ಇದು ವ್ಯಕ್ತಿಪೂಜೆ ಅಲ್ಲ, ಸಿದ್ದರಾಮಯ್ಯ ಹುಟ್ಟುಹಬ್ಬ : ಡಿಕೆಶಿಗೆ ಉತ್ತರ ಕೊಟ್ಟರಾ ಎಂ ಬಿ ಪಾಟೀಲ್..?

2 Min Read

 

ಬೆಂಗಳೂರು: ಸಂತೋಷ ಪಾಟೀಲ್ ಪತ್ನಿ ರಾಜ್ಯಪಾಲರಿಗೆ ದೂರು ನೀಡಿದ ವಿಚಾರಕ್ಕೆ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಸಹಜವಾಗಿಯೆ ಇಂತಹ ಪ್ರಕರಣದ ತನಿಖೆ ಆಗಬೇಕು. ಆದ್ರೆ ಸರ್ಕಾರ ಮುಚ್ಚುವ ಪ್ರಯತ್ನ ಮಾಡುತ್ತಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ತನಿಖೆ ಆಗಬೇಕಿತ್ತು. ಈಶ್ವರಪ್ಪ ಮೇಲೆ ತನಿಖೆ ಆಗಬೇಕಿತ್ತು. ಈಗ ಸಂತೋಷ ಪತ್ನಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ರಾಜ್ಯಪಾಲರು ಅವರಿಗೆ ನ್ಯಾಯ ನೀಡುವ ಕೆಲಸ ಮಾಡ್ತಾರೆ. ರಾಜ್ಯಪಾಲರಿಗೆ ನ್ಯಾಯ ಕೊಡಿಸ್ತಾರೆ ಅಂತ ವಿಶ್ವಾಸ ಇದೆ ಎಂದಿದ್ದಾರೆ.

ಶಾಲಾ ಮಕ್ಕಳಿಗೆ ಮೊಟ್ಟೆ ನೀಡಬಾರದು ಎಂಬ ವರದಿ ವಿಚಾರಕ್ಕೆ ಮಾತನಾಡಿದ ಎಂ ಬಿ ಪಾಟೀಲ್, ಎಕ್ಸಪರ್ಟ್ ನ್ಯೂಟ್ರಿಸಿಯನ್ ಇದ್ದಾರೆ. ಅವರ ಅಭಿಪ್ರಾಯ ಸರ್ಕಾರ ಪಡೆಯಬೇಕು. ನಾವು ಸಣ್ಣವರಿದ್ದಾಗನಿಂದ ಹಾಲು ಕುಡಿದು ಬೆಳದಿದ್ದೇವೆ. ಈಗ ಹಾಲು ಮೊಟ್ಟೆ ಕೊಡಬಾರದು ಅನ್ನುವುದು ಅವೈಜ್ಞಾನಿಕ. ಬಿಜೆಪಿ ಅಜೆಂಡಾ ಜಾರಿಗೆ ಸರ್ಕಾರ ಹೊರಟಿದೆ. ಆಹಾರ ಪದ್ದತಿ ವಿಚಾರ ತಜ್ಞರು ಅಭಿಪ್ರಾಯ ಪಡೆಯಬೇಕು. ಸರ್ಕಾರ ಮನಸ್ಸಿಗೆ ಬಂದ ಹಾಗೆ ವರದಿ ಜಾರಿ ಮಾಡಬಾರದು. ಇದು ಇನ್ನೊಂದು ಚಕ್ರತೀರ್ಥ ಕಥೆಯಾಗುತ್ತೆ ಎಂದು ಸರ್ಕಾರಕ್ಕೆ ಎಂ ಬಿ ಪಾಟೀಲ್ ಸಲಹೆ ನೀಡಿದ್ದಾರೆ.

 

ಸಿದ್ದರಾಮಯ್ಯರ ೭೫ನೇ ಹುಟ್ಟುಹಬ್ಬವನ್ನ ಎಲ್ಲರೂ ಒಗ್ಗಟ್ಟಿನಿಂದ ಆಚರಿಸಲಾಗುತ್ತಿದ್ದೇವೆ. ರಾಹುಲ್ ಗಾಂಧಿ ಕೂಡ ಭಾಗವಹಿಸುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಪೂರ್ವಭಾವಿ ಸಭೆಗೆ ಭಾಗಿಯಾಗಬೇಕಾದ ಅಗತ್ಯ ಇರಲಿಲ್ಲ. ಈಗಾಗಲೇ ಅವರು ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರುತ್ತಿದ್ದಾರೆ. ಸಿದ್ದರಾಮಯ್ಯ ಸಮಿತಿಯಿಂದ ಕಾರ್ಯಕ್ರಮ ಆಯೋಜನೆ ಆಗಿದೆ. ಕಾಂಗ್ರೆಸ್ ಪಕ್ಷ ಪೂರ್ತಿಯಾಗಿ ಇದರಲ್ಲಿ ಭಾಗಿಯಾಗುತ್ತೆ. ಇದು ಕಾಂಗ್ರೆಸ್ ಕಾರ್ಯಕ್ರಮ. ವ್ಯಕ್ತಿ ಪೂಜೆ ಮಾಡುತ್ತಿಲ್ಲ, ಸಿದ್ದರಾಮಯ್ಯ ಹುಟ್ಟುಹಬ್ಬ. ಇಲ್ಲಿ ಮಧುಮಗ ಅಂದ್ರೆ ಸಿದ್ದರಾಮಯ್ಯ. ಹಾಗಾಗಿ ಕಾರ್ಯಕ್ರಮದಲ್ಲಿ ಮುಖ್ಯವಾಗಿರ್ತಾರೆ. ಡಿ ಕೆ ಶಿವಕುಮಾರ್ ಕೂಡ ೭೫ ವರ್ಷಕ್ಕೆ ಕಾರ್ಯಕ್ರಮ ‌ಮಾಡಲಿ. ನನಗೂ ೭೫ ವರ್ಷ ಆದಾಗ ಕಾರ್ಯಕ್ರಮ ಮಾಡೋಣ. ಈಗ ಅರವತ್ತು ವರ್ಷ ತುಂಬಿದೆ, ಸಷ್ಠಿಪೂರ್ತಿ ಮಾಡಿಕೊಳ್ಳಲಿ. ನಾವೆಲ್ಲ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇವೆ. ಇದರಲ್ಲಿ ಯಾವುದೇ ಕಾರ್ಯಕ್ರಮ ತಪ್ಪಿಲ್ಲ ಎಂದಿದ್ದಾರೆ.

ಮಳೆ ಸಂದರ್ಭದಲ್ಲಿ ಬಿಜೆಪಿ ಚಿಂತನ ಮಂಥನ ವಿಚಾರ, ಬಿಜೆಪಿಗೆ ಸೋಲಿನ ಭೀತಿ ಆರಂಭ ಆಗಿದೆ. ಹಾಗಾಗಿ ಚಿಂತನ ಮಂಥನ ಸಭೆ ಮಾಡ್ತಾ ಇದ್ದಾರೆ. ಜನರ ಸಮಸ್ಯೆ ಬಿಜೆಪಿಗೆ ಬೇಕಿಲ್ಲ. ಈಗಾಗಲೇ ಬಿಜೆಪಿ ಸೋಲುತ್ತೆ ಅಂತ ಆಂತರಿಕ ವರದಿ ಬಂದಿದೆ. ಆದರಿಂದ ಗೆಲ್ಲವುದರ ಬಗ್ಗೆ ಸಭೆ ಮಾಡುತ್ತಿದ್ದಾರೆ. ಆದ್ರೆ ಈಗ ಸಭೆ ಮಾಡಿ ಯಾವುದೇ ಪ್ರಯೋಜನ ಇಲ್ಲ. ಪ್ರವಾಹ ಪೀಡಿತ ಸ್ಥಳಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಕಳೆದ ಬಾರಿ ಪ್ರವಾಹಕ್ಕೆ ಪರಿಹಾರ ಸಿಕ್ಕಿಲ್ಲ. ಮಾಧ್ಯಮಗಳು ಬೇಕಾದ್ರೆ ಕ್ರಾಸ್ ಚೆಕ್ ಮಾಡಿ. ಪರಿಹಾರ ಕಣ್ಣೋರಿಸುವ ತಂತ್ರ ಆಗಬಾರದು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *