ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.12 : ನೇಕಾರರ ಪದ್ಮಶಾಲಿ ಜನಾಂಗದ ಕುಲದೇವತೆ ಮಾರ್ಕಂಡೇಶ್ವರಸ್ವಾಮಿ ಜಯಂತಿ ಅಂಗವಾಗಿ ಭಾನುವಾರ ನಗರದಲ್ಲಿ ವಿಜೃಂಭಣೆಯಿಂದ ಮೆರವಣಿಗೆ ನಡೆಯಿತು.
ಪದ್ಮಶಾಲಿ ಬಹುತ್ತಮ ಸಮಾಜ, ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟ, ಪದ್ಮಶಾಲಿ ಯುವಕ ಸಂಘ, ಪದ್ಮಶಾಲಿ ಮಹಿಳಾ ಸಂಘ ಸಹಯೋಗದೊಂದಿಗೆ
ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಹೊರಟ ಮೆರವಣಿಗೆಯಲ್ಲಿ ನೂರಾರು ಪೂರ್ಣಕುಂಭಗಳನ್ನು ಹೊತ್ತ ಮಹಿಳೆಯರು ಗಾಂಧಿವೃತ್ತ,ಎ ಸ್.ಬಿ.ಎಂ.ವೃತ್ತ, ಒನಕೆ ಓಬವ್ವ ವೃತ್ತಕ್ಕೆ ಸಾಗಿದರು.
ಡೊಳ್ಳು, ಕುಣಿತ, ತಮಟೆ, ವೀರಗಾಸೆ ಮೆರವಣಿಗೆಯಲ್ಲಿ ಆಕರ್ಷಣೀಯವಾಗಿತ್ತು. ಸಾರೋಟಿನಲ್ಲಿ ಮಾರ್ಕಂಡೇಶ್ವರಸ್ವಾಮಿಯ ಬೃಹತ್ ಭಾವಚಿತ್ರವನ್ನು ಇರಿಸಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯುದ್ದಕ್ಕೂ ಅಲ್ಲಲ್ಲಿ ಪಟಾಕಿಗಳನ್ನು ಸಿಡಿಸಿ ಕುಣಿದು ಕುಪ್ಪಳಿಸಿದರು.
ಪದ್ಮಶಾಲಿ ಬಹುತ್ತಮ ಸಮಾಜದ ಅಧ್ಯಕ್ಷ ಬುದಾರ್ಪು ತಿಮ್ಮಪ್ಪ, ಉಪಾಧ್ಯಕ್ಷ ವರದಾ ಈ. ಭಾವನಾಮೂರ್ತಿ, ಕಾರ್ಯದರ್ಶಿ ಸೋಮ ಜಿ.ಎನ್.ಚಂದ್ರಶೇಖರಪ್ಪ,
ಸಹ ಕಾರ್ಯದರ್ಶಿ ಡಾ.ನಾರಮಂಚಿ ಎನ್.ಜಗನ್ನಾಥ್, ಖಜಾಂಚಿ ಜಾನಾ ಸೂರ್ಯನಾರಾಯಣ, ಸಂಘಟನಾ ಕಾರ್ಯದರ್ಶಿ ವಾಸೆ ಕೆ.ನಾರಾಯಣ, ನಿರ್ದೇಶಕರುಗಳಾದ ಬೈರಮುಡಿ ಹೆಚ್.ಮಂಜಪ್ಪ, ಪಲಿಮಿರಿ ಹೆಚ್.ರಾಜಶೇಖರಪ್ಪ, ಕ್ಯಾತಂ ಎನ್.ರಾಜು, ಡಾ.ಜಿಂಕಾ ಸತ್ಯನಾರಾಯಣ, ಜಾನಾ ಜಾನಕಿರಾಂ, ಶ್ರೀಮತಿ ಜಿಂಕಾ ಉಷಾದೇವಿ, ಅರವಾ ಎ.ಎನ್.ಸುರೇಶ್, ಗುರ್ರಂ ಗೋವಿಂದಪ್ಪ ಹಾಗೂ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.