ನ್ಯೂಯಾರ್ಕ್: ಇತ್ತಿಚೆಗೆ ವಿದೇಶಗಳಲ್ಲಿ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಕೆಲಸ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಮೆಕ್ ಡೊನಾಲ್ಡ್ ತನ್ನ ಸಹದ್ಯೋಗಿಗಳನ್ನು ತೆಗೆಯುವ ಪ್ಲ್ಯಾನ್ ಮಾಡಿಕೊಂಡಿದೆ. ಅದಕ್ಕೆ ಏನೆಲ್ಲಾ ಬೇಕೋ ಆ ಎಲ್ಲಾ ತಯಾರಿ ನಡೆಸಿದೆ. ಹೀಗಾಗಿ ತಾತ್ಕಾಲಿಕವಾಗಿ ಎಲ್ಲಾ ಕಚೇರಿಗಳನ್ನು ಮುಚ್ಚಲಿದೆ ಎಂದು ವರದಿಯಾಗಿದೆ.
ಮೆಕ್ ಡೊನಾಲ್ಡ್ ಕೆಲಸಗಾರರನ್ನು ವಜಾಗೊಳಿಸಲು ನಿರ್ಧಾರ ಮಾಡಿದೆ ಎಂದು ವರದಿ ಹೇಳುತ್ತಿದೆ. ಯಾಕಂದ್ರೆ ಮೆಕ್ ಡೊನಾಲ್ಡ್ ಸೋಮವಾರದಿಂದ ಬುಧವಾರದವರೆಗೆ ತನ್ನ ನೌಕರರಿಗೆ ಮನೆಯಿಂದಾನೇ ಕೆಲಸ ಮಾಡಲು ಸೂಚಿಸಿದೆ. ಈ ವಾರ ನಿಗದಿಪಡಿಸಲಾಗಿದ್ದ ವೈಯಕ್ತಿಕ ಸಭೆಗಳನ್ನು ರದ್ದುಪಡಿಸಲು ಸೂಚಿಸಿದೆ.
ವರ್ಕ್ ಫ್ರಮ್ ಹೋಂ ಮುಗಿಯುವುದರೊಳಗೆ ನೌಕರರನ್ನು ವಜಾಗೊಳಿಸುವ ಬಗ್ಗೆ ಸುದ್ದಿ ಹೊರ ಬೀಳಲಿದೆ. ಇನ್ನು ಎಷ್ಟು ಜನರನ್ನು ಕೆಲಸದಿಂದ ತೆಗೆಯುತ್ತೇವೆಂದು ಸ್ಪಷ್ಟನೆ ನೀಡಿಲ್ಲ. ಈಗಾಗಲೇ ಸಾಕಷ್ಟು ಬೃಹತ್ ಕಂಪನಿಗಳಿಂದಾನೇ ನೌಕರರನ್ನು ವಜಾಗೊಳಿಸಲಾಗಿದೆ.