ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಮೇ. 09 :
ಭಾರತದ ಸೈನಿಕರು ಪಾಕಿಸ್ಥಾನದಲ್ಲಿನ ನಾಗರಿಕರಿಗೆ ಯಾವುದೇ ರೀತಿಯ ತೊಂದರೆಯನ್ನು ಮಾಡದೇ ಬರೀ ಉಗ್ರರ ಅಡಗು ತಾಣಗಳನ್ನು ಹುಡುಕಿ ಹೊಡೆಯುತ್ತಿದೆ. ನಮ್ಮ ಸೈನಿಕರಿಗೆ ನಾವುಗಳು ಬೆಂಬಲವಾಗಿ ನಿಲ್ಲಬೇಕಿದೆ. ಅಲ್ಲದೆ ಕೇಂದ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೈಯನ್ನು ಬಲ ಪಡಿಸಬೇಕಿದೆ ಎಂದು ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.
ಪಾಕಿಸ್ತಾನದ ವಿರುದ್ಧ ಭಾರತ ಮಾಡುತ್ತಿರುವ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾಗಲೆಂದು ಬಿಜೆಪಿ ಜಿಲ್ಲಾ ಘಟಕ ವತಿಯಿಂದ ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಶ್ರೀ ಬರಗೇರಮ್ಮ ದೇವಸ್ಥಾನದಲ್ಲಿ ಅಮ್ಮನವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಕಾರ್ಯಕರ್ತರು ಹಾಗೂ ಸಾರ್ವಜನಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನದಲ್ಲಿರುವ ಸುಮಾರು 9 ಉಗ್ರಗಾಮಿಗಳ ಹಡಗು ತಾಣಗಳನ್ನು ಗುರಿಯಾಗಿಸಿಕೊಂಡು ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮುಖಾಂತರ ಭಾರತದ ಸೈನಿಕರು ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನು ನೀಡಿದ್ದಾರೆ. ನಮ್ಮ ದೇಶದ ಮೂರು ಸೇನೆಗಳು ಉತ್ತಮವಾದ ಕಾರ್ಯವನ್ನು ಮಾಡುತ್ತಿವೆ ಎಂದರು.
ಭಾರತ ಮೂರು ದಿವಸದಿಂದ ನಮ್ಮ ಸೈನಿಕರು ಪಾಕಿಸ್ಥಾನದ ಉಗ್ರರ ತಾಣಗಳನ್ನು ಹುಡುಕಿ ಹೊಡೆದು ಉರುಳಿಸಿದ್ದಾರೆ. ಇದರಲ್ಲಿ ನಮ್ಮ ಸೈನಿಕರು ಉತ್ತಮವಾದ ಕಾರ್ಯವನ್ನು ಮಾಡಿದ್ದಾರೆ. ಭಾರತೀಯ ಸೇನೆ ನಮ್ಮ ಪ್ರಧಾನ ಮಂತ್ರಿ, ರಕ್ಷಣಾ ಮಂತ್ರಿ, ಗೃಹ ಮಂತ್ರಿ ಹಾಗೂ ವಿದೇಶಾಂಗ ಮಂತ್ರಿ ನೇತೃತ್ವದಲ್ಲಿ ಉತ್ತಮವಾದ ತೀರ್ಮಾನವನ್ನು ತೆಗೆದುಕೊಂಡು ಅವರಿಗೆ ಪರಿಸ್ಥಿತಿಗೆ ತಕ್ಕಂತೆ ಧಾಳಿಯನ್ನು ಮಾಡುವ ಸ್ವಾತಂತ್ರ್ಯವನ್ನು ನೀಡಿದ್ದಾರೆ. ಇದು ಉತ್ತಮವಾದ ಕಾರ್ಯವಾಗಿದೆ. ನಮ್ಮ ಸೈನಿಕರು ಪಾಕಿಸ್ಥಾನದ ಮೇಲೆ ಧಾಳಿಯನ್ನು ನಡೆಸುತ್ತಿದ್ದಾರೆ ಇದರಲ್ಲಿ ಅಲ್ಲಿನ ನಾಗರಿಕರಿಗೆ ಯಾವುದೇ ತೊಂದರೆಯಾಗದೆ ಉಗ್ರರು ಅಡಗಿರುವ ತಾಣವನ್ನು ಗುರುತು ಮಾಡು ಅವುಗಳ ಮೇಲೆ ಧಾಳಿಯನ್ನು ಮಾಡುತ್ತಿದೆ. ಮಾನವೀಯತೆಗೆ ನಮ್ಮ ದೇಶ ಬೆಲೆಯನ್ನು ನೀಡುವುದರ ಮೂಲಕ ಉಗ್ರರ ಅಡಗು ತಾಣವನ್ನು ನಾಶ ಮಾಡುತ್ತಿದೆ. ಅದರೆ ಪಾಕಿಸ್ಥಾನ ಮತ್ತೇ ತನ್ನ ಕುತಂತ್ರವನ್ನು ಮಾಡುವುದರ ಮೂಲಕ ನಮ್ಮ ದೇಶದ ಮೇಲೆ ಧಾಳಿ ಮಾಡಲು ಮುಂದಾಗಿದೆ. ಜಮ್ಮು ಕಾಶ್ಮೀರದಲ್ಲಿ ಮತ್ತೇ ಧಾಳಿಯನ್ನು ಮಾಡುವುದರ ಮೂಲಕ ಸಾರ್ವಜನಿಕರ ಮೇಲೆ ಹಲ್ಲೆಯನ್ನು ಮಾಡಿದೆ. ಗಡಿ ಪ್ರದೇಶದಲ್ಲಿನ ನಮ್ಮ ಕ್ಷಿಪಣಿಗಳು ಪಾಕಿಸ್ತಾನದ ಕ್ಷಿಪಣಿಗಳನ್ನು ಹೊಡೆದು ಉರಳಿಸಿವೆ. ಭಾರತ ದೇಶ ಯುದ್ದವನ್ನು ಮಾಡುತ್ತಿದ್ದರುನ ಸಹಾ ಮಾನವೀಯತೆಯನ್ನು ಮರೆತ್ತಿಲ್ಲ ನಮ್ಮ ಹೋರಾಟ ಏನಿನ್ನದ್ದರೂ ಉಗ್ರರ ಮೇಲೆ ಮಾತ್ರ ಸಾರ್ವಜನಿಕರ ಮೇಲ್ಲ ಎಂದು ತಿಳಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ ಕುಮಾರ್, ಖಂಜಾಚಿ ಮಾಧುರಿ ಗೀರೀಶ್, ರೈತ ಮೋರ್ಚಾದ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಜಿಲ್ಲಾ ಉಪಾಧ್ಯಕ್ಷರಾಧ ಶ್ಯಾಮಲ ಶಿವಪ್ರಕಾಶ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಯಶವಂತ ಕುಮಾರ್, ರೇಖಾ, ಸುಮಾ, ಲೀಲಾ ಶಶಿಧರ್, ತಿಪ್ಪೇಸ್ವಾಮಿ, ಮಂಜುಳಮ್ಮ, ವಿರುಪಾರ ಯಾದವ್, ಪ್ರದೀಪ್ ಕುಮಾರ್, ಮೋಹನ್, ಓಂಕಾರಪ್ಪ, ಮಾಂತೇಶ್ ಯಾದವ್, ವಸಂತ ಲಕ್ಷ್ಮಸಾಗರ್, ಹೇರಿಸ್ವಾಮಿ ಲೋಕೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.
