ಮೇ 30 ಮತ್ತು 31 ರಂದು ತ.ರಾ.ಸು. ವ್ಯಕ್ತಿತ್ವ ಮತ್ತು ಸಾಹಿತ್ಯ ವಿಚಾರಸಂಕಿರಣ

2 Min Read

ವರದಿ ಮತ್ತು ಫೋಟೋ : ಸುರೇಶ್ ಪಟ್ಟಣ್

ಚಿತ್ರದುರ್ಗ,(ಮೇ.29) : ಕರ್ನಾಟಕ ಸಾಹಿತ್ಯ ಅಕಾಡಮಿಯು ತ.ರಾ.ಸು. ಅವರ ಜನ್ಮಶತಮಾನೋತ್ಸವದ ಅಂಗವಾಗಿ ಇದೇ ಮೇ 30 ಮತ್ತು 31 ರಂದು ತ.ರಾ.ಸು. ವ್ಯಕ್ತಿತ್ವ ಮತ್ತು ಸಾಹಿತ್ಯ ಎಂಬ ಎರಡು ದಿನಗಳ ವಿಚಾರಸಂಕಿರಣವನ್ನು ನಗರದ ತ.ರಾ.ಸು. ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಜಿ.ವಿ.ವಸಂತ ಕುಮಾರ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ವಿಚಾರಸಂಕಿರಣವನ್ನು ನಾಡಿನ ಹಿರಿಯ ಸಾಹಿತಿಗಳಾದ ಶಾ.ಮಂ. ಕೃಷ್ಣರಾಯ ಅವರು ಉದ್ಘಾಟಿಸಲಿದ್ದು, ಹಿರಿಯ ಸಂಶೋಧಕ ಡಾ. ಬಿ. ರಾಜಶೇಖರಪ್ಪ, ತ.ರಾ.ಸು. ಅವರ ಸುಪುತ್ರಿ ಶ್ರೀಮತಿ ಪೂರ್ಣಿಮಾ ಸುಂದರ್, ದಾವಣಗೆರೆ ವಿವಿ ಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರಾದ ಎಚ್. ವಿಶ್ವನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಪಿ. ಧನಂಜಯಪ್ಪ, ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ, ಇ. ರುದ್ರಮುನಿ, ಶ್ರೀಮತಿ ಹೇಮಾವತಿ ಕುವೆಂಪು ಬಿ.ಇಡಿ, ಕಾಲೇಜಿನ ಪ್ರಾಂಶುಪಾಲ ಪ್ರೊ.ಸಂದೀಪ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಚಾರಸಂಕಿರಣದ ಅಧ್ಯಕ್ಷತೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ. ವಸಂತಕುಮಾರ್ ಅವರು ವಹಿಸಲಿದ್ದಾರೆ ಎಂದು ತಿಳಿಸಿದರು.

ಎರಡನೆಯ ದಿನದ ಗೋಷ್ಠಿಯಲ್ಲಿ ತ.ರಾ.ಸು. ಅವರ ಸಣ್ಣ ಕತೆ ಮತ್ತು ನಾಟಕಗಳ ಬಗ್ಗೆ ಡಾ. ವೆಂಕಟಗಿರಿ ದಳವಾಯಿ ಅವರು, ಪ್ರಗತಿಶೀಲ ಸಾಹಿತ್ಯ ಮತ್ತು ತ.ರಾ.ಸು. ಕುರಿತು ಪ್ರೊ. ಕವಿತಾ ರೈ ಅವರು ವಿಷಯ ಮಂಡನೆ ಮಾಡಿಲಿದ್ದು, ಚಿತ್ರದುರ್ಗದ ಇತಿಹಾಸ ಮತ್ತು ದುರ್ಗಾಸ್ತಮಾನದ ಬಗ್ಗೆ ಪ್ರೊ. ಲಕ್ಷ್ಮಣ ತೆಲಗಾವಿ ಅವರು, ಚಿತ್ರದುರ್ಗ ಮತ್ತು ತ.ರಾ.ಸು. ಕುರಿತು ಪ್ರೊ. ಕೆ. ರಾಜೀವ ಲೋಚನ ಮಾತನಾಡಲಿದ್ದಾರೆ.

ಈ ಗೋಷ್ಠಿಗಳ ಜೊತೆಗೆ ನಾಡಿನ ವಿವಿಧ ಭಾಗಗಳಿಂದ 40ಕ್ಕೂ ಹೆಚ್ಚು ಸಾಹಿತಿಗಳು, ಸಂಶೋಧಕರು, ಸಾಹಿತ್ಯ ಓದುಗರು ತರಾಸು ಅವರ ವ್ಯಕ್ತಿತ್ವ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಕುರಿತಂತೆ ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಪ್ರಬಂಧ ಮಂಡನೆ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಜೆ. ಕರಿಯಪ್ಪ ಮಾಳಿಗೆ ಅವರು ವಹಿಸಲಿದ್ದಾರೆ ಎಂದು ಹೇಳಿದರು.

ಸಮಾರೋಪ ಸಮಾರಂಭದಲ್ಲಿ ಡಾ. ಬಸವರಾಜ ಸಬರದ ಅವರು ಸಮಾರೋಪ ನುಡಿಗಳನ್ನಾಡಲಿದ್ದು, ಹಿರಿಯ ಸಾಹಿತಿಗಳಾದ ಪ್ರೊ. ಹೆಚ್. ಶ್ರೀಶೈಲ ಆರಾಧ್ಯ, ಡಾ. ರವಿ ಟಿ.ಎಸ್., ಡಾ. ಗಿರೀಶ್ ಟಿ. ಅವರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಆದ ಶ್ರೀ ಕರಿಯಪ್ಪ, ಡಾ. ಎಚ್. ಓಂಕಾರ್‍ನಾಯ್ಕ,  ಡಾ.ವಿಜಯಕುಮಾರ್ ಹೆಚ್.ಜಿ. ಮತ್ತು ಪ್ರೊ. ಕೆ. ಸಂಘಟಕರಾಗಿ ಡಾ. ಜೆ. ಕರಿಯಪ್ಪ ಮಾಳಿಗೆ, ಡಾ. ರಾಜೀವ ಲೋಚನ ಅವರುಗಳು ಉಪಸ್ಥಿತರಿರಲಿದ್ದಾರೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಿಜಿಸ್ಟರ್ ಕರಿಯಪ್ಪ, ಸಂಘಟಕರಾದ ಡಾ.ಕೆ.ಕರಿಯಪ್ಪ ಮಾಳಿಗೆ, ರಾಜೀವ ಲೋಚನ, ಡಾ.ವಿಜಯಕುಮಾರ್ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *