Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಟೌನ್ ಕೋ-ಆಪರೇಟಿವ್ ಸೊಸೈಟಿ ಇನ್ನೂ ಅತ್ಯುನ್ನತ ಸೇವೆ ಒದಗಿಸುವಂತಾಗಲಿ : ಕೆ.ಎಸ್.ನವೀನ್

Facebook
Twitter
Telegram
WhatsApp

ಮಾಹಿತಿ ಮತ್ತು ಫೋಟೋ ಕೃಪೆ 
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ, (ಡಿ.10): ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯು 100 ವರ್ಷಗಳ ಕಾಲ ನಿರಂತರವಾಗಿ ಅನೇಕ ಸೌಲಭ್ಯ ನೀಡಿದ್ದು, ಮುಂದಿನ ದಿನಗಳಲ್ಲೂ ಸೊಸೈಟಿ ಅತ್ಯುನ್ನತ ಸೇವೆ ಒದಗಿಸುವಂತಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಆಶಯ ವ್ಯಕ್ತಪಡಿಸಿದರು.

ಚಿತ್ರದುರ್ಗ ನಗರದ ಮಾಳಪ್ಪನಹಟ್ಟಿ ರಸ್ತೆಯ ತಿರುಮಲ ಕಲ್ಯಾಣ ಮಂಟಪದಲ್ಲಿ ಶನಿವಾರ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ಯಾವುದಾದರೂ ಸಂಸ್ಥೆಯನ್ನು ಪ್ರಾರಂಭ ಮಾಡಿದರೆ ಕೇವಲ ಮೂರು ವರ್ಷ ಉತ್ತಮವಾಗಿ ನಡೆಸುವುದು ಕಷ್ಟಸಾಧ್ಯ. ಆದರೆ ಹಿರಿಯರಾದ ತಿರುಮಾಲಾಚಾರ್ಯರು 1912ರಲ್ಲಿಯೇ ಸೊಸೈಟಿ ಸ್ಥಾಪನೆ ಮಾಡಿ ಚಿತ್ರದುರ್ಗ ಜನರಿಗೆ ಅನೇಕ ಸೌಲಭ್ಯ ಒದಗಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಬ್ಯಾಂಕಿನ ಸಂಸ್ಥಾಪಕರು ದೂರದೃಷ್ಟಿಯಿಂದ ರೂ. 4 ಸಾವಿರ ಬಂಡವಾಳದಲ್ಲಿ  ಸಹಕಾರ ಸಂಘ ಸ್ಥಾಪನೆ ಮಾಡಿ, ಚಿತ್ರದುರ್ಗ ಜನರಿಗೆ ಅನುಕೂಲ ಹಾಗೂ ಹೆಚ್ಚಿನ ಲಾಭ ಮಾಡಿಕೊಟ್ಟಿರುವುದು ಶ್ಲಾಘನೀಯ ಎಂದರು.

ಸಂಘ ಕಟ್ಟುವುದು ಮುಖ್ಯವಲ್ಲ. ಅದರ ಜೊತೆಗೆ ಸಂಘ ಬೆಳೆಸುವುದು, ಸಂಘಟನಾ ಶಿಸ್ತು ಹಾಗೂ ಸದಸ್ಯರ ಶಿಸ್ತಿನಿಂದ ಸಂಘದ ಮೂಲ ಉದ್ದೇಶ ಈಡೇರಿಸಲಾಗಿದೆ. ಇಂದಿನ ಅಧ್ಯಕ್ಷರಾದ ನಿಶಾನಿ ಜಯಣ್ಣ ಅವರು, ಹಲವಾರು ವರ್ಷಗಳಿಂದ ನಿರಂತರವಾಗಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಸಂಘಕ್ಕೆ ಬೇಕಾದ ಎಲ್ಲಾ ಅಗತ್ಯಗಳನ್ನು ಪೂರ್ಣಗೊಳಿಸುವುದರ ಮೂಲಕ ತಿಂಗಳಿಗೆ 4 ರಿಂದ 5 ಲಕ್ಷದವರೆಗೂ ಬಾಡಿಗೆ ಬರುವ ರೀತಿಯಲ್ಲಿ ಸಂಘದ ಆಸ್ತಿಯನ್ನು ಅಭಿವೃದ್ಧಿ ಮಾಡಿದ್ದಾರೆ ಎಂದು ಅಭಿನಂದಿಸಿದರು.

ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಕ ನಿರ್ದೇಶಕ ಇಲ್ಯಾಸ್ ಉಲ್ಲಾ ಷರೀಪ್ ಸಹಕಾರ ವಿಷಯದ ಕುರಿತು ಉಪನ್ಯಾಸ ನೀಡಿ, ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಶತಮಾನೋತ್ಸವ ಪೂರೈಸಿರುವುದು ಒಂದು ಮೈಲುಗಲ್ಲು. ಸಾಧನೆ, ಪರಂಪರೆ, ಯಶಸ್ಸಿನ ಸಂಭ್ರಮವೇ ಶತಮಾನೋತ್ಸವ. ಬಡವರ, ಅಬಲರ, ದೀನದಲಿತರ ಬದುಕು ನೆಮ್ಮದಿಗೊಳಿಸುವ ಹೊಣೆಗಾರಿಕೆ ಸಹಕಾರ ಸಂಘಗಳದಾಗಿದೆ. ಸದಸ್ಯರ ಹಿತರಕ್ಷಣೆ ಹಾಗೂ ಸಂಘದ ಅಭಿವೃದ್ಧಿಯೇ ಸಹಕಾರ ಸಂಘದ ಮುಖ್ಯ ಧ್ಯೇಯ. ಸಹಕಾರಿ ಕ್ಷೇತ್ರ ಪವಿತ್ರ ಕ್ಷೇತ್ರವಾಗಿದೆ. ರಾಷ್ಟ್ರ ನಿರ್ಮಾಣ, ನಿರುದ್ಯೋಗ ಹಾಗೂ ಬಡತನ ನಿವಾರಣೆಗೆ ಸಹಕಾರ ಕ್ಷೇತ್ರ ಪ್ರಮುಖ ಪಾತ್ರವಹಿಸಿದೆ. ಆರ್ಥಿಕ ಅಭಿವೃದ್ಧಿ ಸಾಧನವಾಗಿ ಸಹಕಾರ ಕ್ಷೇತ್ರ ಕಾರ್ಯನಿರ್ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಚಿತ್ರದುರ್ಗ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಡಿ.ಸುಧಾಕರ್, ಮಾಜಿ ಶಾಸಕರು ಹಾಗೂ ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಜಿ.ಗೋವಿಂದಪ್ಪ, ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಲಕ್ಷ್ಮೀಕಾಂತರೆಡ್ಡಿ ಮಾತನಾಡಿದರು.

ಚಿತ್ರದುರ್ಗ ಟೌನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣ ಪ್ರಸ್ತಾವಿಕವಾಗಿ ಮಾತನಾಡಿದರು.
ಶತಮಾನೋತ್ಸವ ಸಮಾರಂಭದ ಅಂಗವಾಗಿ ಸ್ಮರಣ ಸಂಚಿಕೆ ಬಿಡುಗಡೆ, ಸಂಸ್ಥಾಪಕರ ಫೋಟೊ ಅನಾವರಣ, ಕಟ್ಟಡ ಫಲಕ ಉಧ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ   ವಿವಿಧ ಪಕ್ಷಗಳ ಮುಖಂಡರಾದ  ಎಂ.ಕೆ.  ತಾಜ್ ಪೀರ್, ಎ.ಮುರುಳಿ, ಟಿಎಪಿಎಂಸಿ ಅಧ್ಯಕ್ಷ ಮಂಜುನಾಥ್,  ಸಹಕಾರ ಸಂಘಗಳ ಉಪ ನಿಬಂಧಕ ಉಪ ನಿಬಂಧಕ ಹೆಚ್. ಮೂರ್ತಿ, ಸಹಕಾರ ಸಂಘಗಳ ಉಪ ನಿಬಂಧಕ ಟಿ.ಮಧು ಶ್ರೀನಿವಾಸ್,
ಚಿತ್ರದುರ್ಗ ಟೌನ್ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಸಿ.ಹೆಚ್. ಸೂರ್ಯಪ್ರಕಾಶ್, ನಿರ್ದೇಶಕರಾದ ಡಾ.ರಹಮತ್ ಉಲ್ಲಾ, ಬಿ.ವಿ.ಶ್ರೀನಿವಾಸಮೂರ್ತಿ, ಬಿ.ಎಂ.ನಾಗರಾಜ್ ರಾವ್ ( ಬೇದ್ರೆ), ಸೈಯದ್ ನೂರುಲ್ಲಾ, ಕೆ.ಚಿಕ್ಕಣ್ಣ, ಕೆ.ಪ್ರಕಾಶ್, ಎ.ಚಂಪಕಾ, ಎನ್.ಎಂ.ಪುಷ್ಪವಲ್ಲಿ, ಎಸ್. ತಿಮ್ಮಪ್ಪ, ವ್ಯವಸ್ಥಾಪಕ ಮಹ್ಮದ್ ನಯೀಮ್ ಸೇರಿದಂತೆ ಮತ್ತಿತರರು ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!