ಮಾರ್ಚ್ 09ರಂದು ಮ್ಯಾರಥಾನ್ ಓಟ : ಎಸ್.ಪಿ. ರಂಜಿತ್ ಕುಮಾರ್ ಬಂಡಾರು

1 Min Read

ಚಿತ್ರದುರ್ಗ. ಮಾ.06: ಜಿಲ್ಲಾ ಪೊಲೀಸ್ ಮತ್ತು ಎಸ್‍ಬಿಐ ಬ್ಯಾಂಕ್ ಅವರ ಸಹಯೋಗದಲ್ಲಿ “ನಮ್ಮ ಪೊಲೀಸ್  ನಮ್ಮ ಹೆಮ್ಮೆ” Fitness for all” & “Drugs Free Karnataka” ಎಂಬ ಘೋಷವಾಕ್ಯಗಳೊಂದಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದೇ ಮಾರ್ಚ್ 09ರಂದು ಬೆಳಿಗ್ಗೆ 7ಕ್ಕೆ ಚಿತ್ರದುರ್ಗ ನಗರದ ಡಿಎಆರ್ ಪರೇಡ್ ಮೈದಾನದಿಂದ ಸಾರ್ವಜನಿಕರಿಗೆ 5 & 10 ಕಿಲೋಮೀಟರ್‍ಗಳ ಮ್ಯಾರಥಾನ್ ಓಟ ಆಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.

 

ಈ ಮ್ಯಾರಥಾನ್ ಚಿತ್ರದುರ್ಗ ನಗರದ ಡಿ.ಎ.ಆರ್ ಪರೇಡ್ ಮೈದಾನದಿಂದ ಪ್ರಾರಂಭವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ 5 ಕಿ.ಮೀ ಮತ್ತು 10ಕಿ.ಮೀ ಗಳ ಅಂತರ ಕ್ರಮಿಸಿದ ನಂತರ ಡಿ.ಎ.ಆರ್ ಪರೇಡ್ ಮೈದಾನದಲ್ಲಿಯೇ ಮುಕ್ತಾಯವಾಗಲಿದ್ದು, ಈ ಮ್ಯಾರಥಾನ್‍ನಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುವುದು.
ಮ್ಯಾರಥಾನ್‍ನಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಸಹ ಪೊಲೀಸ್ ಇಲಾಖೆಯಿಂದ ಟೀ-ಶರ್ಟ್ ನೀಡಲಾಗುವುದು  ಹಾಗೂ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿರುತ್ತದೆ.
ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಮ್ಯಾರಥಾನ್‍ನಲ್ಲಿ ಪಾಲ್ಗೊಳ್ಳುವುದರ ಮೂಲಕ “Fitness for all” & “Drugs Free Karnataka”  ಎಂಬ ಘೋಷಣೆಗಳೊಂದಿಗೆ ಪೊಲೀಸ್  ಇಲಾಖೆಯೊಂದಿಗೆ ಕೈಜೋಡಿಸಿ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಸಹಕರಿಸಬೇಕಾಗಿ ಕೋರಿದೆ. ಮ್ಯಾರಥಾನ್‍ನಲ್ಲಿ ಪಾಲ್ಗೊಳ್ಳುವವರು ಕ್ಯೂಆರ್ ಕೋಡ್‍ನ್ನು ಸ್ಕ್ಯಾನ್ ಮಾಡುವ ಮೂಲಕ ಆನ್‍ಲೈನ್ ರಿಜಿಸ್ಟರ್ ಮಾಡಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *