ಮೈಸೂರು: ಗುಬ್ಬಿ ಶ್ರೀನಿವಾಸ್ ಮತ್ತು ಎಚ್ ಡಿ ಕುಮಾರಸ್ವಾಮಿ ನಡುವೆ ಏನು ಸರಿ ಇಲ್ಲ ಎಂಬುದು ಜಗಜ್ಜಾಹಿರಾಗಿದೆ. ಈ ಸಂಬಂಧ ಜೆಡಿಎಸ್ ಪರಿಷತ್ ಸದಸ್ಯ ಮರಿತುಬ್ಬೇಗೌಡ ಮಾತನಾಡಿದ್ದು, ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ನಡೆದಿರುವಂತ ವಿಚಾರವದು. ಅದರ ನಂತರ ಏನೇನು ಆಗಿದೆ ಎಂಬುದು ಗೊತ್ತಿಲ್ಲ. ನಾವೆಲ್ಲರೂ ಈ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದೆವು. ಮಾಹಿತಿ ಪಡೆದುಕೊಂಡು ಪ್ರತಿಕ್ರಿಯೆ ನೀಡುತ್ತೇವೆ ಎಂದಿದ್ದಾರೆ.
ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರ ಭದ್ರಕೋಟೆ ಇದ್ದರು ಕೂಡ ಅನೇಕ ಚುನಾವಣೆಗಳಲ್ಲಿ ಬೇರೆ ಬೇರೆ ವರ್ಗಕ್ಕೆ ಸೇರಿದವರು ಕೂಡ ಈ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅದೆಲ್ಲಾ ಇತಿಹಾಸದಲ್ಲಿದೆ. ರಾಜಕಾರಣದಲ್ಲಿ ಯಾವ ಜನಾಂಗಕ್ಕೂ ಭದ್ರಕೋಟೆ ಎಂಬುದು ಹೆಚ್ಚಿನ ಕಾಲ ಉಳಿಯುವುದಿಲ್ಲ. ಹಳೆ ಮೈಸೂರು ಭಾಗ ಒಕ್ಕಲಿಗರ ಭದ್ರಕೋಟೆ ಎಂಬುದನ್ನು ನಾನು ಒಪ್ಪುವುದಿಲ್ಲ. ಆದರೆ ಮಧು ಜಿ ಮಾದೇಗೌಡರ ಪರವಾಗಿ ನಾನು ಮತ ಕೇಳಿದ್ದೇನೆ ಎಂದಿದ್ದಾರೆ.
ಈ ಒಂದು ಚುನಾವಣೆಗಳು ಯಾವ ಪಕ್ಷದ ಭವಿಷ್ಯವನ್ನು ನಿರ್ಧಾರ ಮಾಡುವುದಿಲ್ಲ. ಸ್ಥಳೀಯ, ಮಹಾನಗರ ಪಾಲಿಕೆ, ವಿಧಾನಸಭೆ ಚುನಾವಣೆಗಳಂತ ಮಹತ್ತರ ಚುನಟವಣೆ ಇದಲ್ಲ. ಪದವೀಧರರು ವೋಟು ಹಾಕುವಂತ ಚುನಾವಣೆಯೇ ಆದರೂ ಮುಂದಿನ ಯಾವುದೇ ರಾಜಕೀಯ ಪಕ್ಷಗಳ ಭವಿಷ್ಯವನ್ನು ನಿರ್ಧಾರ ಮಾಡುವಂತ ಚುನಾವಣೆಗಳಲ್ಲ ಎಂದಿದ್ದಾರೆ.