ಬೆಂಗಳೂರು: ಆಕೆ ಇನ್ನು MBBS ಮಾಡ್ತಿದ್ದಳು. ಡಾಕ್ಟರ್ ಆಗುವ ಕನಸು ಕಂಡಿದ್ದಾಕೆ. ಆದ್ರೆ ಅದೇಕೋ ಸ್ನಾನದ ಕೋಣೆಗೆ ಹೋದಾಕೆ ಮತ್ತೆ ಬರಲೇ ಇಲ್ಲ. ಡಾಕ್ಟರ್ ಆಗುವ ಕನಸನ್ನು ಹಾಗೆಯೇ ಬಿಟ್ಟು ಹೊರಟೆ ಬಿಟ್ಟಳು.
ಹೌದು, 23 ವರ್ಷದ ಸಂಪದಾ ಎಂಬ ವಿದ್ಯಾರ್ಥಿನಿ ಹೀಗೆ ದುರಂತ ಸಾವನ್ನಪ್ಪಿದ್ದಾಳೆ. ಮಹಾಲಕ್ಷ್ಮಿ ಲೇಔಟ್ ನಲ್ಲಿ ವಾಸವಿದ್ರು. ಅಂದು ಆಗಸ್ಟ್ 4..ಮಧ್ಯಾಹ್ನದ ಸಮಯ. ಸ್ನಾನಕ್ಕೆಂದು ಸ್ನಾನದ ಕೋಣೆಗೆ ಹೋಗಿದ್ದಳು. ಎರಡು ಗಂಟೆಯಾದ್ರೂ ಹಿರಗೆ ಬಂದಿರಲಿಲ್ಲ. ಆಮೇಲೆ ನೋಡಿದ್ರೆ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಅದಕ್ಕೆ ಕಾರಣ ಗ್ಯಾಸ್ ಗೀಜರ್ ಎಂದೇ ಹೇಳಲಾಗಿದೆ.
ಗ್ಯಾಸ್ ಗೀಜರ್ ಲೀಕ್ ಆದ ಪರಿಣಾಮ, ಉಸಿರು ಕಟ್ಟಿ ಸಂಪದಾ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಆಕೆ ಎಷ್ಟೊತ್ತಾದ್ರೂ ಹೊರಗೆ ಬಾರದ್ದನ್ನ ಗಮಿನಿಸಿ, ಸ್ನಾನದ ಕೋಣೆಯ ಬಾಗಿಲು ಮುರುದಾಗ, ಆಕೆ ಕುಸಿದು ಬಿದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಆಸ್ಪತ್ರೆಗೆ ಸೇರಿಸಿದ್ರು ಪ್ರಯೋಜನವಾಗಿಲ್ಲ. ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಾವಿರಾರು ಕನಸು ಕಂಡಿದ್ದ ಅಂತಿಮ ವರ್ಷದ ವಿದ್ಯಾರ್ಥಿನಿ ಕನಸನ್ನೆಲ್ಲಾ ಹಾಗೆಯೆ ಬಿಟ್ಟು ಹೋಗೆ ಬಿಟ್ಟಿದ್ದಾಳೆ.