ಗಾಂಜಾ ಸಾಗಾಣಿಕೆ, ಮಾರಾಟ ಆರೋಪಿಗೆ ಎರಡು ವರ್ಷ ಜೈಲುಶಿಕ್ಷೆ

suddionenews
1 Min Read

ಚಿತ್ರದುರ್ಗ, (ಜನವರಿ.24) : ಅಕ್ರಮವಾಗಿ ಗಾಂಜಾ ಸಾಗಾಣಿಕೆ ಮತ್ತು ಮಾರಾಟ ಮಾಡುತ್ತಿದ್ದ ಹಿರಿಯೂರು ತಾಲ್ಲೂಕು ರಾಮಜೋಗಿಹಳ್ಳಿ ಗ್ರಾಮದ ಕೆಂಚಪ್ಪ ಎಂಬುವರಿಗೆ ಜಿಲ್ಲಾ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ಹಾಗೂ ರೂ.25,000/- ದಂಡವನ್ನು ವಿಧಿಸಿ, ಜನವರಿ 13ರಂದು ತೀರ್ಪು ನೀಡಿದೆ ಎಂದು ಚಿತ್ರದುರ್ಗ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.

ಹಿರಿಯೂರು ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮದ ಕೆಂಚಪ್ಪ ಬಿನ್ ಲೇ.ರಂಗಪ್ಪ 70 ವರ್ಷ ಎಂಬುವರು 2018ರ ಡಿಸೆಂಬರ್ 03ರಂದು ಚಿತ್ರದುರ್ಗ ತಾಲ್ಲೂಕಿನ ಕಸಬಾ ಹೋಬಳಿ  ಕಳ್ಳಿರೊಪ್ಪ ಗ್ರಾಮದ ಹತ್ತಿರ ಸಜ್ಜನಕೆರೆ ಗ್ರಾಮದ ಕಡೆ ಹೋಗುವ ಕ್ರಾಸ್ ಬಳಿ ಅಕ್ರಮವಾಗಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದನ್ನು ಪತ್ತೆ ಹಚ್ಚಿ 1.400 ಕೆ.ಜಿ ಒಣ ಗಾಂಜಾವನ್ನು ಜಪ್ತುಪಡಿಸಿ ಎನ್‍ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣವನ್ನು ಅಬಕಾರಿ ಉಪ ನಿರೀಕ್ಷಕ ಮೊಹಮ್ಮದ್ ಸಾದತ್ ಉಲ್ಲಾ ಅವರು ದಾಖಲಿಸಿದ್ದರು. ಪ್ರಕರಣದ ತನಿಖೆಯನ್ನು ಚಿತ್ರದುರ್ಗ ವಲಯದ ಅಬಕಾರಿ ಉಪ ನಿರೀಕ್ಷಕರು (ನಿವೃತ್ತ) ಓ.ತಿಪ್ಪಯ್ಯ ಅವರು ಕೈಗೊಂಡು ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ ಎರಡು ವರ್ಷ ಜೈಲುಶಿಕ್ಷೆ ಹಾಗೂ ರೂ.25,000/- ದಂಡವನ್ನು ವಿಧಿಸಿ ಆದೇಶಿಸಿದೆ.

2022ರ ಜನವರಿ ಮಾಹೆಯಲ್ಲಿ ಅಬಕಾರಿ ಇಲಾಖೆಯಿಂದ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಒಟ್ಟು 2 ಕೆ.ಜಿ. 180 ಗ್ರಾಮ ಒಣ ಗಾಂಜಾವನ್ನು ಜಪ್ತುಪಡಿಸಿ ಇಬ್ಬರು ಆರೋಪಿಗಳನ್ನು ದಸ್ತಗಿರಿಗೊಳಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 01 ಮಾರುತಿ ಸುಜುಕಿ ಕಾರು ಮತ್ತು 01 ಹಿರೋ ಹೊಂಡಾ ಸ್ಪೆಂಡರ್ ದ್ವಿಚಕ್ರ ವಾಹನವನ್ನು ಜಪ್ತುಪಡಿಸಿ ಪ್ರಕರಣಗಳನ್ನು ಆರೋಪಿತರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿರುತ್ತದೆ ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *