ಮಾರ್ಚ್ 13 ಮತ್ತು 14 ರಂದು ತುರುವನೂರು ಅರಳಿಗನೂರು ಶರಣ ಶ್ರೀ ಬಸಪ್ಪತಾತನವರ 58 ನೇ ಪುಣ್ಯಾರಾಧನೆ

1 Min Read

 

ಸುದ್ದಿಒನ್, ಚಿತ್ರದುರ್ಗ, ಮಾರ್ಚ್,12 : ತಾಲ್ಲೂಕಿನ
ತುರುವನೂರಿನಲ್ಲಿ ಅರಳಿಗನೂರು ಶರಣ ಶ್ರೀ ಬಸಪ್ಪತಾತನವರ 58 ನೇ ಪುಣ್ಯಾರಾಧನೆ ಕಾರ್ಯಕ್ರಮ ಮಾರ್ಚ್ 13 ಮತ್ತು 14 ರಂದು ನಡೆಯಲಿದೆ.

ಮಾರ್ಚ್ 13 ರಂದು ಮಧ್ಯಾಹ್ನ 3-00 ಗಂಟೆಗೆ ತಾತನವರ ಭಾವ ಚಿತ್ರವನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿ ಮೆರವಣಿಗೆಯನ್ನು ಭಜನಾಮೇಳ, ಕರಡಿ ಮೇಳ, ವಿವಿಧ ಮಂಗಳ ವಾದ್ಯಗಳೊಂದಿಗೆ ಕಳಸ ಕನ್ನಡಿಗಳೊಂದಿಗೆ ಗಂಗಾಪೂಜೆ ನೆರವೇರಿಸಿ ಮಳೆಗಾಗಿ ತಪಸ್ಸು ಮಾಡಿದ ಶ್ರೀ ಗಂಗಾಧರ ದೇವಸ್ಥಾನದಿಂದ ಕುಂಭ ಕಳಸಗಳೊಂದಿಗೆ ಮೆರವಣಿಗೆ ವೈಭವದಿಂದ ಗ್ರಾಮದ ಮುಖ್ಯ ಬೀದಿಗಳಲ್ಲಿ ನಡೆಯುತ್ತದೆ. ಅದೇ ದಿನ ರಾತ್ರಿ ಭಜನಾ ತಂಡಗಳ ಸತ್ಸಂಗದವರಿಂದ ಭಜನೆ ಕಾರ್ಯಕ್ರಮ ನಡೆಯುತ್ತದೆ.

ಮಾರ್ಚ್ 14 ನೇ ಗುರುವಾರ ಉದಯ ಪೂರ್ವ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ತಾತನವರ ಶಿಲಾಮೂರ್ತಿಗೆ ಮಹಾಭಿಷೇಕ ಪೂಜೆ ನಂತರ ಶ್ರೀ ಸಿದ್ಧಿವಿನಾಯಕನಿಗೆ ಮತ್ತು ಐತಿಹಾಸಿಕ ಶ್ರೀ ರಾಮಲಿಂಗೇಶ್ವರ ಲಿಂಗಕ್ಕೆ ವಿಶೇಷ ಪೂಜೆ, ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗವಾಗುತ್ತದೆ.
ಮಧ್ಯಾಹ್ನ 12-00 ಗಂಟೆಗೆ “ಮಹಾದಾಸೋಹ”
ನಡೆಯುತ್ತದೆ.

ದಾಸೋಹ ದಾನಿಗಳು: ವಿ. ಗುರುಮಲ್ಲಪ್ಪ, ಕ್ಲಾಸ್ 1 ಕಂಟ್ರಾಕ್ಟರ್, ತುರುವನೂರು

ಮೆರವಣಿಗೆಯ ವಿವಿಧ ಮಂಗಳ ವಾದ್ಯಗಳ ಪ್ರಾಯೋಜಕರು:
ಶ್ರೀಮತಿ ಅನಸೂಯಮ್ಮ ನಾಗೇಂದ್ರ ಗೌಡರು, ತುರುವನೂರು

(ಅಭಿಷೇಕದ ಸೇವಾಕರ್ತರು : ಶ್ರೀಮತಿ ಸರ್ವಮಂಗಳಮ್ಮ ಚಿದಾನಂದಪ್ಪ, ಜಿ, ತುರುವನೂರು.

ಸಮಸ್ತ ಭಕ್ತರಿಗೂ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ಗುರು ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಶ್ರೀ ಶ್ರೀ ಗುರು ಶಿವಶರಣ ಶಿವಯೋಗಿ ಶ್ರೀ ಮನ್ನಿರಂಜನ ಪ್ರಣವಸ್ವರೂಪಿ ಶ್ರೀ ಬಸಪ್ಪತಾತನವರ ಮಠದ ಸೇವಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *