷ್ಣನ್ ರವರ ಜೀವನ ಹಾಗೂ ಸಾಧನೆಗಳನ್ನು ತಮ್ಮ ಭಾಷಣದಲ್ಲಿ ಸವಿಸ್ತಾರವಾಗಿ ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿಕೊಟ್ಟರು.
ನಂತರ ವಿದ್ಯಾರ್ಥಿಗಳು ಶಿಕ್ಷಕರ ಬಗ್ಗೆ ಸಮೂಹ ಗಾಯನವನ್ನು ಹಾಡಿದರು.
ನಂತರ ಶಾಲೆಯ ಉಪಾಧ್ಯಕ್ಷರಾದ ಉಮೇಶ್ ವೀ ತುಪ್ಪದ ರವರು ಮಾತನಾಡುತ್ತಾ ಗುರುಗಳ ಸ್ಮರಣೆ ಅವಶ್ಯ, ಗುರಿಯನ್ನು ಒಳ್ಳೆಯ ಮಾರ್ಗದಲ್ಲಿ ತೋರಿಸುವವನೇ ಗುರು. ಗುರಿಯನ್ನು ಮುಟ್ಟುವ ದಾರಿಯಲ್ಲಿ ಸಂಸ್ಕಾರ, ಒಳ್ಳೆಯ ನಾಗರೀಕನಾಗಿ ಮುಂದುವರೆಯುವುದು ಅತ್ಯಂತ ಅವಶ್ಯಕ ಎಂದು ಹೇಳಿದರು.
ನಂತರ ಶಾಲೆಯಲ್ಲಿ ದೀರ್ಘಕಾಲದಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಾದ ಶ್ರೀ ವಾಜಿದ ಹಾಗೂ ಶ್ರೀಮತಿ ಜಯಮ್ಮನವರನ್ನು ಸನ್ಮಾನಿಸಲಾಯಿತು.
ನಂತರ ಮಾತನಾಡಿದ ಶ್ರೀಮತಿ ಶ್ವೇತಾ ಕಾರ್ತಿಕ್ ರವರು ವಿದ್ಯಾರ್ಥಿಗಳು ಚೆನ್ನಾಗಿ ಓದಿ ನೂರಕ್ಕೆ ನೂರು ಅಂಕ ಪಡೆದು ಶಿಕ್ಷಕರಿಗೆ ಗುರುದಕ್ಷಿಣೆಯನ್ನು ನೀಡಬೇಕಾಗಿ ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಹಾಗೂ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಲೆಯ ಟ್ರಸ್ಟಿ ಗಳಾದ ಶ್ರೀ ಡಾಕ್ಟರ್ ಮಧುಸೂಧನ್ ರೆಡ್ಡಿ, ಶ್ರೀಮತಿ ವೇದ ರವೀಂದ್ರ ರವರು, ಮುಖ್ಯೋಪಾಧ್ಯಾಯರಾದ ಶ್ರೀಮತಿ ಶಶಿಕಲಾರವರು ಎಲ್ಲ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.
ನಂತರ ಎಲ್ಲ ಶಿಕ್ಷಕರಿಗೂ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.
ನಂತರ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಶಾಲೆಯ ಅಧ್ಯಕ್ಷರಾದ ಶ್ರೀಯುತ ಎಂ ಕೆ ರವೀಂದ್ರ ರವರು ನಿಮ್ಮ ಜೀವನದಲ್ಲಿ ಪಾಠ ಕಲಿಸಿಕೊಡುವ ಶಿಕ್ಷಕರು ಹಾಗೂ ಪೋಷಕರೇ ನಿಮಗೆ ದೇವರು ಇವರಿಗೆ ಗೌರವವನ್ನು ನೀಡುತ್ತಾ ನಿಮ್ಮ ಜೀವನದ ಗುರಿಯನ್ನು ಮುಟ್ಟುವ ಪ್ರಯತ್ನವನ್ನು ಮಾಡಿ ಎಂಬುದಾಗಿ ಹೇಳಿ, ಎಲ್ಲ ಶಿಕ್ಷಕರಿಗೂ ಈ ಸಂದರ್ಭದಲ್ಲಿ ನೆನಪಿನ ಕಾಣಿಕೆಯನ್ನು ವಿತರಿಸಿದರು.
ನಂತರ ಕಾರ್ಯದರ್ಶಿಯವರಾದ ಶ್ರೀಯುತ ಎಂ ಕಾರ್ತಿಕ್ ರವರು ಗುರು ಬ್ರಹ್ಮ ಗುರು ವಿಷ್ಣು ಶ್ಲೋಕದ ಅರ್ಥವನ್ನು ಮಕ್ಕಳಿಗೆ ವಿವರಿಸುತ್ತಾ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸರ್ವರಿಗೂ ಹಾಗೂ ತಮಗೆ ವಿದ್ಯೆ ಕಲಿಸಿದ ಗುರುಗಳೆಲ್ಲರಿಗೂ ಈ ಸಂದರ್ಭದಲ್ಲಿ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸಿದರು
ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿಯರಾದ ಕುಮಾರಿ ತೇಜಸ್ವಿನಿ ಹಾಗೂ ಕುಮಾರಿ ಶ್ವೇತಾರವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು