ಪ್ರತಿಯೊಬ್ಬರು ಕನ್ನಡತನವನ್ನು ಬೆಳೆಸಿಕೊಂಡರೆ ಕನ್ನಡ ರಾಜ್ಯೋತ್ಸವಕ್ಕೆ ಅರ್ಥ : ಡಾ.ಬಿ.ರಾಜಶೇಖರಪ್ಪ

2 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ನವೆಂಬರ್.25  : ವಿದ್ಯಾರ್ಥಿಗಳು ಕನ್ನಡ ನಾಡು, ನುಡಿ, ನೆಲ, ಜಲದ ಬಗ್ಗೆ ಒಲವು ಮೂಡಿಸಿಕೊಂಡು ಸಾಹಿತ್ಯ, ಸಂಶೋಧನೆ ಬಗ್ಗೆಯೂ ಆಸಕ್ತಿ ಬೆಳೆಸಿಕೊಳ್ಳುವುದು ಒಳ್ಳೆಯದು ಎಂದು ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.

ರಾಘವೇಂದ್ರ ವಿದ್ಯಾಸಂಸ್ಥೆ, ಭಾರತೀಯ ಯೋಗ ಶಿಕ್ಷಣ ಸಂಸ್ಥೆ, ಕೋಟೆ ವಾಯುವಿಹಾರಿಗಳ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಕೋಟೆ ಮುಂಭಾಗದಲ್ಲಿರುವ ರಾಘವೇಂದ್ರ ವಿದ್ಯಾಸಂಸ್ಥೆಯಲ್ಲಿ ಶನಿವಾರ ನಡೆದ 68 ನೇ ಕನ್ನಡ ರಾಜ್ಯೋತ್ಸವ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿಯನ್ನು ಉದ್ಗಾಟಿಸಿ ಮಾತನಾಡಿದರು.

ರಾಘವೇಂದ್ರ ವಿದ್ಯಾಸಂಸ್ಥೆಯಲ್ಲಿ 68 ನೇ ಕನ್ನಡ ರಾಜ್ಯೋತ್ಸವ ಹಾಗೂ ಕವಿಗೋಷ್ಠಿ ಏರ್ಪಡಿಸಿರುವುದು ಅರ್ಥಪೂರ್ಣವಾಗಿದೆ. ಹರಿದು ಹಂಚಿಹೋಗಿದ್ದ ಕರ್ನಾಟಕದ ಭಾಗಗಳನ್ನು ಒಗ್ಗೂಡಿಸುವಲ್ಲಿ ಅನೇಕ ಹಿರಿಯರ ಹೋರಾಟ ತ್ಯಾಗ ಬಲಿದಾನವಿದೆ. ರಾಷ್ಟ್ರದ ಬೆಳವಣಿಗೆಯಲ್ಲಿ ಕರ್ನಾಟಕದ ಕೊಡುಗೆ ಅಪಾರ. ಇಲ್ಲಿನ ಜಲ, ಅರಣ್ಯ, ಖನಿಜ ಸೇರಿ ಅಖಂಡ ಭಾರತದ ಅಭಿವೃದ್ದಿಯಲ್ಲಿ ಕನ್ನಡಿಗರದು ಪಾಲಿದೆ ಎಂದು ಹೇಳಿದರು.

ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ ಕವಿ, ಕಾವ್ಯ ಕುರಿತು ಆಲೋಚಿಸಿದರೆ ಅನೇಕ ಕುತೂಹಲಕಾರಿ ಸಂಗತಿಗಳು ನೆನಪಿಗೆ ಬರುತ್ತದೆ. ರಾಜ ಮಹಾರಾಜರ ಆಸ್ಥಾನದಲ್ಲಿಯೂ ಕವಿಗಳು ಇರುತ್ತಿದ್ದರು. ಕವಿಗಳ ಕಾವ್ಯವಾಚನಕ್ಕೆ ಈಗಲೂ ಪ್ರಾಶಸ್ತ್ಯವಿದೆ. ಕಾವ್ಯ ರಚನೆ ಸೂಕ್ಷ್ಮವಾದುದು. ಸಾಲುಗಳ ಮಧ್ಯದಲ್ಲಿ ಕಾವ್ಯವಿದೆ ಎಂದು ನುಡಿದರು.

ಸರಸ್ವತಿ ಎಂದರೆ ಕೇವಲ ಒಂದು ಹೆಣ್ಣಿನ ಚಿತ್ರವಲ್ಲ. ಭಗವಂತನ ವಾಣಿ ಎಂದು ಪಂಪ ಹೇಳಿದ್ದಾರೆ. ಐದನೆ ಶತಮಾನದಲ್ಲಿಯೇ ಕನ್ನಡದ ಹಲ್ಮಿಡಿ ಶಾಸನ ಬೇಲೂರು ತಾಲ್ಲೂಕಿನ ಹಳ್ಳಿಯಲ್ಲಿ ದೊರೆತಿದೆ. ಕನ್ನಡಿಗರಿಗೆ ಮೊಟ್ಟ ಮೊದಲು ಕನ್ನಡದ ಆಳ್ವಿಕೆ ತಂದಿದ್ದು, ಮಯೂರವರ್ಮ. ಕನ್ನಡ ಸಾಹಿತ್ಯಕ್ಕೆ ಸಮೃದ್ದವಾದ ಬೆಳವಣಿಗೆಯಿದೆ. ಬಸವಣ್ಣ, ಅಲ್ಲಮಪ್ರಭು ಇವರುಗಳು ಪ್ರಸಿದ್ದ ವಚನಕಾರರು. ರಾಜ್ಯೋತ್ಸವ ಆಚರಣೆಯ ಮೂಲಕವಾದರೂ ಪ್ರತಿಯೊಬ್ಬರು ಕನ್ನಡತನವನ್ನು ಬೆಳೆಸಿಕೊಳ್ಳುವ ಸಂಕಲ್ಪ ಮಾಡಿದಾಗ ನಿಜವಾಗಿಯೂ ಕನ್ನಡ ರಾಜ್ಯೋತ್ಸವಕ್ಕೆ ಅರ್ಥವಿರುತ್ತದೆ ಎಂದು ತಿಳಿಸಿದರು.

ಉಪನ್ಯಾಸಕ ವಿ.ಚನ್ನಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡುತ್ತ ಮಾತೃಭಾಷೆ ಕನ್ನಡವನ್ನು ಬಳಸಿದಷ್ಟು ಅಭಿವೃದ್ದಿಯಾಗುತ್ತದೆ. ಜಗತ್ತಿನ ಅತ್ಯಂತ ಸುಂದರ ಭಾಷೆಗಳಲ್ಲಿ ಕನ್ನಡವೂ ಒಂದು. ಕನ್ನಡ ನಾಡು, ನುಡಿ, ನೆಲ, ಜಲದ ಉಳಿವಿಗಾಗಿ ಪ್ರತಿಯೊಬ್ಬರು ಕಟಿಬದ್ದರಾಗಬೇಕು. ಕನ್ನಡ ರಾಜ್ಯೋತ್ಸವ ಆಚರಣೆಯ ನೆಪದಲ್ಲಾದರೂ ಭಾಷೆ ಬಗ್ಗೆ ಎಲ್ಲರಲ್ಲಿಯೂ ಜಾಗೃತಿ ಮೂಡಬೇಕಿದೆ ಎಂದು ಹೇಳಿದರು.

ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ರಾಘವೇಂದ್ರ ವಿದ್ಯಾಸಂಸ್ಥೆ ಸಂಸ್ಥಾಪಕ ಹೆಚ್.ಶ್ರೀನಿವಾಸ್, ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಟಿ.ವಿ.ಸುರೇಶ್‍ಗುಪ್ತ, ನಿವೃತ್ತ ಪ್ರಾಧ್ಯಾಪಕರಾದ ಶ್ರೀಮತಿ ಡಾ. ಯಶೋಧ ಬಿ.ರಾಜಶೇಖರಪ್ಪ, ಭಾರತೀಯ ಜೀವವಿಮಾ ನಿಗಮದ ಜಿ.ಹರೀಶ್‍ಬೇದ್ರೆ, ರಾಘವೇಂದ್ರ ವಿದ್ಯಾಸಂಸ್ಥೆಯ ಪ್ರಾಚಾರ್ಯರಾದ ಎ.ಜಿ.ಬಸವರಾಜಪ್ಪ, ವೇದಿಕೆಯಲ್ಲಿದ್ದರು.
ಶ್ರೀಮತಿ ಸರ್ವದ ಪ್ರಾರ್ಥಿಸಿದರು. ರವಿ ಅಂಬೇಕರ್ ಸ್ವಾಗತಿಸಿದರು.

Share This Article
Leave a Comment

Leave a Reply

Your email address will not be published. Required fields are marked *