ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರಿಗೆ ಮಾತೃ ವಿಯೋಗ : ಮಾಜಿ ಸಚಿವ ಆಂಜನೇಯ ಸಂತಾಪ

1 Min Read

ಸುದ್ದಿಒನ್, ಚಿತ್ರದುರ್ಗ: ಆ.17 :  ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರ ಮಾತೃಶ್ರೀ ಗಂಗಮ್ಮ ರುದ್ರಪ್ಪ ಅವರ ನಿಧನಕ್ಕೆ ಮಾಜಿ ಸಚಿವ ಎಚ್.ಆಂಜನೇಯ ಅತೀವ ದುಃಖ ವ್ಯಕ್ತಪಡಿಸಿದ್ದಾರೆ.

ಹೊಳಲ್ಕೆರೆ ತಾಲೂಕು ಹಿರೇಕಂದವಾಡಿ ಗ್ರಾಮದ ಸಾಮಾನ್ಯ ಮಹಿಳೆ ಗಂಗಮ್ಮ ಸಂಕಷ್ಟಗಳ ಮಧ್ಯೆ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಆದರ್ಶ ಮಹಿಳೆಯಾಗಿದ್ದಾರೆ. ಸಾಮಾನ್ಯ ಕುಟುಂಬದ ಮಹಿಳೆಯೊಬ್ಬರು ಸಮಾಜದಲ್ಲಿ ಹೇಗೆ ಆದರ್ಶ ಬದುಕು ನಡೆಸಬಹುದು ಎಂಬುದಕ್ಕೆ ಗಂಗಮ್ಮ ಅವರ ಜೀವನ ಮಾದರಿ ಆಗಿದೆ ಎಂದು ಸ್ಮರಿಸಿರುವ ಆಂಜನೇಯ ಅವರು, ಗಂಗಮ್ಮ ಅವರ ಅಗಲಿಕೆಯಿಂದ ಕುಟುಂಬದವರಿಗೆ ಆಗಿರುವ ನೋವನ್ನು ಭರಿಸುವ ಶಕ್ತಿ ಬಸವಾದಿ ಶರಣರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks