ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬ. 73ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ ಅವರಿಗೆ ಗಣ್ಯರು, ಅಭಿಮಾನಿಗಳು, ಬೆಂಬಲಿಗರು ಶುಭಕೋರಿದ್ದಾರೆ. ಅದಷ್ಟೇ ಅಲ್ಲ ರಾಜ್ಯ ಬಿಜೆಪಿ ನಾಯಕರಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ ಕೂಡ ನಡೆದಿದೆ.
ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು, ಪ್ರಧಾನಿ ಮೋದಿಯವರ ಆರೋಗ್ಯ, ಆಯಸ್ಸಿನ ಹೆಚ್ಚಳಕ್ಕೆ ಪ್ರಾರ್ಥನೆ ಸಲ್ಲಿಸಿದ್ದಾರೆ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು. ಮೋದಿಗೆ ನಮ್ಮದೇ ಆದ ಬಲ ನೀಡಿ ಪ್ರೋತ್ಸಾಹಿಸಬೇಕು ಎಂದು ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಇನ್ನು ಮೋದಿ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಹಲವು ಕಾರ್ಯಕ್ರಮಗಳ ಯೋಜನೆಗೆ ಚಾಲನೆ ನೀಡುವ ಯೋಜನೆ ಹಾಕಿಕೊಂಡಿದ್ದಾರೆ. ದೆಹಲಿ ದ್ವಾರಕ ಮೆಟ್ರೋ ಸ್ಟೇಷನ್ ಗೆ ಚಾಲನೆ ನೀಡಲಾಗಿದೆ. ಬಳಿಕ ಮೆಟ್ರೋದಲ್ಲಿಯೇ ಪ್ರಯಾಣಿಕರ ಜೊತೆ ಮೋದಿ ಮಾತುಕತೆ ನಡೆಸಿದ್ದಾರೆ.
ವಿಶ್ವಕರ್ಮ ಯೋಜನೆಗಾಗಿ 13 ಸಾವಿರ ಕೋಟಿ ಮೊತ್ತದ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆಯಿಂದ ಕುಶಲಕರ್ಮಿಗಳಿಗೆ ಅನುಕೂಲವಾಗಲಿದೆ. ಇದರ ಜೊತೆಗೆ ಯಶೋಭೂಮಿ ಲೋಕಾರ್ಪಣೆಯನ್ನು ಪ್ರಧಾನಿ ಮೋದಿಯವರು ಉದ್ಘಾಟನೆ ಮಾಡಿದ್ದಾರೆ. ಯಶೋಭೂಮಿಗೆ ಚಾಲನೆ ಸಿಕ್ಕಿದೆ.
ಯಶೋಭೂಮಿ ಕನ್ವೆಷನ್ ಹಾಲ್ ತುಂಬಾ ದೊಡ್ಡಮಟ್ಟದ್ದಾಗಿದೆ. 15 ಸಮಾವೇಶ ಕೊಠಡಿಗಳನ್ನು ಹೊಂದಿದೆ. ಆಡಿಟೋರಿಯಂ, ಭವ್ಯವಾದ ಬಾಲ್ ರೂಂ ಕೂಡ ಹೊಂದಿದೆ. ದೆಹಲಿ ಏರ್ಪೋರ್ಟ್ ಹಾಗೂ ಮೆಟ್ರೋಗೂ ಸಂಪರ್ಕವಿದೆ. ಒಮ್ಮೆಗೆ 11 ಸಾವಿರ ಮಂದಿಗೆ ಆಸನದ ವ್ಯವಸ್ಥೆ ಇದೆ.