ಮೇ. 14 ರಂದು ಉಡುಪಿಯಲ್ಲಿ ರಾಜ್ಯ ಮಟ್ಟದ ಸಾಮರಸ್ಯ ನಡಿಗೆ ಮತ್ತು ಸಹಬಾಳ್ವೆ ಸಮಾವೇಶ : ಟಿ.ಷಫೀವುಲ್ಲಾ

ಚಿತ್ರದುರ್ಗ,(ಮೇ.11) : ರಾಜ್ಯ ಮಟ್ಟದ ಸಾಮರಸ್ಯ ನಡಿಗೆ ಮತ್ತು ಸಹಬಾಳ್ವೆ ಸಮಾವೇಶವು ಮೇ. 14 ರಂದು ಉಡುಪಿಯಲ್ಲಿ ನಡೆಯಲಿದೆ ಎಂದು ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯರಾದ ಟಿ.ಷಫೀವುಲ್ಲಾ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಸಮಾವೇಶವೂ ಯಾವುದೇ ಧರ್ಮ, ಜನಾಂಗದ ವಿರುದ್ದ ಅಲ್ಲ, ಸರ್ವ ಜನರ ಒಳಿತಿಗಾಗಿ ನಡೆಯುವ ಸಮಾವೇಶವಾಗಿದೆ. ಇದರಲ್ಲಿ ವಿವಿಧ ಧರ್ಮದ 13 ಜನ ಗುರುಗಳು ಮತ್ತು ಮೂರು ಜನ ಹೈಕೋರ್ಟನ ನ್ಯಾಯಾಧಿಶರು ಭಾಗವಹಿಸಲಿದ್ದಾರೆ.

ಚಿತ್ರದುರ್ಗದಿಂದ ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಕಾರ್ಮೀಕರು, ರೈತರು, ಒಳಗೊಂಡಂತೆ ಮೂರು ನೂರು ಜನ ಭಾಗವಹಿಸಲಿದ್ದಾರೆ ಎಂದ ಅವರು ಅಂದು ಮದ್ಯಾಹ್ನ 2 ಗಂಟೆಗೆ ಉಡುಪಿಯ ಹುತಾತ್ಮ ಚೌಕದಿಂದ ಸಾವರಸ್ಯ ನಡಿಗೆ ಪ್ರಾರಂಭವಾಗಿ ಸಂಜೆ 4 ಕಕ್ಕೆ ಕ್ರಶ್ಚಿಯನ್ ಶಾಲಾ ಮೈದಾನದಲ್ಲಿ ಸಹಬಾಳ್ವೆ ಸಮಾವೇಶ ನಡೆಯಲಿದೆ.

ವಕೀಲರ ಸಂಘದ ಅಧ್ಯಕ್ಷರಾದ ಶಿವುಯಾದವ್ ಮಾತನಾಡಿ, ಸರ್ಕಾರ ಎಲೋ ಒಂದು ಕಡೆಯಲ್ಲಿ ಕೋಮುವಾದಿಗಳಿಗೆ ಬೆಂಬಲವನ್ನು ನೀಡುತ್ತಿದೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ಇದೆ ಇಂತಹವುಗಳನ್ನು ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರ ಶಾಂತಿಯನ್ನು ಕದಡುವ ಕಾರ್ಯವನ್ನು ಮಾಡುತ್ತಿದೆ. ಕೋಮುವಾದಿ ಸರ್ಕಾರ ಇದಕ್ಕೆ ಬೆಂಬಲವನ್ನು ನೀಡುತ್ತಿದೆ. ಜಾತಿ, ಧರ್ಮ, ಜನಾಂಗದ ಮದ್ಯೆ ವಿಷ ಬೀಜವನ್ನು ಸರ್ಕಾರ ಬಿತ್ತವ ಕಾರ್ಯವನ್ನು ಮಾಡುತ್ತಿದೆ. ಶಾಂತಿಯಿಂದ ಇರುವ ರಾಜ್ಯವನ್ನು ಅಶಾಂತಿಯ ವಾತಾವರಣವನ್ನು ಮೂಡಿಸುತ್ತಿದೆ ಎಂದು ದೂರಿದರು.

ಶಿವಕುಮಾರ್ ಮಾತನಾಡಿ, ಸರ್ಕಾರ ಇಂದಿನ ಯುವ ಪೀಳಿಗೆಯಲ್ಲಿ ಧಾರ್ಮಿಕ ಭಾವನೆಯನ್ನು ಬಿತ್ತುವ ಕಾರ್ಯವನ್ನು ಮಾಡುತ್ತಿದೆ. ಇದರಿಂದ ಅವರ ಜೀವನವನ್ನು ಹಾಳು ಮಾಡುತ್ತಿದೆ. ಸರ್ಕಾರಕ್ಕೆ ಇದರ ಬೆಂಬಲ ಇದೆ ಎಂದರು.

ಟಿಪ್ಪು ಸುಲ್ತಾನ ವೇದಿಕೆಯ ಟಿಪ್ಪು ಖಾಸಿಂ ಆಲಿ, ಒಡೆಯರ್, ಸಮಾನ್ ವುಲ್ಲಾ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!